ಮಾಸ್ ಕಥೆಯಲ್ಲಿ ಸುದೀಪ್ ರುದ್ರವತಾರ

0
20251226_164242

Mark Movie Review

ರೇಟಿಂಗ್ : 4 /5

ಚಿತ್ರ : ಮಾರ್ಕ್

ನಿರ್ಮಾಣ : ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್

ನಿರ್ದೇಶನ : ವಿಜಯ್ ಕಾರ್ತಿಕೇಯ

ತಾರಾಂಗಣ : ಸುದೀಪ್, ನವೀನ್ ಚಂದ್ರ, ಶೈನ್ ಟಾಮ್ ಚಾಕೊ,
ಗುರು ಸೋಮಸುದರಂ ಮುಂತಾದವರು…

————————————————————————————————————-

ವಿಜಯ್ ಕಾರ್ತಿಕೇಯ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನ ಎರಡನೇ ಸಿನಿಮಾ “ಮಾರ್ಕ್” ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಜನರ ಪಲ್ಸ್ ಅರ್ಥಮಾಡಿಕೊಂಡಿರುವ ವಿಜಯ್ ಸುದೀಪ್ ಅವರನ್ನು “ಮಾರ್ಕ್”ನಲ್ಲಿ ವಿಭಿನ್ನವಾಗಿ ತೋರಿಸುವಲ್ಲಿ ಗೆದ್ದಿದ್ದಾರೆ.

ಚಿತ್ರದಲ್ಲಿ ಸುದೀಪ್ ನಟನೆ, ಮ್ಯಾನರಿಸಂ ಹಾಗೂ ಆ್ಯಕ್ಷನ್ ಅಧ್ಬುತವಾಗಿದ್ದು, ಕಿಚ್ಚ ಅಭಿಮಾನಿಗಳಿಗೆ ರಸದೂತಣ. ಇನ್ನೂ ಮ್ಯಾಕ್ಸ್ ಹಾಗೂ ಮಾರ್ಕ್ ಕಥೆಗೂ ಯವುದೇ ಹೋಲಿಕೆಯಿಲ್ಲ.

ಭದ್ರ (ನವೀನ್ ಚಂದ್ರ) ತಮ್ಮ “ರುದ್ರ” (ವಿಕ್ರಾಂತ್)ನ ಮದುವೆಯನ್ನು ಸಚಿವ ಮಗಳ ಜತೆ ಮದುವೆ ನಿಶ್ಚರ್ಯ ಮಾಡಿರುತ್ತಾನೆ ಆದರೆ ರುದ್ರ ಮದುವೆಯ ಹಿಂದಿನ ರಾತ್ರಿ ಓಡಿಹೋಗುತ್ತಾನೆ. ತಮ್ಮನನ್ನು ಹುಡುಕುತ್ತ ಮಾರ್ಕ್ ಜೊತೆ ಯುದ್ದಕ್ಕೆ ನಿಲ್ಲುತ್ತಾನೆ.

ಮತ್ತೊಂದು ಕಡೆ ಮಾರ್ಕ್ ಅಲಿಯಸ್ ಅರ್ಜುನ್ ಮಾರ್ಕಡೇಯ (ಸುದೀಪ್) ದಕ್ಷ ಪೊಲೀಸ್ ಆಫೀಸರ್ ಆದರೆ ಅಮಾನತಿನಲ್ಲಿರುತ್ತಾನೆ. ಮಾರ್ಕ್ ತಾಯಿ(ಚಿತ್ರ ಶೈಣಿ) ಆರೈಕೆ ಮಾಡುವವರ ಮಗುವಿನ ಜತೆ ಶಾಂಪಿಗ್‌ಗೆ ಹೋದಾಗ ಚಿತ್ರಶೈಣೆ ಅವರಿಗೆ ಹಲ್ಲೆ ಮಾಡಿ ಮಗುವನ್ನು ಕಿಡ್ನಾಪ್ ಮಾಡುತ್ತಾರೆ.
ತಿಳಿಯುತ್ತದೆ ರಾಜ್ಯಾದಾದ್ಯಂತ ಒಟ್ಟು 18 ಮಕ್ಕಳು ಅಪಹರಣ ಆಗಿದ್ದಾರೆ ಎಂದು.

ಆದಿಕೇಶವ(ಶೈನ್ ಟಾಮ್) ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಒಂದು ಕೊಲೆ ಮಾಡಿ, ಕೊಲೆ ಮಾಡಿರುವ ಸಾಕ್ಷಿಯನ್ನು ನಾಶ ಮಾಡಲು ಮುಂದಾಗುತ್ತಾ ಮಾರ್ಕ್ ವಿರುದ್ದ ಸಮರ ಸಾರುತ್ತನೆ.

ಭದ್ರ “ಮಾರ್ಕ್” ವಿರುದ್ದ ಹೋರಾಡಲು ಕಾರಣವೇನು..? ಆದಿಕೇಶವ ಮಾರ್ಕ್ ವಿರುದ್ದ ಹೋರಾಡಲು ಕಾರಣವೇನು..? ಭದ್ರನಿಗೂ ಮಾರ್ಕ್ ದ್ವೇಷ ಹುಟ್ಟಲು ಕಾರಣ..? ಇವರಿಬ್ಬರನ್ನು ಎದುರಿಸಿ ಮಾರ್ಕ್ ಮಕ್ಕಳನ್ನು ಕಾಪಾಡುತ್ತಾನ..? ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.

ಚಿತ್ರವು ಶ್ರಿಮಂತವಾಗಿ ಮೂಡಿಬಂದಿದ್ದು, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಹಿನ್ನಲೆ ಸಂಗೀತ ಹೈಲಟ್ ಆಗಿದೆ. ಚಿತ್ರದಲ್ಲಿನ ಸಾಹಸ ದೃಶ್ಯಗಳು ವಿಭಿನ್ನವಾಗಿದೆ.
ಗುರುಸೋಮುಸುದರಂ, ಡ್ರಾಗನ್ ಮಂಜು ಕೆಲ ಸಾಹಸ ದೃಶ್ಯಗಳಿಗೆ ಸೀಮಿತವಾದರೆ. ಅರ್ಚನಾ ಕೊಟ್ಟಿಗೆ, ದೀಪ್ಸಿಕಾ, ಗೋಪಾಲ ಕೃಷ್ಣ ದೇಶಪಾಂಡೆ, ರೋಶಿನಿ ಪ್ರಕಾಶ್ ಕೊಟ್ಟರುವ ಪಾತ್ರವನ್ನು ಅಚ್ಚುಕಟಾಗಿ ನಿಭಾಯಿಸಿದರೆ.


Share

Leave a Reply

Your email address will not be published. Required fields are marked *