ಬ್ಯೂಟಿಯ ಎರಡನೇ ಸಾಂಗ್ ರಿಲೀಸ್
ಈ ಹಿಂದೆ 31 ಡೇಸ್ ಚಿತ್ರವನ್ನು ನಿರ್ದೇಶನ ಮಾಡಿದ್ದ ರಾಜ ರವಿಕುಮಾರ್ ಇದೀಗ ಬ್ಯೂಟಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರೆ.
ಕಲ್ಪವೃಕ್ಷ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಪಿ ಮುರಳಿ ಕೃಷ್ಣ ಅರ್ಪಿಸುತ್ತಿರುವ ಬ್ಯೂಟಿ ಚಿತ್ರದ ಎರಡನೇ ಸಾಂಗ್ ಬಿಡುಗಡೆ ಆಗಿದೆ. “ಪ್ರಿಯ ಗಂಗೆ ಪ್ರಿಯ ರಂಜನೀ“.. ಸಾಲು ಇರುವ ಹಾಡನ್ನು ಕಾರ್ಮಿಕರ ದಿನದಂದು ಕಾರ್ಮಿಕರ ಸಂಘದ ಸದಸ್ಯರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ವಿ ಮನೋಹರ್ ಸಾಹಿತ್ಯ ರಚಿಸಿ, ಸಂಗೀತ ನೀಡಿರುವ ಈ ಹಾಡನ್ನು ವಿನಾಯಕ್ ಎಸ್.ರಾವ್, ಸ್ನೇಹ ನನ್ನಿವಾಲ್ ಹಾಡಿದ್ದಾರೆ. ಮೇಲುಕೋಟೆ ಸುತ್ತಮುತ್ತ ಪ್ರದೇಶಗಳಲ್ಲಿ ಹಾಡನ್ನು ಚಿತೀಕರಿಸಲಾಗಿದೆ.
ಈಗಾಗಲೇ ಎಂಡದ ಮೇಲಾಣೆ ಸಿವ… ಸಾಂಗ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯದಲ್ಲಿ ತುಂಬಾ ವೈರಲ್ ಆಗಿದೆ.
ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಎಲ್ಲಾ ಹಾಡುಗಳನ್ನು ಕನ್ನಡದ ಗಾಯಕರೇ ಹಾಡಿರುವುದು ವಿಶೇಷ.
ರಾಜ ರವಿಕುಮಾರ್ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು, ನಾಯಕನಾಗಿ ರವಿಕಾಂತ್, ನಾಯಕಿಯಾಗಿ ಮಹಾಲಕ್ಷ್ಮಿ ಅಭಿನಯಿಸಿದ್ದಾರೆ.
ವಿರೇಶ್ ಕುಮಾರ್ ಛಾಯಾಗ್ರಾಹಣ, ಮಧು ತುಂಬಕೆರೆ ಸಂಕಲನ ಚಿತ್ರಕ್ಕಿದೆ.