ಅಪ್ಪ – ಮಗನ ಭಾವ ತೀರಯಾನ

0
20260101_190012

theertharoopa thandeyavarige movie review

ರೇಟಿಂಗ್ : 4/5

ಚಿತ್ರ : ತೀರ್ಥರೂಪ ತಂದೆಯವರಿಗೆ

ನಿರ್ಮಾಣ : ಜೈ ಚಾಮುಡೇಶ್ವರಿ

ನಿರ್ದೇಶನ : ರಾಮೇನಹಳ್ಳಿ ಜಗನ್ನಾಥ್

ಸಂಗೀತ : ಜೋ ಕಾಸ್ಟ್

ಛಾಯಗ್ರಾಹಣ : ದೀಪಕ್ ಯರಗೇರ್

ತಾರಾಗಣ : ನಿಹಾರ್ ಮುಕೇಶ್, ರಚನಾ ಇಂದರ್, ಸಿತಾರಾ, ರಾಜೇಶ್ ನಟರಂಗ, ಅಜಿತ್ ಹಂಡೆ
ಮುಂತಾದವರು…

——————————————————————–

ರಾಮೇನಹಳ್ಳಿ ಜಗನ್ನಾಥ ಹೊಂದಿಸಿ ಬರೆಯಿರಿ ಚಿತ್ರದ ಮೂಲಕ ಫ್ಯಾಮಿಲಿ ಆಡಿಯನ್ಸ್ ಮೆಚ್ಚುಗೆ ಗಳಿಸಿದರು. ಚಿತ್ರದ ಶೀರ್ಷಿಕೆ ಹಾಗೂ ಕಥೆ ಜನರಿಗೆ ಇಷ್ಟವಾಗಿತ್ತು. ಚಿತ್ರದ ಟೈಟಲ್ ನಲ್ಲಿಯೇ ಸಿನಿಪ್ರಿಯರ ಗಮನಸೆಳೆಯುವ ರಾಮೇನಹಳ್ಳಿ ಜಗನ್ನಾಥ ಅವರು ಈಗ “ತೀರ್ಥರೂಪ ತಂದೆಯವರಿಗೆ” ಎಂಬ ವಿಭಿನ್ನ ಹೆಸರಿಟ್ಟು ಸಿನಿಮಾ ಮಾಡಿದ್ದಾರೆ.
ಚಿತ್ರವು ಬಿಡುಗಡೆ ಆಗಿದ್ದು, ಕುಟುಂಬ ಸಮೇತ ಕೂತು ನೋಡುವಂತಹ ಕಂಟೆಂಟ್ ಇರುವ ಚಿತ್ರವನ್ನು ತೆರೆಯ ಮೇಲೆ ತಂದಿದ್ದಾರೆ.

ಚಿತ್ರದ ನಾಯಕ ಪೃಥ್ವಿ ಸಂಚಾರಿ (ನಿಹಾರ್ ಮುಕೇಶ್) ಟ್ರಾವಲ್ ಬ್ಲಾಗರ್ ಸೋಶಿಯಲ್ ಮೀಡಿಯದಲ್ಲಿ ತುಂಬಾ ಫೇಮಸ್ ಆಗಿರುತ್ತಾನೆ. ತನ್ನ ಸ್ನೇಹಿತರೊಂಡನೆ ಜಾಲಿಯಾಗಿರುತ್ತಾನೆ, ತಾಯಿ ಜಾನಕಿ (ಸಿತಾರ)ಗೆ ವಿಶ್ವನಾಥ್ (ರಾಜೇಶ್ ನಟರಂಗ) ಜತೆ ಸ್ನೇಹವಿರುತ್ತದೆ. ಈ ಒಂದು ವಿಷಯಕ್ಕೆ ತಾಯಿ ಜಾನಕಿ ಹಾಗೂ ಪೃಥ್ವಿ ನಡುವೆ ಆಗಾಗ ಜಗಳ ನಡೆಯುತ್ತಿರುತ್ತದೆ.
ಈ ಮಧ್ಯೆ ನಾಯಕಿ ಅಕ್ಷರ (ರಚನಾ ಇಂದರ್) ಸೋಶಿಯಲ್ ಮೀಡಿಯದ ಮುಖಾಂತರ ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಬೆಳೆಯುತ್ತದೆ.

