ಮದ್ಯಪ್ರಿಯರಿಂದ ಚಿತ್ರದ ಶೀರ್ಷಿಕೆ ಬಿಡುಗಡೆ
ಆಸ್ಕರ್ ಕೃಷ್ಣ ನಿರ್ದೇಶನದ 8 ನೇ ಸಿನಿಮಾ
ಸ್ಯಾಂಡಲ್‌ವುಡ್‌ನಲ್ಲಿ ಕಳೆದ 20 ವರ್ಷದಿಂದ ನಿರ್ದೇಶನ ಮತ್ತು ನಟನೆ ಎರಡರಲ್ಲೂ ತೊಡಗಿಸಿಕೊಂಡಿರುವ ಆಸ್ಕರ್ ಕೃಷ್ಣ ಅವರು ಇತ್ತೀಚೆಗೆ ತಮ್ಮ ಎಂಟನೇ ಚಿತ್ರದ ಶೀರ್ಷಿಕೆಯನ್ನು ಬೆಂಗಳೂರಿನ ಉಲ್ಲಾಳದಲ್ಲಿರುವ ಬಾರ್ ಒಂದರಲ್ಲಿ ಮದ್ಯಪಾನ ಮಾಡಲು ಬಂದ ಮದ್ಯಪ್ರಿಯರಿಂದ ಬಿಡುಗಡೆ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಚಿತ್ರದ ಕಲಾವಿದರು ಹಾಗೂ ನಿರ್ಮಾಪಕರು ಭಾಗಿಯಾಗಿದರು.
ಸದಭಿರುಚಿಯ ಸಿನಮಾಗಳನ್ನು ಸ್ಯಾಂಡಲ್‌ವುಡ್‌ಗೆ ಕೊಟ್ಟಿರುವ ಆಸ್ಕರ್ ಕೃಷ್ಣ ಅವರ ಚಿತ್ರವೆಂದರೆ ಎಲ್ಲಾರಿಗೂ ಸಿನಿಪ್ರಿಯರಿಗೆ ನಿರೀಕ್ಷೆ ಜಾಸ್ತಿ ಇರುತ್ತದೆ. ಈ ಬಾರಿ ಅವರು ನಿರ್ದೇಶನ ಮಾಡುತ್ತಿರುವ ಚಿತ್ರದ ಹೆಸರು “ಕುಡುಕ ನನ್ಮಕ್ಳು” ಸಾಮಾನ್ಯವಾಗಿ ಮದ್ಯಪಾನವನ್ನು ಹೆಚ್ಚಾಗಿ ಮಾಡಿ ರ‍್ಲೆ ಅಥವಾ ಕೀಟಲೆ ಮಾಡುವವರನ್ನು “ಕುಡುಕ ನನ್ಮಕ್ಳು” ಎಂದು ಹೇಳುತ್ತೇವೆ.

ಚಿತ್ರದ ಟೈಟಲ್ ವಿಭಿನ್ನವಾಗಿದ್ದು, ಚಿತ್ರದ ಬಗ್ಗೆ ನಿರ್ದೇಶಕರನ್ನು ಕೇಳಿದಾಗ ಚಿತ್ರದ ಕಥೆ ವಿಭಿನ್ನವಾಗಿದೆ ಹಾಸ್ಯದ ಜೊತೆ ಸೆಂಟಿಮೆಂಟ್ ಇರುವ ಈ ಚಿತ್ರವನ್ನು ಫ್ಯಾಮಿಲಿ ಕೂತು ನೋಡಬಹುದು ಎಂದು ಹೇಳಿದರು. ಚಿತ್ರದಲ್ಲಿ ಮಿಮಿಕ್ರಿ ಗೋಪಿ, ಚಂದ್ರಪ್ರಭ, ವಿನೋದ್ ಗೊಬ್ರಗಾಲ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕಲಾಭೂಮಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕುಡುಕ ನನ್ನಕ್ಳು ಚಿತ್ರಕ್ಕೆ ನಿರ್ದೇಶಕರ ಸ್ನೇಹಿತರಾದ ಅರುಣ ಶೆಟ್ಟಿ, ವೈಶಾಲಿ ಮುರುಳೀಧರ್ ಕೊಟ್ಟೂರು, ಪಲ್ಲವಿ ಅರುಣ್ ಅಗ್ನಿಹೋತ್ರಿ, ಎಸ್.ಹೆಚ್ ಬಾಬು ತುಮಕೂರು, ಬಿ.ನಿಂಗರಾಜು, ಲೋಕೇಶ್ ಎಸ್, ನಾಗಮಂಗಲ ಶ್ರೀನಿವಾಸ್, ಸಿದ್ದಲಿಂಗಯ್ಯ, ಗೋವಿಂದರಾಜು ಹಾಗೂ ಮುನಿ ಆಂಜನಪ್ಪ ಬಂಡವಾಳ ಹೂಡುತ್ತಿದ್ದಾರೆ.
ಹಾಸ್ಯದ ಜತೆ ಸಮಾಜಕ್ಕೆ ಸಂದೇಶವಿರುವ ಈ ಚಿತ್ರಕ್ಕೆ ಮಂಜುಕವಿ ಸಂಗೀತ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ವೆಂಕಟ್ ರವರು ಬರೆದಿದ್ದಾರೆ.