ಮೇಲುಕೋಟೆಯಲ್ಲಿ ‘ಸೆಲೆಬ್ರಿಟಿ’ ಸಿನಿಮಾದ ಕಪಲ್ ಸಾಂಗ್ ಶೂಟಿಂಗ್ ಯಶಸ್ವಿ: ಹೊಸಬರ ಶ್ರಮಕ್ಕೆ ಜಾನಿ ಮಾಸ್ಟರ್ ಫಿದಾ!

0
WhatsApp Image 2026-07-08 at 11.46.31 PM

ಮೇಲುಕೋಟೆಯಲ್ಲಿ 'ಸೆಲೆಬ್ರಿಟಿ' ಸಿನಿಮಾದ ಅದ್ಧೂರಿ ಹಾಡಿನ ಚಿತ್ರೀಕರಣ!

ಸ್ಯಾಂಡಲ್‌ವುಡ್‌ನಲ್ಲಿ ಸದ್ದಿಲ್ಲದೆ ಸಿನಿರಸಿಕರ ಗಮನ ಸೆಳೆಯುತ್ತಿರುವ ಸಿನಿಮಾ ‘ಸೆಲೆಬ್ರಿಟಿ’. ಗೌರಿ ಆರ್ಟ್ಸ್ ಬ್ಯಾನರ್‌ನಡಿ ಜೆಡಿಎಸ್ ನಾಯಕ ಸಾರಾ ಮಹೇಶ್ ಹಾಗೂ ಸುಷ್ಮಾ ಅಶ್ವಿನ್ ನಿರ್ಮಿಸುತ್ತಿರುವ ಈ ಚಿತ್ರದ ಶೂಟಿಂಗ್ ಸದ್ಯ ಬಿರುಸಿನಿಂದ ಸಾಗುತ್ತಿದೆ. ಈ ಚಿತ್ರದ ಮೂಲಕ ಯುವ ಪ್ರತಿಭೆ ಅಶ್ವಿನ್ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ತಾಜಾ ಅಪ್ಡೇಟ್ ಏನೆಂದರೆ, ಐತಿಹಾಸಿಕ ಹಾಗೂ ಸುಂದರ ನಗರಿ ಮೇಲುಕೋಟೆಯಲ್ಲಿ ಚಿತ್ರದ ಪ್ರಮುಖ ರೋಮ್ಯಾಂಟಿಕ್ ಕಪಲ್ ಸಾಂಗ್ ಒಂದರ ಚಿತ್ರೀಕರಣ ಯಶಸ್ವಿಯಾಗಿ ನಡೆದಿದೆ.
ಭಾರತೀಯ ಚಿತ್ರರಂಗದ ಸ್ಟಾರ್ ಕೊರಿಯೋಗ್ರಫರ್ ಜಾನಿ ಮಾಸ್ಟರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿಗೆ ನಾಯಕ ಅಶ್ವಿನ್ ಮತ್ತು ನಾಯಕಿ ಪ್ರಿಯಾಂಕಾ ಆಚಾರ್ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಈ ವಿಶೇಷ ಸಾಂಗ್ ಶೂಟಿಂಗ್ ಬೆನ್ನಲ್ಲೇ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದೆ.

ಹಾಡಿನ ಬಗ್ಗೆ ಮಾತನಾಡಿದ ಜಾನಿ ಮಾಸ್ಟರ್, ಇದು ಅತ್ಯಂತ ಸುಂದರವಾದ ಮೆಲೋಡಿ ಸಾಂಗ್. ದೊಡ್ಡ ಸ್ಟಾರ್‌ಗಳಿಗೆ ಕೊರಿಯೋಗ್ರಫಿ ಮಾಡುವಾಗ ಅವರ ಇಮೇಜ್‌ಗೆ ತಕ್ಕಂತೆ ಯೋಚಿಸಬೇಕು. ಆದರೆ ಹೊಸಬರ ಜೊತೆ ಕೆಲಸ ಮಾಡುವಾಗ ನಮ್ಮ ಕ್ರಿಯೇಟಿವಿಟಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ. ನಾಯಕ ಅಶ್ವಿನ್ ಈ ಹಾಡಿಗಾಗಿ 4 ದಿನಗಳ ಕಾಲ ಕಠಿಣ ರಿಹರ್ಸಲ್ ಮಾಡಿದ್ದಾನೆ, ಆತನೊಬ್ಬ ಹಾರ್ಡ್ ವರ್ಕರ್. ಈ ಚಿತ್ರತಂಡ ನನಗೋಸ್ಕರ ಬರೋಬ್ಬರಿ ಒಂದೂವರೆ ವರ್ಷ ಕಾಯ್ದಿತ್ತು. ಅವರ ಈ ಪ್ರೀತಿ ಹಾಗೂ ನಂಬಿಕೆಗಾಗಿ ನಾನು ಈ ಪ್ರಾಜೆಕ್ಟ್‌ಗೆ ಕೈಜೋಡಿಸಿದೆ ಎಂದರು.