ಅಕ್ಷರ ಪೃಥ್ವಿಯನ್ನು ಮನೆಗೆ ಕರೆದುಕೊಂಡು ಹೋದಾಗ ಹೆಸರಾಂತ ಪತ್ರಕರ್ತ ರವಿ ರಾಮನಾಥಪುರ (ಅಜಿತ್ ಹಂಡೆ) ಅಕ್ಷರ ತಂದೆ ಎಂದು ಗೋತ್ತಾಗುತ್ತೆ,

ಪತ್ರಕರ್ತ ರವಿ ರಾಮನಾಥಪುರ ತನ್ನ ಪತ್ರಿಕೆಯಲ್ಲಿ ಒಂದು ಕಾಲೇಜಿನ ಭೌತಶಾಸ್ತ್ರ ಶಿಕ್ಷಕ ಶಿವಶಂಕರ (ರವೀಂದ್ರ ವಿಜಯ್)ನ ಮಗಳ ಲವ್ವಿ ಡೌವ್ವಿಯ ಕಾಮಪುರಾಣದ ಕಥೆ ಬರುತ್ತದೆ. ಇದರಿಂದ ಜನರಿಂದ ಅವಮಾನದ ಮಾತು ಕೇಳಿ ಮನನೊಂದು ಶಿವಶಂಕರ್ ತನ್ನ ಕುಟುಂಬವನ್ನು ಬಿಟ್ಟು ಹೋಗುತ್ತಾನೆ.

ಈ ವಿಷಯ ತಿಳಿದ ರವಿ ಗೆ ತನ್ನಿಂದ ಒಂದು ಕುಟುಂಬಕ್ಕೆ ಸಂಕಷ್ಟವಾಯಿತು ಎಂದು ಪಶ್ಚಾತಾಪಪಟ್ಟು ಶಿವಶಂಕರ ರನ್ನು ಹುಡುಕುವ ಪ್ರಯತ್ನ ಪಡುತ್ತಾರೆ. ಆಕಸ್ಮಿಕವಾಗಿ ರವಿ ಸಾವಗುತ್ತದೆ. ಆದರೆ ರವಿ ಸಾಯುವ ಮುನ್ನ ಬರೆದ ಪತ್ರ ಅಕ್ಷರ ಕೈ ಸೇರುತ್ತದೆ ಹಾಗೂ ಪೃಥ್ವಿ ಶಿವಶಂಕರ್ ನ ಮಗ ಎಂಬ ಸತ್ಯ ತಿಳಿಯುತ್ತದೆ.

ನಂತರ ತಂದೆಯನ್ನು ಹುಡಕಲು ಸಜ್ಜಗುತ್ತಾರೆ. ಪೃಥ್ವಿಗೆ ತಂದೆ ಸಿಗುತ್ತಾರ..? ಜಾನಕಿ ಮತ್ತು ವಿಶ್ವನಾಥ್ ಸ್ನೇಹ ಎಂತದು..? ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.

ಚಿತ್ರದ ನಿರೂಪಣೆ ಅಚ್ಚುಕಟ್ಟಾಗಿ ಇದ್ದು, ಸೆಂಟಿಮೆಂಟ್ ಜತೆ ಕಾಮಿಡಿ ಹಾಗೂ ಆಕ್ಷನ್ ಕೂಡ ಇದೆ. ಕೆಲವು ದೃಶ್ಯಗಳನ್ನು ನೋಡುವಾಗ ಕಣ್ಣು ಒದ್ದೆಯಾಗುತ್ತದೆ. ಇನ್ನೂ ಸಿತಾರ ನಟನೆ ಮನಮುಟ್ಟುತ್ತದೆ, ನಿಹಾರ್ ಮುಕೇಶ್ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರೆ.

ನಟ ರಾಜೇಶ್ ನಟರಂಗ ಅಭಿನಯ ಚೆನ್ನಾಗಿ ಇದ್ದು, ರಚನಾ ಇಂದರ್ ನಟನೆ ನೋಡವವರಿಗೆ ಇಷ್ಟವಾಗುತ್ತದೆ. ರವೀಂದ್ರ ವಿಜಯ್ ಅವರ ನಟನೆ ಅಧ್ಬುತವಾಗಿದ್ದು ಮನಕರಿಗಿಸುತ್ತದೆ.
ಒಟ್ಟಾರೆ ಮಾಸ್ ಸಿನಿಮಾಗಳ ಮಧ್ಯೆ ಭಾವನೆ, ಸೆಂಟಿಮೆಂಟ್ ಇರುವ ಚಿತ್ರ ಒಂದು ಬಂದಿದೆ. ಇಂಪಾದ ಸಂಗೀತದ ಜತೆ ಸುಂದರ ತಾಣಗಳನ್ನು ಚಿತ್ರದಲ್ಲಿ ನೋಡಬಹುದು.

Share

Leave a Reply

Your email address will not be published. Required fields are marked *