ದಿ ಪ್ಯಾರಡೈಸ್ ಟೀಸರ್ ಔಟ್, ಸೆಪ್ಟೆಂಬರ್ 24ಕ್ಕೆ ನಾನಿ ಸಿನಿಮಾ ರಿಲೀಸ್

0
20260807_100918.jpg

'ನ್ಯಾಚುರಲ್ ಸ್ಟಾರ್' ನಾನಿ ಅಭಿನಯದ 'ದಿ ಪ್ಯಾರಡೈಸ್' ಸ್ಫೋಟಕ ಟೀಸರ್ ಔಟ್: ಸೆಪ್ಟೆಂಬರ್ 24ಕ್ಕೆ ಗ್ರ್ಯಾಂಡ್ ರಿಲೀಸ್

ಹೈದರಾಬಾದ್: ‘ದಸರಾ’ ಚಿತ್ರದ ಬ್ಲಾಕ್‌ಬಸ್ಟರ್ ಗೆಲುವಿನ ನಂತರ ‘ನ್ಯಾಚುರಲ್ ಸ್ಟಾರ್’ ನಾನಿ ಮತ್ತು ನಿರ್ದೇಶಕ ಶ್ರೀಕಾಂತ್ ಒಡೆಲ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್-ವರ್ಲ್ಡ್ ಸಿನಿಮಾ ‘ದಿ ಪ್ಯಾರಡೈಸ್’ (The Paradise) ಮಾಸ್ ಟೀಸರ್ ಬಿಡುಗಡೆಯಾಗಿದೆ.

ಶೋಷಿತರ ಧ್ವನಿಯಾಗಿ ‘ಜಡಾಲ್’ ಗೆಟಪ್‌ನಲ್ಲಿ ನಾನಿ

ಕತ್ತಲೆ ಮತ್ತು ಹಿಂಸೆಯಿಂದ ಕೂಡಿದ ಜಗತ್ತಿನಲ್ಲಿ ದೌರ್ಜನ್ಯದ ವಿರುದ್ಧ ಹೋರಾಡುವ ‘ಜಡಾಲ್’ ಎಂಬ ಕ್ರಾಂತಿಕಾರಿ ಪಾತ್ರದಲ್ಲಿ ನಾನಿ ಸಂಪೂರ್ಣ ವಿಭಿನ್ನ ಹಾಗೂ ರಗಡ್ ಗೆಟಪ್‌ನಲ್ಲಿ ಮಿಂಚಿದ್ದಾರೆ.ಟೀಸರ್‌ನಲ್ಲಿರುವ ತೀವ್ರ ಸ್ವರೂಪದ ಜೈಲು ಫೈಟ್, ಕೊಡಲಿ ಕಾಳಗ ಹಾಗೂ ಸ್ಫೋಟದ ದೃಶ್ಯಗಳು ಅಭಿಮಾನಿಗಳಿಗೆ ರೋಮಾಂಚನ ಉಂಟುಮಾಡಿವೆ.

ಈ ಚಿತ್ರದಲ್ಲಿ ‘ನ್ಯಾಚುರಲ್ ಸ್ಟಾರ್’ ನಾನಿ ಅವರೊಂದಿಗೆ ಮೋಹನ್ ಬಾಬು, ರಾಘವ್ ಜುಯಲ್, ಕಾಯಾದು ಲೋಹರ್, ಸೊನಾಲಿ ಕುಲಕರ್ಣಿ ಹಾಗೂ ಸಂಪೂರ್ಣೇಶ್ ಬಾಬು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಸಿ.ಹೆಚ್. ಸಾಯಿ ಛಾಯಾಗ್ರಹಣ ಹಾಗೂ ಅವಿನಾಶ್ ಕೊಲ್ಲಾ ಅವರ ಪ್ರೊಡಕ್ಷನ್ ಡಿಸೈನ್ ಚಿತ್ರದ ತಾಂತ್ರಿಕ ಬಲ ಹೆಚ್ಚಿಸಿದೆ.

ಎಸ್‌ಎಲ್‌ವಿ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಚೆರುಕೂರಿ ಅವರು ಅತ್ಯಂತ ಬೃಹತ್ ವೆಚ್ಚದಲ್ಲಿ ನಿರ್ಮಿಸಿರುವ ಈ ದೃಶ್ಯ ವೈಭವದ ಚಿತ್ರವು ಬರುವ ಸೆಪ್ಟೆಂಬರ್ 24 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಎಸ್‌ಎಲ್‌ವಿ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಚೆರುಕೂರಿ ಅವರು ಅತ್ಯಂತ ಬೃಹತ್ ವೆಚ್ಚದಲ್ಲಿ ನಿರ್ಮಿಸಿರುವ ಈ ದೃಶ್ಯ ವೈಭವದ ಚಿತ್ರವು ಬರುವ ಸೆಪ್ಟೆಂಬರ್ 24 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

Share

Leave a Reply

Your email address will not be published. Required fields are marked *