ಗಾಂಧಿ ಮತ್ತು ನೋಟು ಚಿತ್ರವು ಆಗಸ್ಟ್ 29 ಕ್ಕೆ ಬಿಡುಗಡೆ
ಯೋಗಿ ದೇವಗಂಗೆ ನಿರ್ದೇಶನ ಮಾಡಿರುವ “ಗಾಂಧಿ ಮತ್ತು ನೋಟು“ ಚಿತ್ರ ಇದೇ ತಿಂಗಳು 29ರಂದು ಬಿಡುಗಡೆ ಆಗುತ್ತಿದೆ. ಭಾವನ ಕಂಬೈನ್ಸ್ ಬ್ಯಾನರ್‌ನಲ್ಲಿ ಸುಧಾರಾಣಿ ಹೆಚ್ ಆರ್, ವೀಣಾ ಪದ್ಮನಾಭ್, ಹಾಗೂ ಬಿ ಎನ್ ಮಂಜುನಾಥ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
“ಗಾಂಧಿಜೀಯವರ ಮೌಲ್ಯ,ತತ್ವ, ಶಿಕ್ಷಣದ ಸುತ್ತ ಈ ಚಿತ್ರದ ಕಥೆಯು ನಡೆಯುತ್ತದೆ, ಸುಕ್ರಿ ಎಂಬ ಬಾಲಕಿಯ ಮೇಲೆ ಗಾಂಧಿ ಮತ್ತು ನೋಟು ಹೇಗೆಲ್ಲ ಪರಿಣಾಮ ಬೀರುತ್ತದೆ ಹಾಗೂ ಗಾಂಧಿ ಭಾವಚಿತ್ರವಿರುವ ನೋಟನ್ನು ಒಳ್ಳೆಯ ಕೆಲಸಕ್ಕಿಂತ ಕೆಟ್ಟ ಕೆಲಸಗಳಿಗೆ ಬಳಸುವುದೇ ಹೆಚ್ಚು ಗಾಂಧಿ ನೋಟನ್ನು ಸರಿಯಾಗಿ ಬಳಸಿ ಗಾಂಧಿಗೆ ಗೌರವಿಸಿ ಎನ್ನುವುದೇ” ಈ ಚಿತ್ರದ ಒಂದು ಲೈನ್ ಸ್ಟೋರಿ” ಎಂದರು ನಿರ್ದೇಶಕರು.

ಚಿತ್ರ ಸಾಹಿತಿ-ನಿರ್ದೇಶಕ ವಿ ನಾಗೇಂದ್ರಪ್ರಸಾದ್ ಪುತ್ರಿ ದಿವಿಜ ನಾಗೇಂದ್ರಪ್ರಸಾದ್ ಚಿತ್ರದಲ್ಲಿ ಸುಕ್ರಿ ಎಂಬ ಪಾತ್ರದಲ್ಲಿ ಹಾಗೂ ವಿ ನಾಗೇಂದ್ರ ಪ್ರಸಾದ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸಾಗರ,ಹೊಸನಗರ, ತುಮರ ಸುತ್ತಮುತ್ತ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ನಿರ್ದೇಶಕ ಯೋಗಿ ದೇವಗಂಗೆ ಜತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿರುವ ಗುರುಪ್ರಸಾದ್ ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದಾರೆ.
ಚಿತ್ರದ ಹಾಡುಗಳನ್ನು ವಿ. ನಾಗೇಂದ್ರಪ್ರಸಾದ್ ಬರೆದಿದ್ದು, ವಾಣಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಅಚ್ಚು ಸುರೇಶ್ ಛಾಯಾಗ್ರಹಣ, ವಸಂತಕುಮಾರ್ ಸಂಕಲನ ಚಿತ್ರಕ್ಕಿದೆ. ಚಿತ್ರವು ಇದೆ ಆಗಸ್ಟ್ 29 ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ ಪ್ರೇಕ್ಷಕ ಮಹಾಪ್ರಭುಗಳು ಚಿತ್ರಮಂದಿರಕ್ಕೆ ಬಂದು ತಮ್ಮ ಚಿತ್ರವನ್ನು ನೋಡಿ ಹರಸಿ, ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ ಎಂದು ಚಿತ್ರತಂಡ ಕೇಳಿಕೊಂಡಿದೆ.