ಜಯಸಿಂಹ ಕೆ. ರವರಿಗೆ “ಸರಸ್ವತಿ ಸಾಧಕ ಸಿರಿ ರಾಷ್ಟ್ರ ಪ್ರಶಸ್ತಿ”
ನಗರ ಜಿಲ್ಲೆ ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಗೊಲ್ಲರಹಟ್ಟಿ ಗ್ರಾಮದ ಜಯಸಿಂಹ ಕೆ. ಅವರು ತಿರುಮಲ ಪದವಿ ಮಹಾವಿದ್ಯಾಲಯ ಬೆಂಗಳೂರು ನಗರ ಜಿಲ್ಲೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಮತ್ತು ಅನೇಕ ಚಟುವಟಿಕೆಗಳನ್ನು ಗಮನಿಸಿ ಇವರಿಗೆ ಹಲವಾರು ಸಂಘಟನೆಗಳು ರಾಜ್ಯಮಟ್ಟದ ರಣಧೀರ ಕಂಠೀರವ ನರಸರಾಜ ಒಡೆಯರ್ ಪ್ರಶಸ್ತಿ, ರಾಷ್ಟ್ರಮಟ್ಟದ ಯುವ ಜ್ಞಾನಶ್ರೀ ಪುರಸ್ಕಾರ ಇನ್ನೂ ಮುಂತಾದ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸುತ್ತಾ ಬಂದಿವೆ.
ಇದೀಗ ಜಯಸಿಂಹ ಕೆ. ಅವರ ಕನ್ನಡ ನಾಡು ನುಡಿಯ ಶಿಕ್ಷಣ ಇನ್ನೂ ಮುಂತಾದ ಸೇವೆ ಪರಿಗಣಿಸಿ 70ನೇ ವರ್ಷದ ಕನ್ನಡ ನಿತ್ಯೋತ್ಸವದ ಅಂಗವಾಗಿ, ಏಪ್ರಿಲ್ 27, 2025 ರಂದು ದಾವಣಗೆರೆ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನರವರು ವಿಜೃಂಭಣೆಯಿAದ ಆಯೋಜಿಸಿದ ಸಾಂಸ್ಕೃತಿಕ ಸಮಾರಂಭದಲ್ಲಿ ಜಯಸಿಂಹ ಅವರಿಗೆ “ಸರಸ್ವತಿ ಸಾಧಕಸಿರಿ” ರಾಷ್ಟ್ರ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಲಾಯಿತು.