ಆಸ್ಟಿನ್ ನ ಮಹನ್ಮೌನ ಸೆಪ್ಟೆಂಬರ್ 5ಕ್ಕೆ ರಿಲೀಸ್
ಎ ವಿ ವಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ “ಆಸ್ಟಿನ್ ನ ಮಹನ್ಮೌನ” ಚಿತ್ರದ ಟ್ರೈಲರ್ ಬಿಡುಗಡೆಯ ಕಾರ್ಯಕ್ರಮಕ್ಕೆ ನಿರ್ಮಾಪಕ ಕೆ. ಮಂಜು ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ನಮ್ಮ ನಾಡು ಕಂಡ ಪ್ರಖ್ಯಾತ ಕವಿ, ತತ್ವಜ್ಞಾನಿ, ಬರಹಗಾರ ಡಿವಿಜಿ ರವರ ಮೊಮ್ಮಗ ಸುಬ್ರಮಣಿ ರವರು ಬಂದಿದ್ದು ಮತ್ತೊಂದು ವಿಶೇಷ ಇವರು ಈ ಚಿತ್ರದ ನಟ , ನಿರ್ದೇಶಕ , ನಿರ್ಮಾಪಕ ವಿನಯ್ ಕುಮಾರ್ ವೈದ್ಯನಾಥನ್ ಸೋದರ ಮಾವ ಕೂಡ ಹೌದು.
ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ನಿರ್ಮಾಪಕ ಕೆ. ಮಂಜು ಅವರು “ನಾನು ಈ ಕಾರ್ಯಕ್ರಮಕ್ಕೆ ಬರಲು ಮುಖ್ಯ ಕಾರಣ ನಮ್ಮ ಗುರುಗಳಾದ ಸುಬ್ರಮಣಿ ಇವರು ಬೇರೆ ಯಾರು ಅಲ್ಲ ಡಿವಿಜಿ ಅವರ ಮೊಮ್ಮಗ, ಅವರ ಅಳಿಯ ನಟಿಸಿ , ನಿರ್ಮಿಸುತ್ತಿರುವ ಈ ಚಿತ್ರದ ಟ್ರೈಲರ್ ಬಹಳ ವಿಭಿನ್ನವಾಗಿ ಬಂದಿದೆ.
ಇತ್ತೀಚೆಗೆ ಬಿಡುಗಡೆಗೊಂಡ ಚಿತ್ರಗಳು ಯಶಸ್ಸನ್ನ ಗಳಿಸುತ್ತಿದೆ.ಆ ಸಾಲಿನಲ್ಲಿ ಈ ಚಿತ್ರವು ಸಾಗಲಿ. ನಟ ವಿನಯ್ ಬಹಳಷ್ಟು ಕಲಿತುಕೊಂಡಿದ್ದಾನೆ, ಸಿನಿಮಾ ಬಗ್ಗೆ ಚೆನ್ನಾಗಿ ತಿಳಿದುಕೊಂಡು ವರ್ಷಗಟ್ಟಲೆ ಕೆಲಸ ಮಾಡಿದ್ದಾನೆ.ಈ ಚಿತ್ರವನ್ನು ಕೆ ಆರ್ ಜಿ ಫಿಲಂಸ್ ರಿಲೀಸ್ ಮಾಡುತ್ತಿದ್ದು , ಹೆಚ್ಚು ಮಲ್ಟಿಪ್ಲೆಕ್ಸ್ ನಲ್ಲೆ ರಿಲೀಸ್ ಮಾಡು ಎಂದಿದ್ದೇನೆ.ತಂಡಕ್ಕೆ ಒಳ್ಳೆಯದಾಗಲಿ“ ಎಂದು ಶುಭ ಕೋರಿದರು.
ಇನ್ನು ನಟ ವಿನಯ್ ಸೋದರಮಾವ ಸುಬ್ರಮಣಿ ಮಾತನಾಡುತ್ತಾ “ನನ್ನ ತಂಗಿಯ ಮಗ ಇಂಜಿನಿಯರ್ ಓದಿದ್ದು ಈ ಸಿನಿಮಾ ಕ್ಷೇತ್ರಕ್ಕೆ ಯಾಕೆ ಬಂದ ಎಂಬ ಪ್ರಶ್ನೆ ನನ್ನಲ್ಲಿ ಇತ್ತು. ಬರವಣಿಗೆ , ಸಾಹಿತ್ಯದ ಬಗ್ಗೆ ಬಹಳಷ್ಟು ಆಸಕ್ತಿ ಬೆಳೆಸಿಕೊಂಡಿದ್ದಾನೆ. ವಿಲಿಯಂ ಷೇಕ್ಸ್‌ಪಿಯರ್ ಮಾತಿನಂತೆ literature index of life’…ಎನ್ನುವಂತೆ ನಮ್ಮ ಹುಡುಗನ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಕೊಡಿ , ಚಿತ್ರವನ್ನ ಯಶಸ್ವಿಗೊಳಿಸಿ ಎಂದು“ ಕೇಳಿಕೊಂಡರು.

