ಶರತ್ ಮತ್ತು ಶರಧಿ ಕಿರುಚಿತ್ರ ಸುದ್ದಿಗೋಷ್ಟಿ
ಎಂ ಜಗದೀಶ್ ಅವರು ಹೊಸದೊಂದು ಪ್ರಯೋಗ ಮಾಡಿದ್ದಾರೆ ಅದೇನೆಂದರೆ ರಿಯಲ್ ಅಂದ ದಂಪತಿಗಳನ್ನು ಹಾಕಿಕೊಂಡು “ಶರತ್ ಮತ್ತು ಶರಧಿ” ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಎಂ ಜಗದೀಶ್ ಅವರು “ಏಪ್ರಿಲ್‌ನ ಹಿಮಬಿಂದು” ಚಿತ್ರವನ್ನು ನಿರ್ದೇಶನ ಮಾಡಿದ್ದಾರು. ಟಾಕ್‌ಗುರು ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಗಣೇಶ್ ಬಿ ಎಂ ನಿರ್ಮಾಣ ಮಾಡಿದ್ದು, ಎಂ ಜಗದೀಶ್ ನಿರ್ಮಾಣದ ಪಾಲುದಾರರಾಗಿದ್ದಾರೆ.
ಶರತ್ ಮತ್ತು ಶರಧಿ ನಾಯಕ-ನಾಯಕಿಯಾರಾಗಿ ವಿರೇಶ್ ಮತ್ತು ಅಶ್ವಿನಿ ಅಂಗಡಿ ನಟಿಸಿದ್ದಾರೆ. ಕೇವಲ ಮೂರು ಗಂಟೆಗಳಲ್ಲಿ ಕಿರುಚಿತ್ರಕ್ಕೆ ವಿರೇಶ್ ದಂಪತಿಗಳು ಡಬ್ಬಿಂಗ್ ಮಾಡಿದ್ದಾರೆ ಹಾಗೂ ವಿಷಯ ಚೆನ್ನಾಗಿರುವುದರಿಂದ ದತ್ತಣ್ಣ ಸರ್ ಯಾವುದೇ ಸಂಭಾವನೆ ಪಡೆಯದೆ ನಟಿಸಿದ್ದಾರೆ, ಬೇರೆ ಭಾಷೆಗಳಿಗೆ ಕಿರುಚಿತ್ರ ಡಬ್ ಆಗುತ್ತಿದೆ ಎಂದು ನಿರ್ದೇಶಕರು ಹೇಳಿದ್ದರು.
ಸರ್ಕಾರಿ ಶಾಲೆಯಲ್ಲಿ ಮ್ಯೂಸಿಕ್ ಟೀಚರ್ ಆಗಿರುವ ನಾಯಕ ವಿರೇಶ್ ಹಾಗೂ ಅಂತರಾಷ್ಟಿçÃಯ ಪ್ರಶಸ್ತಿ ಮತ್ತು ಲೇಟ್ ಬ್ರಿಟನ್ ರಾಣಿಯಿಂದ ಗೌರವ ಸ್ವೀಕರಿಸಿರುವ ನಾಯಕಿ ಅಶ್ವಿನಿ ಅಂಗಡಿ ಸ್ವಾಭಾವಿಕವಾಗಿ ಅಭಿನಯಿಸಿದ್ದಾರೆ.
ಹಿರಿಯ ನಟ ದತ್ತಣ್ಣ ಪೋಷಕರ ಪಾತ್ರದಲ್ಲಿ ನಟಿಸಿದ್ದು, ನಿರ್ದೇಶಕರಲ್ಲಿ ಗಮನಾರ್ಹ ಸೃಜನಾತ್ಮಕತೆ ಇದೆ, ಇಂತಹ ಚಿತ್ರಕ್ಕೆ ಮಾನ್ಯತೆ ಸಿಗಬೇಕಾಗಿದೆ. ನಿರ್ದೇಶಕರು ಹೇಳಿದಂತೆ ಅಥೈಸಿಕೊಂಡು ದಂಪತಿಗಳು ಅಭಿನಯಿಸಿದ್ದಾರೆ ಎಂದರು.
ಶರತ್ ಮತ್ತು ಶರಧಿ ಶಾರ್ಟ್ ಮೂವಿಗೆ ಸಂಗೀತ ಸತೀಶ್ ಪದ್ಮನಾಬನ್, ವಿನಯ್ ಹೊಸಗೌಡರ್ ಛಾಯಾಗ್ರಹಣ, ಸುಪ್ರೀತ್ ಬಿ ಕೆ ಸಂಕಲನವಿದೆ.