ಶ್ರೀ ವೀರಭದ್ರೇಶ್ವರ ಸ್ವಾಮಿಯ 7ನೇ ವರ್ಷದ ಜನ್ಮೋತ್ಸವ

0
WhatsApp Image 2025-08-20 at 11.09.37 PM

ಮಂಡ್ಯ : ಶ್ರೀ ವೀರಭದ್ರೇಶ್ವರ ಸ್ವಾಮಿಯ ಜನ್ಮೋತ್ಸವ 26/8/2025 ರಂದು ರಾಷ್ಟ್ರ ವ್ಯಾಪ್ತಿಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಅದೇ ದಿನ ಮಂಡ್ಯ ತಾಲೂಕಿನ ಬಸರಾಳು ಹೋಬಳಿಯ ರಾಯಶೆಟ್ಟಿಪುರದಲ್ಲಿ ಇದೇ ತಿಂಗಳು ಅಂದರೆ ಆಗಸ್ಟ್ 26ರಂದು ಶ್ರೀ ವೀರಭದ್ರೇಶ್ವರ ಸ್ವಾಮಿಯ 7ನೇ ವರ್ಷದ ಜನ್ಮೋತ್ಸವ ಕಾರ್ಯಕ್ರಮ ಪ್ರತಿ ವರ್ಷದಂತೆ ಅದ್ದೂರಿಯಾಗಿ ನಡೆಯುತ್ತಿದೆ.

ಮಂಡ್ಯ ಜಿಲ್ಲೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜನ್ಮೋತ್ಸವ 26/8/2025 ರಂದು ರಾಷ್ಟ್ರ ವ್ಯಾಪ್ತಿಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಸರಿ ಸುಮಾರು 900 ವರ್ಷಗಳ ಇತಿಹಾಸವುಳ್ಳ ಚೋಳರಿಂದ ಪ್ರತಿಷ್ಠಾಪನೆಗೊಂಡ ಶ್ರೀ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನವಿದೆ, ದೇವಸ್ಥಾನದ ಅರ್ಚಕರಾದ “ಪ್ರಸನ್ನ ಆರಾಧ್ಯ ದೇವರು” ಅವರು ಕಳೆದ ಆರು ವರ್ಷಗಳಿಂದ ವೀರಭದ್ರೇಶ್ವರ ಸ್ವಾಮಿಯ ಜನ್ಮೋತ್ಸವವನ್ನು ರಾಯಶೆಟ್ಟಿಪುರ ಗ್ರಾಮದ ಜನರು ಹಾಗೂ ವೀರಭದ್ರೇಶ್ವರ ಸ್ವಾಮಿಯ ಭಕ್ತವೃಂದರುಗಳ ಸಹಕಾರದಿಂದ ನಡೆಸಿಕೊಂಡು ಬಂದಿರುತ್ತಾರೆ.

ಈ ವರ್ಷವು ಕೂಡ 26ರಂದು ನಡೆಯಲಿರುವ ಜನ್ಮೋತ್ಸವದಲ್ಲಿ ಎಲ್ಲಾ ಭಕ್ತಾದಿಗಳು ಭಾಗವಹಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅರ್ಚಕರಾದ “ಪ್ರಸನ್ನ ಆರಾಧ್ಯ ದೇವರು” ವಿನಂತಿಸಿಕೊಳ್ಳುತ್ತಿದ್ದಾರೆ.

ಕಾರ್ಯಕ್ರಮದ ವಿವರಗಳು

26/8/2025 ರಂದು ಬೆಳಗ್ಗೆ 6 ಗಂಟೆಗೆ ಸ್ವಾಮಿಯವರಿಗೆ ರುದ್ರಾಭಿಷೇಕ ತದ ನಂತರ ಹೂವಿನ ಅಲಂಕಾರ ಮತ್ತು ರುದ್ರಹೋಮ, ಪಂಚಬ್ರಹ್ಮ ಹೋಮವನ್ನು ನೆರವೇರಿಸಲಾಗುವುದು. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ.
ಸಂಜೆ 6 ಗಂಟೆಗೆ ವೀರಾಗಾಸೆಯೊಂದಿಗೆ ಹಾಗೂ ಕಿರಗಂದೂರು ಶ್ರೀ ಕಾಡು ಮಹದೇಶ್ವರಸ್ವಾಮಿಬಸವ ಹಾಗೂ ಮಂಗಳವಾದ್ಯ ತಮಟೆಯೊಂದಿಗೆ ಶ್ರೀ ವೀರಭದ್ರೇಶ್ವರ ಭದ್ರಕಾಳಮ್ಮ ದೇವರ ಉತ್ಸವದ ಮರವಣಿಗೆ ನಡೆಸಲಾಗುವುದು. ರಾತ್ರಿ 9 ಗಂಟೆಗೆ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಶ್ರೀ ವೀರಭದ್ರೇಶ್ವರ ಸ್ವಾಮಿಯ
Share

Leave a Reply

Your email address will not be published. Required fields are marked *