ಮೋಡ ಕವಿದ ವಾತಾವರಣ’ದಲ್ಲಿ ಸುನಿ ಮಾರ್ಗದ ಸಸ್ಪೆನ್ಸ್ ಲವ್ ಸ್ಟೋರಿ

0
WhatsApp Image 2026-06-27 at 11.24.21 PM

ಮನಃಶಾಸ್ತ್ರಜ್ಞನ ಪ್ರೇಮಕಥೆಗೆ ಸೈಕಲಾಜಿಕಲ್ ಥ್ರಿಲ್ಲರ್ ಸ್ಪರ್ಶ ಕೊಟ್ಟರೆ ಹೇಗಿರುತ್ತೆ? ‘ಸಿಂಪಲ್’ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನಿಮಾದ ಕಂಪ್ಲೀಟ್ ರಿವ್ಯೂ ಇಲ್ಲಿದೆ.

ರೇಟಿಂಗ್ : 4

ಚಿತ್ರ : ಮೋಡ ಕವಿದ ವಾತಾವರಣ

ನಿರ್ಮಾಣ ಸಂಸ್ಥೆ : ರಾಮ್ ಮೂವೀಸ್

ನಿರ್ದೇಶನ : ಸಿಂಪಲ್ ಸುನಿ


ತಾರಾಗಣ : ಶೀಲಂ ಸ್ವಾಮಿ, ಮೋಕ್ಷಾ ಕುಶಾಲ್, ಸಾತ್ವಿಕಾ ರಾವ್, ರಿಷಿ ಮತ್ತಿತರರು

_______________________________________

ಮನರಂಜನೆಯ ಜೊತೆಗೆ ಸಸ್ಪೆನ್ಸ್ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವ ಸಿನೆಮಾ ಪ್ರೇಕ್ಷಕರಿಗೆ ನಿರ್ದೇಶಕ ಸುನಿ ಈ ಬಾರಿ ‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಒಂದು ರೋಚಕ ಪ್ರೇಮಕಥೆಯನ್ನು ಉಣಬಡಿಸಿದ್ದಾರೆ.
ಸರಳ ತ್ರಿಕೋನ ಪ್ರೇಮಕಥೆಗೆ ವಿಭಿನ್ನ ಆಯಾಮ ನೀಡಿರುವ ಈ ಸಿನಿಮಾ ಹೇಗಿದೆ? ತಿಳಿಯೋಣ.

ಸಿನಿಮಾದ ಕಥೆಯು ಫ್ಲ್ಯಾಶ್‌ಬ್ಯಾಕ್ ಮೂಲಕ ಶುರುವಾಗುತ್ತದೆ. ಚೇರಿಶ್ (ಶೀಲಂ) ಹಾಗೂ ಸಾತ್ವಿಕಾ (ಸಾತ್ವಿಕಾ) ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿರುತ್ತಾರೆ.
ತಮ್ಮ ಬದುಕಿನ ಮುಖ್ಯವಾದ ವಿಷಯವೊಂದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಅವರಿಬ್ಬರೂ ಒಂದು ರೆಸಾರ್ಟ್ ಗೆ ಬರುತ್ತಾರೆ. ಅದೇ ಸಮಯಕ್ಕೆ ಸೌಪರ್ಣಿಕಾ (ಮೋಕ್ಷಾ ಕುಶಾಲ್) ಕೂಡ ತನಗೆ ನಿಶ್ಚಿತಾರ್ಥವಾಗಿರುವ ಹುಡುಗನ ಜೊತೆ ಅದೇ ರೆಸಾರ್ಟ್ ಗೆ ಆಗಮಿಸುತ್ತಾಳೆ. ಅಲ್ಲಿ ಚೆರಿಶ್‌ಗೆ ಸೌಪರ್ಣಿಕಾಳ ಪರಿಚಯವಾಗುತ್ತದೆ.
ಇಬ್ಬರೂ ರೆಸಾರ್ಟ್ ಸುತ್ತಾಡುತ್ತಾ ತಮ್ಮ ಹಳೆಯ ಲವ್ ಸ್ಟೋರಿ ಹಾಗೂ ಹಿನ್ನೆಲೆಯನ್ನು ಹಂಚಿಕೊಳ್ಳುತ್ತಾರೆ.

ಇಲ್ಲಿಯವರೆಗೆ ಅತ್ಯಂತ ಸರಳವಾಗಿ, ಹಾಸ್ಯಭರಿತವಾಗಿ ಸಾಗುತ್ತಿದ್ದ ಕಥೆಯ ದಿಕ್ಕು ಒಂದು ನಿಗೂಢ ಘಟನೆಯಿಂದ ಸಂಪೂರ್ಣವಾಗಿ ಬದಲಾಗುತ್ತದೆ. ಸೌಪರ್ಣಿಕಾಗೆ ಹಿಂದಿನಿಂದಲೂ ಕಾಟ ಕೊಡುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಇಲ್ಲೂ ತನ್ನ ನರಕಯಾತನೆಯನ್ನು ಮುಂದುವರಿಸುತ್ತಾನೆ.

ಆ ಅಪರಿಚಿತನ ಕಾಟ ಮಿತಿಮೀರಿದಾಗ, ಚೆರಿಶ್ ಮತ್ತು ಮೋಕ್ಷಾ ಇಬ್ಬರೂ ಆ ನಿಗೂಢ ವ್ಯಕ್ತಿಯ ಬೆನ್ನುಬೀಳುತ್ತಾರೆ. ಈ ರಹಸ್ಯದ ಹುಡುಕಾಟದ ಮಧ್ಯೆಯೇ, ಈ ಎರಡು ಜೋಡಿಗಳ ನಡುವೆ ತೀವ್ರ ಮನಸ್ತಾಪಗಳು ಉಂಟಾಗುತ್ತವೆ. ಆಯಾಗಿ ಕಾಲ ಕಳೆಯಲು ಬಂದ ಪ್ರೇಮಿಗಳ ಬದುಕಿನಲ್ಲಿ ಬಿರುಗಾಳಿ ಎದ್ದಿದ್ದೇಕೆ? ಆ ನಿಗೂಢ ವ್ಯಕ್ತಿ ಯಾರು? ಈ ತ್ರಿಕೋನ ಪ್ರೇಮಕಥೆಯ ಅಂತಿಮ ತಿರುವು ಏನು ಎಂಬುದೇ ಸಿನಿಮಾದ ಒಟ್ಟಾರೆ ಕಥೆ.

‘ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ’ ಖ್ಯಾತಿಯ ಸುನಿ, ಇಲ್ಲಿ ಕೇವಲ ರೋಮ್ಯಾಂಟಿಕ್ ಕಥೆಗೆ ಸೀಮಿತವಾಗದೆ ಸೈಕಲಾಜಿಕಲ್ ಅಂಶಗಳನ್ನು ಅಚ್ಚುಕಟ್ಟಾಗಿ ಪೋಣಿಸಿದ್ದಾರೆ.

ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ‘ಸ್ಪ್ಲಿಟ್ ಪರ್ಸನಾಲಿಟಿ’ (ಭಿನ್ನ ವ್ಯಕ್ತಿತ್ವ) ಕಲ್ಪನೆ ಇಡೀ ಸಿನಿಮಾದ ವೇಗವನ್ನು ಹೆಚ್ಚಿಸಿ, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸುತ್ತದೆ.

ಜ್ಯೂಡಾ ಸ್ಯಾಂಡಿ ಅವರ ಹಿನ್ನೆಲೆ ಸಂಗೀತ ಚಿತ್ರದ ಮೂಡ್ ಬಿಲ್ಡ್ ಮಾಡಲು ಸಹಾಯ ಮಾಡಿದೆ. ಸಂತೋಷ್ ರೈ ಪಾತಾಜೆ ಅವರ ಅದ್ಭುತ ಛಾಯಾಗ್ರಹಣ ಮಲೆನಾಡಿನ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ಶ್ರೀಮಂತಗೊಳಿಸಿದೆ.

Share

Leave a Reply

Your email address will not be published. Required fields are marked *