ಮೂರನೇ ಅವಧಿಗೆ ಎ ಸಿ ನಿಂಗೇಗೌಡರು ಅವಿರೋಧವಾಗಿ ಆಯ್ಕೆ
ತಾಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎ ಸಿ ನಿಂಗೇಗೌಡರು ಅವಿರೋಧವಾಗಿ ಆಯ್ಕೆಗೊಂಡರು.
ಗ್ರಾಮದಲ್ಲಿ ಇರುವ ಸಹಕಾರ ಸಂಘದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಆಶಾ ಘೋಷಿಸಿದರು.
ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ದೇವ್ ಅವರು ನೂತನ
ಅಧ್ಯಕ್ಷರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ದೇವ್ ಅವರು “ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿಂಗೇಗೌಡ ಅವರಿಗೆ ಡಿಕೆ ಶಿವಕುಮಾರ್, ಡಿಕೆ ಸುರೇಶ್, ಎಂಎಲ್ಸಿ ಹಾಗೂ ಹೊಸದಾಗಿ ನಿರ್ದೇಶಕರಾಗಿರುವ ರಮೇಶ್ ಪರವಾಗಿ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ.
ಕನಕಪುರ ತಾಲೂಕಿನಲ್ಲಿಯೇ ಅತ್ಯಂತ ಚಿಕ್ಕ ಸೂಸೈಟಿ ಅಂದರೆ ಅಚ್ಚಲು ಸೊಸೈಟಿ, ಕೇವಲ 4 ಊರಿನ ವ್ಯಾಪ್ತಿ ಈ ಸೂಸೈಟಿಗೆ ಬರುತ್ತದೆ ಎಂದು ಹೇಳುತ್ತ ಸರ್ಕಾರದಿಂದ ಬರುವ ಅನುದಾನ ಹಾಗೂ ಸವಲತ್ತುಗಳನ್ನು ಬಳಸಿಕೊಂಡು ನೂತನ ಅಧ್ಯಕ್ಷರು ಸಂಘದ ಅಭಿವೃದ್ಧಿಪಡಿಸಲಿ“ ಎಂದು ಹಾರೈಸಿದರು.
ನೂತನ ಅಧ್ಯಕ್ಷರು ನಿಂಗೇಗೌಡರು ಮಾತನಾಡಿ.. “ಸಹಕಾರಿ ಸಂಘದ ಅಭಿವೃದ್ಧಿಗೆ ನಿರ್ದೇಶಕರ ಜತೆಗೂಡಿ ದುಡಿಯುತ್ತೇನೆ. ರೈತರಿಗೆ ಬೆಳೆ ಸಾಲ ಸೇರಿದಂತೆ ಸರ್ಕಾರದ ಸಹಾಯಧನದಡಿ ನೀಡುವ ಸವಲತ್ತುಗಳನ್ನು ಕಾಲಕಾಲಕ್ಕೆ ಕಲ್ಪಿಸಿಕೊಡುತ್ತೇನೆ“ ಎಂದು ತಿಳಿಸಿದರು.
ಇದೇ ವೇಳೆ ಉಪಾಧ್ಯಕ್ಷರಾದ ಸವಿತಾ ಜಯರಾಮು, ಮಾಜಿ ಅಧ್ಯಕ್ಷರಾದ ಕೆ ಸುರೇಶ್, ಮಾಜಿ ಅಧ್ಯಕ್ಷರಾದ ಟಿ ಎನ್ ಲೋಕೇಶ್, ಮಾಜಿ ಉಪಾಧ್ಯಕ್ಷರಾದ ಶಶಿಕಲಾ ಹಾಗೂ ಸಂಘದ ನಿರ್ದೆಶಕರುಗಳಾದ ಅಭಿನಂದನ್ ಕುಮಾರ್, ನಾಗೇಶ್, ರಮೇಶ್, ವರದರಾಜು ಬಿ ಎಸ್, ಸಿದ್ದರಾಜು, ಜುಬೇರ್ ಷರೀಫ್, ವೆಂಕಟೇಶ್, ಟಿ ಎನ್ ಲೋಕೇಶ್ ಹಾಗೂ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯ್ಕುಮಾರ್ ಯಾದವ್, ಲೆಕ್ಕಾಧಿಕಾರಿ ಸೌಂದರ್ಯ ಸೇರಿದಂತೆ ಊರಿನ ಮುಖಂಡರಾದ ಸತೀಶ್, ಗ್ರಾಮಸ್ಥರು ಇದ್ದರು.