ಕನ್ನಡದ ಕಂದೀಲು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ

0
20251004_130504

ಕೊಡಗಿನ ಯಶೋಧ ಪ್ರಕಾಶ್ ನಿದೇಶನದ “ಕಂದೀಲು” ಚಿತ್ರಕ್ಕೆ 71 ನೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದು, ಇದರ ಸಲುವಾಗಿ ಸಂತಸ ಹಾಗೂ ಎಲ್ಲಾರಿಗೂ ಕೃತಜ್ಞತೆ ಹೇಳುವ ಸಲುವಾಗಿ ಪತ್ರಿಕಾಗೋಷ್ಠಿಯನ್ನು ಚಿತ್ರತಂಡ ಏರ್ಪಡಿಸಿತು.

ಇದೇ ಸಂಧರ್ಭದಲ್ಲಿ ಮಾತನಾಡಿದ ನಿರ್ದೇಶಕಿ ಯಶೋಧ ಕೊಟ್ಟುಕತ್ತಿ “ಸುಮನ್ ನಗರ್‌ಕರ್” ನಟನೆಯ ರಂಗಪವ್ರೇಶ ಚಿತ್ರದ ಮೂಲಕ ನಿರ್ದೇಶಕಿಯಾಗಿ ಆದೆ, ಪತಿ ನನ್ನ ಸಲುವಾಗಿ ನಿರ್ಮಾಣ ಮಾಡಿದರು. ಪ್ರೇಮಾಕಾರಂತ್, ಕವಿತಾಲಂಕೇಶ್ ನಂತರ ನಾನು ಮೂರನೇ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕಿ ಅಂತ ಹೇಳಿಕೊಳ್ಳಲು ಖುಷಿಯಾಗುತ್ತದೆ.

ಅಲ್ಲದೆ ಭಾರತೀಯ ಚಿತ್ರರಂಗದಲ್ಲಿ ಮೊದಲಬಾರಿ ಒಂದೇ ಸಿನಿಮಾಕ್ಕೆ ಗಂಡ ಹೆಂಡತಿ ಪ್ರಶಸ್ತಿ ಪಡೆದುಕೊಂಡಿರುವುದು ಹೆಮ್ಮೆಯ ವಿಷಯ ಹಾಗೂ ಎರಡು ಕೊಡವ, ಎರಡು ಕನ್ನಡ ಸಿನಿಮಾ ನಿರ್ಮಾಣ ಮಾಡಿದ್ದೇನೆ ಎಂದರು.

ನಿರ್ಮಾಪಕರಾದ ಪ್ರಕಾಶ್ ಕಾರ್ಯಪ್ಪ ಮಾತನಾಡಿ “ನಾಗೇಶ್.ಎನ್ ಅವರ ‘ಅನಾಮಿಕ ಮತ್ತು ಇತೆರೆ ಕಥೆಗಳು’ ಸಂಕಲನದಿಂದ ಆಯ್ದ ಹೆಣ ಎನ್ನುವ ಕಥೆ ಕಂದೀಲು ಚಿತ್ರ ಆಯಿತು.ಅವರು ಸಮಾಜದ ವ್ಯವಸ್ಥೆಯ ಬಗ್ಗೆ ಬರೆದಿದ್ದರು. ನಾವು ಎರಡು ಟ್ರ‍್ಯಾಕ್ ಬದಲಸಿಕೊಂಡೆವು. ಸದ್ಯದಲ್ಲೆ ಸಿನಿಮಾ ಬಿಡುಗಡೆ ಮಾಡಲು ತಯಾರಿ ಸಡೆಸುತ್ತಿದ್ದೇವೆ” ಎಂದರು.

ಛಾಯಾಗ್ರಾಹಕ ಪಿ.ವಿ.ಆರ್.ಸ್ವಾಮಿ ಕೆಲಸ ಮಾಡಿರುವ ಎರಡು ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ಖುಷಿಕೊಟ್ಟಿದೆ ಎಂದರು. ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಾಂತಾರ’ ಖ್ಯಾತಿಯ ಪ್ರಭಾಕರ.ಬ.ಕುಂದರ, ವನಿತಾರಾಜೇಶ್ ಅವರು ಚಿತ್ರದ ಚಿತ್ರೀಕರಣದಲ್ಲಿ ಆದ ಅನುಭವವನನು ಹಂಚಿಕೊಂಡರು.
ಇನ್ನೂ ಉಳಿದ ಪಾತ್ರಗಳಲ್ಲಿ ಖುಷಿಕಾವೇರಮ್ಮ, ವೆಂಕಟೇಶ್‌ಪ್ರಸಾದ್, ಗುರುತೇಜಸ್, ಚಂದ್ರಕಾಂತ್, ರಮೇಶ್ ಮತ್ತು ಸಂಗೀತ ಸಂಯೋಜಕ ಶ್ರೀಸುರೇಶ್ ಸೇರಿದಂತೆ ತಂತ್ರಜ್ಞರು ಹಾಜರಿದರು.

VIDEO LINK


Share

Leave a Reply

Your email address will not be published. Required fields are marked *