“ರಿಪ್ಪನ್ ಸ್ವಾಮಿ” ಟ್ರೇಲರ್ ಬಿಡುಗಡೆ, ಚಿತ್ರ 29 ರಂದು ರಿಲೀಸ್
ಕಿಶೋರ್ ಮೂಡಬಿದ್ರೆ ನಿರ್ದೇಶನದ ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿರುವ “ರಿಪ್ಪನ್ ಸ್ವಾಮಿ” ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಚಿತ್ರದ ಟ್ರೇಲರ್ ನೋಡಿದರೆ ಚಿತ್ರದ ಮೇಲಿನ ಕುತುಹಲ ಹೆಚ್ಚಾಗುತ್ತದೆ. ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಸುದ್ದಿಗೋಷ್ಠಿಯನ್ನು ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿತು.

ಇದುವರೆಗೂ ವಿಜಯ್ ರಾಘವೇಂದ್ರ ಅವರು ಮಾಡಿದ ಸಿನಿಮಾಗಳಿಗಿಂತ ಈ ಸಿನಿಮಾದಲ್ಲಿ ಅವರ ಪಾತ್ರ ತುಂಬಾ ಭಿನ್ನವಾಗಿದೆ. “ಈ ಹಿಂದೆ ಕಿಶೋರ್ ಮೂಡಬಿದ್ರೆ ಅವರು ವಿಜಯ್ ರಾಘವೇಂದ್ರ ಜತೆ ಮಾಲ್ಗುಡಿ ಡೇಸ್ ಸಿನಿಮಾ ಮಾಡಿದ್ದರು. ಆ ಸಮಯದಲ್ಲಿ ತಮಾಷೆಯಾಗಿ ಒಳ್ಳೆಯವನಾಗಿ ಇದ್ದು ಸಾಕಾಗಿದೆ. ಬೇರೆ ತರದ ಪಾತ್ರ ಮಾಡಬೇಕು ಎಂದು ನಿರ್ದೇಶಕರ ಬಳಿ ವಿಜಯ್ ರಾಘವೇಂದ್ರ ಅವರು ಹೇಳಿದರಂತೆ, ಈಗ ಚಿತ್ರದ ಬಗ್ಗೆ ಬಹಳ ಒಳ್ಳೆಯ ಪ್ರತಿಕ್ರಿಯೇ ಬರುತ್ತಿದೆ. ಸಮಾಧಾನ ಆಗಿದೆ. ಯಾವುದೇ ಪಾತ್ರ ಮಾಡಿದರು ಚೆನ್ನಾಗಿ ಮಾಡಿದೇಯ ಅಂಥ ಅನಿಸಿಕೊಳ್ಳ ಬೇಕು ಎಂಬ ಆಸೆ ಈ ಚಿತ್ರದ ಮೂಲಕ ಆಗಿದೆ“ ಎಂದು ವಿಜಯ್ ರಾಘವೇಂದ್ರ ಹೇಳಿದರು.
ನಾಯಕಿ ಅಶ್ವಿನಿ ಚಂದ್ರಶೇಖರ್ ಮಾತನಾಡಿ “ಚಿತ್ರದಲ್ಲಿ ಮಂಗಳ ಪಾತ್ರದಲ್ಲಿ ನಟಿಸಿದ್ದೀನಿ, ಈಗಿನ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಆಗುವಂತ ಭಾವನೆಗಳನ್ನ ಚಿತ್ರದಲ್ಲಿ ತೋರಿಸಿದ್ದಾರೆ. ಇದೊಂದು ಕಂಟೆಂಟ್ ಹಾಗೂ ಫ್ಯಾಮಿಲಿ ಓರಿಯೆಂಟೆಡ್ ಮೂವಿ“ ಎಂದರು.
ನಿರ್ದೇಶಕ ಕಿಶೋರ್ ಮೂಡಬಿದ್ರೆ ಮಾತನಾಡಿ “ಮಾಲ್ಗುಡಿ ಡೇಸ್ ಚಿತ್ರದ ಪ್ರಮೋಷನ್‌ಗೆ ಹೋಗುವಾಗ ಬೇರೆ ತರ ಸಿನಿಮಾ ಮಾಡಬೇಕೆಂದು ವಿಜಯ್ ರಾಘವೇಂದ್ರ ಅವರು ಹೇಳಿದರು ಅಲ್ಲಿಂದ ಶುರು ಆಯಿತು. ಒಂದು ಕಥೆ ಇತ್ತು ಅದನ್ನ ಡೆವಲಪ್ ಮಾಡಿ ಈ ಸಿನಿಮಾ ಮಾಡಿದ್ದು. ಮೊದಲು ಸಿನಿಮಾ ಮಾತನಾಡಬೇಕು. ಆಮೇಲೆ ನಾವು ಡೈರಕ್ಟರ್ ಮಾತನಾಡಿದರೆ ಚೆನ್ನಾಗಿರುತ್ತೆ ಎಂದು ಹೇಳುತ್ತ. ಮೊದಲಿಗೆ ಎಲ್ಲಾ ನಿರ್ಮಾಪಕರಿಗೂ ಧನ್ಯವಾಧಗಳು ನಿಮ್ಮ ಎಲ್ಲಾರ ಸಹಾಯದಿಂದ ಚಿತ್ರ ಆಗಿದೆ. ಈಗ ಟ್ರೇಲರ್ ನೋಡ ಬೇಕಾದರೆ ಯಾವ ಭಾವನೆ ಕೊಡೋತ್ತು, ಸಿನಿಮಾ ನೋಡ ಬೇಕಾದರೆ 10 ಪಟ್ಟು ಹೆಚ್ಚು ಅನುಭವವನ್ನು ಕೊಡುತ್ತೆ ಇದನ್ನು ನಾನು ನಿರ್ದೇಶಕನಾಗಿ, ಬರಹಗಾರನಾಗಿ ಜತೆಗೆ ಆಡಿಯನ್ಸ್ ಆಗಿ ಹೇಳುತ್ತಾ ಇದ್ದೀನಿ“ ಎಂದರು.
ಚಿನ್ನೇಗೌಡ್ರು ಮಾತನಾಡಿ“ರಿಪ್ಪನ್ ಸ್ವಾಮಿ ಟ್ರೇಲರ್ ನೋಡಿದಾಗ ನನಗೆ ಅನ್ನಿಸ್ತಾ ಇತ್ತು ನಾನು ಅವತ್ತು ಬಾಲ ನಟನಾಗಿ ಚಿನ್ನಾರಿಮುತ್ತ, ಕೊಟ್ರೆಶಿ ಕನಸು ಮಾಡಿದ ವಿಜಯ್ ರಾಘವೇಂದ್ರ ಇವನೇನಾ ಅನ್ನಿಸ್ತು. ಒಬ್ಬ ಕಲಾವಿದನಾಗಿ ಇರಬೇಕಾದ ಗುಣಗಳನ್ನು ಒಪ್ಪಿಕೊಂಡು ನನ್ನ ಮಗ ವಿಜಯ್ ರಾಘವೇಂದ್ರ ಈ ಮಟ್ಟಕ್ಕೆ ಬೆಳೆದಿದ್ದಾನೆ. ನನ್ ಭಾವ ರಾಜ್‌ಕುಮಾರ್ ಅವರು ಮೇಯರ್ ಮುತ್ತಣ್ಣ ಸಿನಿಮಾ ಮಾಡಿದ್ದಾರೆ. ಅದರಲ್ಲಿ ಒಂದು ಹೋಟೆಲ್ ಸೀನ್ ಬರುತ್ತೆ. ಹೋಟೆಲ್ ಯಜಮಾನ ರುಬ್ಬೋಕೆ ಬಿಡ್ತಾರೆ. ರುಬ್ಬೋಕೆ ಕೂತಿದ ವ್ಯಕ್ತಿಯ ಬಟ್ಟೆಯನ್ನು ನೋಡಿದಾಗ ವಾಂತಿ ಬರುವ ಹಾಗೇ ಆಗತ್ತ ಇದೆ. ಆದರೆ ಆತನನ್ನು ಕರೆದು ಆತನ ಬಟ್ಟೆಯನ್ನು ಹಾಕಿಕೊಂಡು ಆ ಸೀನ್ ನಟನೆ ಮಾಡಿದರು. ಯಾಕೆ ಈ ತರ ಮಾಡಿದ್ರಿ ಅಂಥ ಕೇಳಿದಾಗ ಒರಿಜಿನಲಿಟಿ ಬರಬೇಕಾಗಿದೆ ಅಂಥ ರಾಜ್‌ಕುಮಾರ್ ಅವರು ಹೇಳುದ್ರು. ಕಲಾವಿದರಿಗೆ ಪಾತ್ರಕ್ಕೆ ತಕ್ಕ ವೇಷ ಭೂಷಣ ಇರಬೇಕು. ಆಗ ಆ ಪಾತ್ರಕ್ಕೆ ನ್ಯಾಯ ಸಿಗುತ್ತದೆ. ನನ್ನ ಮಗ ಅಂತ ಹೇಳ್ತಾ ಇಲ್ಲ ರಿಪ್ಪರ್ ಸ್ವಾಮಿಯ ಪಾತ್ರವನ್ನು ಚೆನ್ನಾಗಿ ಮಾಡಿದ್ದಾನೆ. ಅದಕ್ಕೆ ನಿರ್ದೇಶಕ ಕಿಶೊರ್‌ಗೆ ಧನ್ಯವಾದ ಹೇಳಬೇಕು“ ಎಂದರು.
ಪಂಚಾಂನನ ಫಿಲಂಸ್ ಬ್ಯಾನರ್ ನಲ್ಲಿ ತಯಾರಾಗಿರುವ ಈ ಚಿತ್ರ ಇದೇ ತಿಂಗಳು 29ರಂದು ಬಿಡುಗಡೆ ಆಗುತ್ತಿದೆ. ಕೊಪ್ಪ. ಕಳಸ,ಬಾಳೆಹೊನ್ನುರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಮಲಯಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತ. ರಂಗನಾಥ್ ಸಿ ಎಂ ಛಾಯಾಗ್ರಾಹಣ, ಶಶಾಂಕ್ ನಾರಾಯಣ್ ಸಂಕಲನ ಚಿತ್ರಕ್ಕಿದೆ.