ರತ್ನಾಪುರ ಸೆಪ್ಟೆಂಬರ್ 12 ರಂದು ಬಿಡುಗಡೆ
ಹಾಲೇಶ್ ಲೋಕೋರ ಮೊದಲ ಬಾರಿಗೆ ನಿರ್ದೇಶನ ಮಾಡಿರುವ “ರತ್ನಾಪುರ” ಚಿತ್ರದ ಬಿಡುಗಡೆ ದಿನಾಂಕ ನಿಗದಿ ಆಗಿದೆ. ಆರ್ ಎಸ್ ಪಿ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರವು ಸೆಪ್ಟೆಂಬರ್ 12 ರಂದು ಬಿಡುಗಡೆ ಆಗುತ್ತಿದೆ.
ಹಾಲೇಶ್ ಅವರು ಚಿತ್ರ ನಿರ್ದೇಶನದ ಜತೆಗೆ ನಾಯಕನಾಗಿಯು ಬಣ್ಣ ಹಚ್ಚಿದರೆ. ಹಾಲೇಶ್ಗೆ ನಾಯಕಿಯಾರಾಗಿ ಪ್ರೇರಣಾ ಮತ್ತು ರೇಣುಗೋಪಿ ನಟಿಸಿದ್ದಾರೆ. “200 ವರ್ಷಗಳ ಹಿಂದೆ ಒಂದು ಪ್ರದೇಶದಲ್ಲಿ ನಡೆದಿರುವ ಘಟನೆಯನ್ನು ಆಧಾರಿಸಿ ಮಾಡಿರುವ ಸಿನಿಮಾ ಹಾಗೂ ಲೈಟಿಂಗ್ ಇಲ್ಲದೆ ಲಾಟಿನ್ ಮೂಲಕ ರಾತ್ರಿಯ ದೃಶ್ಯದ ಚಿತ್ರೀಕರಣ ಮಾಡಿರುವುದಾಗಿ ಚಿತ್ರತಂಡ” ಹೇಳಿಕೊಂಡಿದೆ.
ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸದ್ದು ದಡೆದ,ಸೋಮನಾಥ್ ಸುನೀಲ್, ಸಕಾರಂ ಸೇರಿದಂತೆ ಉಳಿದ ಪಾತ್ರಗಳಲ್ಲಿ ಉತ್ತರ ಕರ್ನಾಟಕದ ಹೊಸ ಕಲಾವಿದರುಗಳಾದ ಕೋಮಲ್, ಮಲ್ಲು,ರಾಮಚಂದ್ರ, ಶೇಷ, ಪಿಂಟು ಉಮರಾಣಿ, ಸಂಕೇತ್, ಕಿರಣ್, ಮಲ್ಲಪ್ಪ ತೇಲಿ,ಸಂಗಮೇಶ, ಬಾಲೇಶ್, ಅಕ್ಷಯ್ ನಟಿಸಿದ್ದಾರೆ.
ಪ್ರಸನ್ನ ಭೋಜಶೆಟ್ಟರ್ ಸಂಗೀತ, ಸದ್ದು ದಡೆದ ಛಾಯಾಗ್ರಾಹಣ, ಸಚಿನ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ.