ಚಿತ್ರದ ನಾಯಕ ಅಶ್ವಿನ್ ಮಾತನಾಡಿ, ಮೇಲುಕೋಟೆಯ ಅದ್ಭುತ ಲೋಕೇಶನ್‌ನಲ್ಲಿ ಕಪಲ್ ಸಾಂಗ್ ಶೂಟ್ ಮಾಡಬೇಕೆಂಬ ಪ್ಲಾನ್ ಇತ್ತು, ಅದು ಇಂದು ಯಶಸ್ವಿಯಾಗಿದೆ. ಜಾನಿ ಮಾಸ್ಟರ್ ಮೇಲುಕೋಟೆಯಲ್ಲಿ ಕೊರಿಯೋಗ್ರಫಿ ಮಾಡುತ್ತಿರುವುದು ಇದೇ ಮೊದಲು. ಅವರ ಸ್ಟೆಪ್ಸ್‌ಗಳು ಸುಲಭವಾಗಿ ಇರುವುದಿಲ್ಲ, ಆದರೆ ಸ್ಕ್ರೀನ್ ಮೇಲೆ ನೋಡಲು ಅದ್ಭುತವಾಗಿರುತ್ತವೆ. ಸಿನಿರಸಿಕರು ಈ ಹಾಡಿನಲ್ಲಿ ಸೂಪರ್ ಹುಕ್ ಸ್ಟೆಪ್ಸ್‌ಗಳನ್ನು ನಿರೀಕ್ಷಿಸಬಹುದು. ಇದು ಹೀರೋಯಿನ್ ಅನ್ನು ಹೊಗಳುವ ಸಾಂಗ್ ಎಂದು ಖುಷಿ ಹಂಚಿಕೊಂಡರು.

ಚಿತ್ರದ ನಾಯಕಿ ಪ್ರಿಯಾಂಕಾ ಆಚಾರ್ ಮಾತನಾಡಿ, ಇಷ್ಟು ದೊಡ್ಡ ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸ ಸಿಕ್ಕಿರುವುದು ನನ್ನ ಅದೃಷ್ಟ. ಸಿನಿಮಾದಲ್ಲಿ ನಾನು ‘ಸಿರಿ’ ಎಂಬ ಯೂಟ್ಯೂಬರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಶೂಟಿಂಗ್‌ಗೂ ಮುನ್ನವೇ ವರ್ಕ್‌ಶಾಪ್ ಮಾಡಿದ್ದರಿಂದ ನಟನೆ ಸುಲಭವಾಯಿತು. ಇಂದು ನನ್ನನ್ನು ಹೊಗಳುವ ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಡ್ಯಾನ್ಸ್ ಮಾಡಿರುವುದು ಸಖತ್ ಥ್ರಿಲ್ ಕೊಟ್ಟಿದೆ ಎಂದರು.

ಈ ಚಿತ್ರದ ಮತ್ತೊಂದು ಪ್ರಮುಖ ಹೈಲೈಟ್ ಎಂದರೆ, ಒಂದು ಕಾಲದ ಸ್ಟಾರ್ ನಟಿ, ‘ಯಾರೇ ನೀನು ಚೆಲುವೆ’ ಖ್ಯಾತಿಯ ಸಂಗೀತಾ ಅವರು ವರ್ಷಗಳ ಬಳಿಕ ‘ಸೆಲೆಬ್ರಿಟಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಭರ್ಜರಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.

ಕಿರಣ್ ವಿಶ್ವನಾಥ್ ನಿರ್ದೇಶನದ ಈ ಚಿತ್ರಕ್ಕೆ ಸುರೇಶ್ ಬಾಬು ಸಿಬಿ ಪ್ರೆಸೆಂಟರ್ ಆಗಿದ್ದಾರೆ. ಇನ್ನುಳಿದಂತೆ ಚಿತ್ರದ ತಾಂತ್ರಿಕ ಬಳಗ ಹೀಗಿದೆ:

  • ಸಂಗೀತ: ಗುಮ್ಮಿನೇನಿ ವಿಜಯ್
  • ಸಾಹಿತ್ಯ: ಅನಿರುದ್ಧ್ ಶಾಸ್ತ್ರಿ
  • ಸಾಹಸ: ರವಿ ವರ್ಮಾ
  • ಕಲಾ ನಿರ್ದೇಶನ: ಗುಣ
Share

Leave a Reply

Your email address will not be published. Required fields are marked *