ದೇವಿ ಮಹಾತ್ಮೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯ
ಈ ಹಿಂದೆ ಮರ್ಯಾದೆ ಪ್ರಶ್ನೆ ಚಿತ್ರವನ್ನು ನಿರ್ದೇಶನ ಮಾಡಿದ ನಾಗರಾಜ ಸೋಮಯಾಜಿ ಇದೀಗ “ದೇವಿ ಮಹಾತ್ಮೆ” ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರದ ಮೂಹೂರ್ತ ಉಡುಪಿ ಜಿಲ್ಲೆಯ ಕಮಲಶಿಲೆಯ ಬ್ರಹ್ಮಿ ದೇಗುಲದಲ್ಲಿ ನೆರವೇರಿತು. ಕುಂದಪುರದ ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಿಸಿ ಇದೀಗ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ.
ಯುವಿಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರವು ಕಾಮಿಡಿ, ಥ್ರಿಲ್ಲರ್ ಜಾನರ್ ಆಗಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ನಟಿಸುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ.. “ಬಿಸಿಲಲ್ಲಿ ಕೆಲಸ ಮಾಡುವುದು ಸಾಹಸ. ಅದರಲ್ಲಿಯೂ ಕುಂದಾಪುರ ಬಿಸಿಲು ಝಳದಲ್ಲಿ ಇಡೀ ತಂಡ ಉತ್ಸಹದಿಂದ ಕೆಲಸ ಮಾಡಿದೆ.
ಕಡಿಮೆ ತಾಂತ್ರಿಕ ವರ್ಗದೊಂದಿಗೆ ನಿರ್ಮಾಪಕರಿಗೆ ಹೊರೆಯಾಗದಂತೆ ಚಿತ್ರೀಕರಣ ನಡೆಸಲಾಗಿದೆ. ಇನ್ನೂ, ನಿರ್ಮಾಪಕ ಗಾಂಧಿರಾಜನ್ ಕನ್ನಡ ಸಿನಿಮಾ ಬಗ್ಗೆ ತುಂಬಾನೇ ಆಸಕ್ತಿ ಇದ್ದು, ಖುಷಿಯಿಂದ ಶೂಟಿಂಗ್ ಸೆಟ್ ಗೆ ವಿಸಿಟ್ ಹಾಕಿದ್ದರು“ ಎಂದರು.

ಗಾಂಧಿರಾಜನ್ ನಿರ್ಮಾಣ ಮಾಡುತ್ತಿರುವ ದೇವಿ ಮಹಾತ್ಮೆ ಚಿತ್ರಕ್ಕೆ ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ ಹಾಗೂ ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ಜೊತೆಯಾಗಿದ್ದಾರೆ.
ಎಸ್ ಕೆ ರಾವ್ ಛಾಯಾಗ್ರಹಣ ಹಾಗೂ ಲಿಕಿತ್ ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನ ದೇವಿ ಮಹಾತ್ಮೆಗೆ ಇರಲಿದೆ.