ಯಾವ ಮೋಹನ ಮುರಳಿ ಕರೆಯಿತು ಟ್ರೇಲರ್ ಬಿಡುಗಡೆ
ಕನ್ನಡದಲ್ಲಿ ಶ್ವಾನ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಕಥೆ ಇರುವ ಚಿತ್ರಗಳು ಈಗಾಗಲೇ ಬಂದಿವೆ. ಇದೀಗ ಅದೇ ಸಾಲಿಗೆ ಸೇರುವ “ಯಾವ ಮೋಹನ ಮುರಳಿ ಕರೆಯಿತು” ಚಿತ್ರ ಇದೇ ಶುಕ್ರವಾರ ತೆರೆಕಾಣುತ್ತಿದೆ.
ಪ್ರಕೃತಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶರಣಪ್ಪ ಗೌರಮ್ಮ ಅವರು ನಿರ್ಮಾಣದಲ್ಲಿ ಕಥೆ, ಚಿತ್ರಕಥೆ ಬರೆದು ವಿಶ್ವಾಸ್ ಕೃಷ್ಣ ಮೊದಲ ಬಾರಿ ನಿರ್ದೇಶನ ಮಾಡಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ನಿರ್ಮಾಪಕರಾದ ಶರಣಪ್ಪ ಗೌರಮ್ಮ ಅವರ ಮಗಳು ಪ್ರಕೃತಿ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು. ನನ್ನ ಮಗಳಿಗಾಗಿ ನಾನು ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ,
“10 ದಿನ ಚಿತ್ರೀಕರಣ ಬಾಕಿ ಇರುವಾಗ ಚಿತ್ರದಲ್ಲಿ ನಟಿಸಿದ ಶ್ವಾನ “ರಾಕಿ” ಆಕಸ್ಮಿಕವಾಗಿ ಆಕ್ಸಿಡೆಂಟ್ ನಲ್ಲಿ ನಿಧನವಾಯಿತು. ಚಿಕ್ಕದಾದ “ರಾಣಾ” ನಾಯಿ ದೊಡ್ಡದಾಗುವವರೆಗೂ ಕಾದು ಕ್ಲೆಮ್ಯಾಕ್ಸ್ ಚಿತ್ರೀಕರಣ ಮಾಡಿದೇವು, ಸೆಂಟಿಮೆAಟ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಫ್ಯಾಮಿಲಿ ಕಥೆ ಈ ಚಿತ್ರದಲ್ಲಿದೆ. ಹಾಗಾಗಿ ರಿಲೀಸ್ ಸ್ವಲ್ಪ ಲೇಟಾಗಿದೆ“ ಎಂದು ನಿರ್ಮಾಪಕ ಶರಣಪ್ಪ ಗೌರಮ್ಮ ಅವರು ಹೇಳಿದ್ದರು.

“ಎಮೋಷನಲ್ ಜರ್ನಿ ಇರುವ ಈ ಚಿತ್ರವು ಪೆಟ್ ಲವರ್ಸ್ ಗೆ ತುಂಬಾ ಇಷ್ಟವಾಗುವುದಲ್ಲದೆ, ಕುಟುಂಬ ಸಮೇತ ಕೂತು ನೋಡಬಹುದಾದ ಸಿನಿಮಾ ಇದಾಗಿದೆ ಹಾಗೂ ಚಿತ್ರದ ಮುಖ್ಯ ಪಾತ್ರದಲ್ಲಿ ನಿರ್ಮಾಪಕರ ಮಗಳು ಕುಮಾರಿ ಪ್ರಕೃತಿ ಅಭಿನಯಿಸಿದ್ದಾರೆ. ಇವರು ಕೂಡ ಕಿಕ್ ಬಾಕ್ಸಿಂಗ್ ನಲ್ಲಿ ಎರಡು ಇಂಟರ್ ನ್ಯಾಷನಲ್ ಪದಕ ಪಡೆದಿದ್ದಾರೆ“ ಎಂದು ನಿರ್ದೇಶಕರು ಹೇಳಿದ್ದರು.
ಇನ್ನು ಬಾಲಕಿಯ ತಂದೆಯಾಗಿ ಮಾಧವ, ತಾಯಿಯಾಗಿ ಸ್ವಪ್ನ ಶೆಟ್ಟಿಗಾರ ಬಣ್ಣ ಹಚ್ಚಿದ್ದಾರೆ. ಪಟೇಲ್ ವರುಣ್ ರಾಜ್ ಅವರು ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಅನಿಲ ಸಿ.ಜೆ ಅವರ ಸಂಗೀತ ಹಾಗೂ ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣವಿದೆ. ಈ ಚಿತ್ರದಲ್ಲಿ ರಾಣಾ ಹಾಗೂ ರಾಕಿ ಎಂಬ ನಾಯಿಗಳು ಅಭಿನಯಿಸಿದ್ದು , ಆ ರಾಣಾನೇ ಟ್ರೇಲರ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು.