ಟಾಕ್ಸಿಕ್’ ಸಿನಿಮಾದ ‘ತಬಾಹಿ’ ಸಾಂಗ್ ಔಟ್, ಯಶ್-ಕಿಯಾರಾ ಬೋಲ್ಡ್ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ! ನಯನತಾರಾ ಎಂಟ್ರಿ ಸರ್ಪ್ರೈಸ್!

0
WhatsApp Image 2026-07-08 at 11.13.22 PM

ಯಶ್-ಕಿಯಾರಾ ಜೋಡಿಯ 'ತಬಾಹಿ' ಅಬ್ಬರ! 'ಟಾಕ್ಸಿಕ್' ಸಿನಿಮಾದ ಮೊದಲ ಹಾಡಿನ ಹೈಲೈಟ್ಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಮೊದಲ ವಿಡಿಯೋ ಸಾಂಗ್ ‘ತಬಾಹಿ’ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಿರುವ ಈ ಹಾಡು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದು ಟ್ರೆಂಡಿಂಗ್‌ನಲ್ಲಿದೆ.

ಏನಿದು ‘ತಬಾಹಿ’ ಕಥೆ?

ಉರ್ದು ಮತ್ತು ಹಿಂದಿಯಲ್ಲಿ ‘ತಬಾಹಿ’ ಎಂದರೆ ವಿನಾಶ ಎಂದರ್ಥ. ಸಂಗೀತ ನಿರ್ದೇಶಕ ಹಾಗೂ ಗಾಯಕ ವಿಶಾಲ್ ಮಿಶ್ರಾ ಪ್ರಕಾರ, “ಇದು ಸಾಂಪ್ರದಾಯಿಕ ಪ್ರೀತಿಯ ಹಾಡಲ್ಲ. ಭಗ್ನ ಪ್ರೀತಿ, ಸಂಪೂರ್ಣ ಶರಣಾಗತಿ ಹಾಗೂ ತಡೆಯಲಾರದ ಭಾವನೆಗಳ ತೀವ್ರತೆಯನ್ನು ಈ ಹಾಡು ಪ್ರತಿಬಿಂಬಿಸುತ್ತದೆ.”

ಹಾಡಿನ ಪ್ರಮುಖ ಹೈಲೈಟ್ಸ್:

  • ಸ್ವಾರ್ಥಿ ನಾಯಕನ ಬದುಕಿಗೆ ಪ್ರೀತಿಯಾಗಿ ಬರುವ ಹುಡುಗಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡರೆ, ಯಶ್ ರಗಡ್ ಲುಕ್‌ನಲ್ಲಿ ಪ್ರೀತಿಗೆ ಹಾತೊರೆಯುವ ಗ್ಯಾಂಗ್‌ಸ್ಟರ್ ಆಗಿ ಮಿಂಚಿದ್ದಾರೆ. ಇವರ ಬೋಲ್ಡ್ ಕೆಮಿಸ್ಟ್ರಿ ಹಾಡಿನ ಹೈಲೈಟ್
  • ಕನ್ನಡದ ವರ್ಷನ್‌ಗೆ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಲಿರಿಕ್ಸ್ ಬರೆದಿದ್ದು, ಹಾಡಿನ ತೂಕ ಹೆಚ್ಚಿಸಿದೆ.
  • ಇದು ರೆಗ್ಯುಲರ್ ಡ್ಯುಯೆಟ್ ಸಾಂಗ್ ಆಗಿರದೆ, ಕಥೆಯ ಜೊತೆ ಸಾಗುವ ಮಾಂಟೇಜ್ ಶೈಲಿಯಲ್ಲಿ ಮೂಡಿಬಂದಿದೆ. ಭಾವನಾತ್ಮಕ ದೃಶ್ಯಗಳು ಕಣ್ಣಿಗೆ ಹಬ್ಬ ನೀಡುತ್ತವೆ.
  • ಹಾಡಿನ ವಿಡಿಯೋದಲ್ಲಿ ಸೌತ್ ಸೂಪರ್ ಸ್ಟಾರ್ ನಯನತಾರಾ ಹಾಗೂ ಬಾಲಿವುಡ್ ನಟಿ ತಾರಾ ಸುತಾರಿಯಾ ಕೂಡ ಕಾಣಿಸಿಕೊಂಡಿದ್ದು, ಸಿನಿಪ್ರಿಯರಲ್ಲಿ ಕುತೂಹಲ ದುಪ್ಪಟ್ಟು ಮಾಡಿದೆ.

ಒಟ್ಟಿನಲ್ಲಿ ‘ಟಾಕ್ಸಿಕ್’ ಚಿತ್ರದ ಈ ಮೊದಲ ಝಲಕ್ ಸಿನಿಪ್ರೇಮಿಗಳ ನಡುವೆ ಭಾರೀ ಚರ್ಚೆ ಹುಟ್ಟುಹಾಕಿದ್ದು, ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಸಖತ್ ವೈರಲ್ ಆಗ್ತಿದೆ.

Share

Leave a Reply

Your email address will not be published. Required fields are marked *