ರೂರಲ್ ಪಿಯು ಕಾಲೇಜು ಉತ್ತಮ ಸಾಧನೆ

0
20260413_130737.jpg

2025-2026ನೇ ಸಾಲಿನ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕನಕಪುರ ರೂರಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.

ಕನಕಪುರ : 2025-2026ನೇ ಸಾಲಿನ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರೂರಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ಈ ಬಾರಿಯ ದ್ವಿತೀಯ ಪಿಯುಸಿಯಲ್ಲಿ ಶೇ.86.63% ಫಲಿತಾಂಶ ಕಾಲೇಜಿಗೆ ಬಂದಿದೆ ಎಂದು ಆರ್ ಇ ಎಸ್ ಆಧ್ಯಕ್ಷರಾದ ಹೆಚ್ ಕೆ ಶ್ರೀಕಂಠ ಅವರು ಈ ಸಂತಸದ ಸುದ್ದಿಯನ್ನು ಸಾರ್ವಜನಿಕರಿಗೆ ತಿಳಿಸಲು ಸುದ್ದಿಗೋಷ್ಠಿಯನ್ನು ಕರೆದಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹೆಚ್ ಕೆ ಶ್ರೀಕಂಠ ಅವರುಪಿಯುಸಿ ಪರಿಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಶೇ.84.07%. ವಿಜ್ಞಾನ ವಿಭಾಗದಲ್ಲಿ ಶೇ. 84.05% ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 89.2% ಫಲಿತಾಂಶವನ್ನು ನಮ್ಮ ವಿದ್ಯಾರ್ಥಿಗಳು ಪಡೆದಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಶೇ 27% ಫಲಿತಾಂಶವು ಹೆಚ್ಚಾಗಿದೆ
ಹಾಗೂ ವಿಷ್ಟು ಪ್ರಸಾದ್ ವಿದ್ಯಾರ್ಥಿ ಕಲಾವಿಭಾಗದಲ್ಲಿ 600ಕ್ಕೆ 591 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತೀ ತಂದಿದ್ದಾರೆ ಎಂದು ಹೇಳಿದರು. ನಂತರ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ರೂರಲ್ ಎಜುಕೇಶನ್ ಸೂಸೈಟಿಯಲ್ಲಿ ಕನಕಪುರ ಹಾಗೂ ಸಾತನೂರುನಲ್ಲಿ ಪಿಯುಸಿ ಕಾಲೇಜುಗಳು ಇದ್ದು, ಕನಕಪುರ ಕಾಲೇಜಿನಲ್ಲಿ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳು ಇವೆ, ಸಾತನೂರು ಗ್ರಾಮಾಂತರ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳು ಇದೆ.

ಕನಕಪುರ ಕಾಲೇಜಿನಲ್ಲಿ ಒಟ್ಟು 419 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ಅತ್ಯುತ್ತಮ ಶ್ರೇಣಿ (ಡಿಸ್ಟಿಂಕ್ಷನ್)ಯೊಂದಿಗೆ 58 ವಿದ್ಯಾರ್ಥಿಗಳು ಪಾಸಾದರೆ, ಪ್ರಥಮ ದರ್ಜೆಯಲ್ಲಿ 219 ಮತ್ತು ದ್ವಿತೀಯ ದರ್ಜೆಯಲ್ಲಿ 65 ವಿದ್ಯಾರ್ಥಿಗಳು ಮತ್ತು ಉಳಿದ ವಿದ್ಯಾರ್ಥಿಗಳು 21 ಉತ್ತೀರ್ಣರಾಗಿರುತ್ತಾರೆ.

ವಿಷ್ಣು ಪ್ರಸಾದ್ ಎಂಬ ವಿದ್ಯಾರ್ಥಿಯು ಕಲಾ ವಿಭಾಗದಲ್ಲಿ 600 ಕ್ಕೆ 591 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಹಾಗೆಯೇ ಯೋಗೇಶ್ 577, ನಿಶೀಲ 551, ವಾಣಿಜ್ಯ ವಿಭಾಗದಲ್ಲಿ ನಿಸರ್ಗ ಟಿ ಎಸ್ 582, ಮದೀನಾ ಭಾನು 581, ಹರ್ಷಿತ 578, ಇನ್ನೂ ವಿಜ್ಞಾನ ವಿಭಾಗದಲ್ಲಿ ಚೈತನ್ಯ ಎ ಬಿ 567, ಶುಭ 567, ಚುಡಾಮಣಿ 563 ಅಂಕವನ್ನು ಪಡೆಯುವುದರ ಮೂಲಕ ಕಾಲೇಜಿನ ಟಾಪರ್ ಆಗಿದ್ದಾರೆ.

ಸಾತನೂರು ಗ್ರಾಮಾಂತರ ಪದವಿಪೂರ್ವ ಕಾಲೇಜು

ಬಹುತೇಕ ಗ್ರಾಮೀಣ ಪ್ರದೇಶದಿಂದಲೇ ಬರುವ ವಿದ್ಯಾರ್ಥಿಗಳನ್ನು ಹೊಂದಿರುವ ಈ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳಿದ್ದು, ವಾಣಿಜ್ಯ ವಿಭಾಗದಲ್ಲಿ100% ಹಾಗೂ ಕಲಾ ವಿಭಾದಲ್ಲಿ 90.32 ಫಲಿತಾಂಶ ಬಂದಿದ್ದು, ಒಟ್ಟಾರೆ ಕಾಲೇಜು 95.94% ರಷ್ಟು ಫಲಿತಾಂಶ ಪಡೆದುಕೊಡಿದೆ.

Share

Leave a Reply

Your email address will not be published. Required fields are marked *