ನೈಜಘಟನೆ ಆಧಾರಿತ ಚಿತ್ರ ರತ್ನಾಪುರ ತೆರೆಗೆ ಸಿದ್ದತೆ

0
WhatsApp Image 2025-08-09 at 12.56.03 PM

ಹಾಲೇಶ್ ಲೋಕೋರ ನಿರ್ದೇಶನದ ಚಿತ್ರ

ಲೋಕೂರ ಫಿಲ್ಮ್ಸ್ ಅಂಡ್ ಟೀಮ್ ಮತ್ತು ಆರ್ ಎಸ್ ಪಿ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ “ರತ್ನಾಪುರ” ಚಿತ್ರವನ್ನು “ಹಾಲೇಶ್ ಲೋಕೋರ” ನಿರ್ದೇಶನ ಮಾಡುವುದರ ಜತೆಗೆ ನಾಯಕನಾಗಿ ನಟಿಸಿದರೆ

ಚಿತ್ರದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಪತ್ರಿಕಾಗೋಷ್ಠಿ ಏರ್ಪಡಿಸಿತು ಈ ಸಂದರ್ಭದಲ್ಲಿ ಮಾತನಾಡಿದ ಹಾಲೇಶ್ ನಟ- ನಿರ್ದೇಶಕ ಆಗಬೇಕೆಂದು ಬೆಂಗಳೂರಿನ ಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆದು ನಂತರ ಪಿ ಶೇಷಾಂದ್ರಿ ಅವರ ಬಳಿ ಸಹಾಯಕನಾಗಿ ಕೆಲಸ ಮಾಡಿ, ನಾಗತಿಹಳ್ಳಿ ಚಂದ್ರಶೇಖರ್ ಬಳಿ ಸೆಟ್ ಬಾಯ್ ಆಗಿ ಇದೆ ನಂತರ ಲೈಟ್ ಬಾಯ್ ಆಗಿ ಸಿನಿಮಾ ರಂಗದಲ್ಲಿ ಕೆಲಸ ಮಾಡಿದೆ. ಲಾಕ್‌ಡೌನ್ ಆದಾಗ ಊರಿಗೆ ಹೋದೆ, ಮತ್ತೆ ಬೆಂಗಳೂರಿಗೆ ವಾಪಸು ಬರಲು ಆಗದೆ ಇದ್ದಾಗ, ನನ್ನ ಕನಸು ನನಸು ಮಾಡ್ಕೋಬೇಕು ಸಿನಿಮಾ ಮಾಡಲೇ ಬೇಕು ನಿರ್ಧಾರ ಮಾಡಿ. ನಮ್ಮ ಊರಿನಲ್ಲಿ ನಮ್ಮ ಸ್ನೇಹಿತರನ್ನು ಸೇರಿಸಿ ಒಂದು ತಂಡ ಕಟ್ಟಿ ಈ ಸಿನಿಮಾ ಮಾಡಿದೆ.

200 ವರ್ಷಗಳ ಹಿಂದೆ ಉತ್ತರ ಕರ್ನಾಟಕದ ಒಂದು ಪ್ರದೇಶದಲ್ಲಿ ನೈಜವಾಗಿ ನಡೆದ ನಿಗೂಢ ನಿಧಿಗಳ ಕರಾಳತೆ ಕಥೆಯನ್ನು ಸಿನಿಮಾ ಮಾಡಿದ್ದೇವೆ ಎಂದು ನಿರ್ದೇಶಕರು ಹೇಳಿದರು.

ಚಿತ್ರದಲ್ಲಿ ಪ್ರೇರಣಾ ಮತ್ತು ರೇಣುಗೋಪಿ ನಾಯಕಿಯರಾಗಿ ಬಣ್ಣಹಚ್ಚಿದ್ದು, ನೆಗಟಿವ್ ಪಾತ್ರಗಳಲ್ಲಿ ಸದ್ದು ದಡೆದ,ಸೋಮನಾಥ್ ಸುನೀಲ್, ಸಕಾರಂ ಸೇರಿದಂತೆ ಉಳಿದ ಪಾತ್ರಗಳಲ್ಲಿ ಉತ್ತರ ಕರ್ನಾಟಕದ ಹೊಸ ಕಲಾವಿದರುಗಳಾದ ಕೋಮಲ್, ಮಲ್ಲು,ರಾಮಚಂದ್ರ, ಶೇಷ, ಪಿಂಟು ಉಮರಾಣಿ, ಸಂಕೇತ್, ಕಿರಣ್, ಮಲ್ಲಪ್ಪ ತೇಲಿ,ಸಂಗಮೇಶ, ಬಾಲೇಶ್, ಅಕ್ಷಯ್ ನಟಿಸಿದ್ದಾರೆ.

ಚಿತ್ರದ ಹಾಡುಗಳಿಗೆ ಪ್ರಸನ್ನ ಭೋಜಶೆಟ್ಟರ್ ಸಂಗೀತ ನೀಡಿದ್ದು, ಹಾಡುಗಳು ಕೇಳಲು ಇಂಪಾಗಿದೆ. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ಚಿತ್ರದ ಚಿತ್ರೀಕರಣವಾಗಿದೆ. ಸದ್ದು ದಡೆದ ಛಾಯಾಗ್ರಾಹಣ, ಸಚಿನ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ.

Share

Leave a Reply

Your email address will not be published. Required fields are marked *