ಚಿತ್ರದ ನಟ-ನಿರ್ದೇಶಕ, ನಿರ್ಮಾಪಕನಾದ ವಿನಯ್ ಕುಮಾರ್ ವೈದ್ಯನಾಥನ್ ಮಾತನಾಡುತ್ತಾ “ನಾನು ಎಲೆಕ್ಟ್ರಿಕಲ್ ಇಂಜಿನಿಯರ್ ಮುಗಿಸಿದ ನಂತರ ಸಿನಿಮಾ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದೆ. ಬಹಳಷ್ಟು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದು, ನಂತರ ಕಿರು ಚಿತ್ರಗಳನ್ನ ನಿರ್ದೇಶಿಸಿ ತನ್ನ 13 ವರ್ಷದ ನಿರಂತರ ಶ್ರಮದ ಫಲವಾಗಿ ಈಗ ಎ ವಿ ವಿ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ನಾಯಕ ನಟನಾಗಿ ಅಭಿನಯಿಸಿ ನಿರ್ಮಿಸುವ ಮೂಲಕ ನಿರ್ದೇಶನವನ್ನ ನಿಭಾಯಿಸಿದ್ದಾನೆ.
ಅದರಲ್ಲೂ ನಾನು ಪುನೀತ್ ರಾಜಕುಮಾರ್ ಅವರನ್ನು ಸದಾ ನೆನಪಿಸಿಕೊಳ್ಳುತ್ತೇನೆ. ಅವರ ಚಿತ್ರಗಳಲ್ಲಿ ಕೆಲಸ ಮಾಡಿ ಬಹಳಷ್ಟು ಕಲ್ತಿದ್ದೇನೆ. ಈ ನಮ್ಮ “ಆಸ್ಟಿನ್ ನ ಮಹನ್ಮೌನ” ಚಿತ್ರದಲ್ಲಿ ಲವ್, ಥ್ರಿಲ್ಲಿಂಗ್ ಹಾಗೂ ಭಾವನಾತ್ಮಕ ಕಥೆಯನ್ನು ಒಳಗೊಂಡಿದೆ. ಈ ಮಹಾ ಮೌನದ ಹಿಂದಿರುವ ಘಟನೆಯೇ ಇಡಿ ಚಿತ್ರದ ಹೈಲೈಟ್ 90ರ ಕಾಲಘಟ್ಟದಲ್ಲಿ ನಡೆಯುವ ಕಡಲ ಭಾಗದ ಒಂದು ಕುಟುಂಬದ ಕಥಾನಕವನ್ನು ಒಳಗೊಂಡಿದೆ. ” ಎಂದರು.

ಸಂಗೀತ ನಿರ್ದೇಶಕ ವಿಶ್ವಿ ಮಾತನಾಡುತ್ತ “ನಾನು ಆರನೇ ವಯಸ್ಸಿನಿಂದ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ, ನಾನು ಹಾಗೂ ನಟಿ ಪ್ರಕೃತಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದಿದ್ದು,ನಾನು ಸಂಗೀತ ನಿರ್ದೇಶಕನಾಗಬೇಕೆಂಬ ಕನಸನ್ನು ಕಂಡೆ, ಅದೇ ರೀತಿ ಪ್ರಕೃತಿ ಕೂಡ ನಟಿ ಆಗಬೇಕು ಎಂದುಕೊAಡಿದ್ದರು ಅದರಂತೆ ನಮ್ಮಿಬ್ಬರ ಕನಸು ಈ ಚಿತ್ರದ ಮೂಲಕ ಕೈಗೂಡಿದೆ.
ಈ ಸಿನಿಮಾದಲ್ಲಿ ಒಟ್ಟು ಆರು ಹಾಡು ಇದೆ. ಮೊದಲು ಹಾಡುಗಳು ಇರಲಿಲ್ಲ, ಈಗ ಹಾಡು ಹಿನ್ನೆಲೆ ಸಂಗೀತ ಎಲ್ಲವೂ ಚಿತ್ರಕ್ಕೆ ಪೂರಕವಾಗಿ ಮೂಡಿ ಬಂದಿದೆ.“ ಎಂದರು.
ಈ ಚಿತ್ರದ ನಾಯಕಿ ಪ್ರಕೃತಿ ಮಾತನಾಡಿ “ಇದು ನನ್ನ ಮೊದಲ ಚಿತ್ರ. ಈ ರೀತಿ ವೇದಿಕೆ ಮೇಲೆ ಮಾಧ್ಯಮದವರ ಮುಂದೆ ಮಾತನಾಡುತ್ತಿರುವುದು ಬಹಳ ಖುಷಿ ಇದೆ.
ಹಾಗೆ ನನಗೆ ನಿರ್ದೇಶಕರು ಕೊಟ್ಟಿರುವ ಪಾತ್ರವೂ ಬಹಳ ಉತ್ತಮವಾಗಿದೆ. ನಮ್ಮ ಚಿತ್ರವನ್ನು ನೋಡಿ, ನಮ್ಮಂತ ಪ್ರತಿಭೆಗಳನ್ನ ಪ್ರೋತ್ಸಾಹಿಸಿ” ಎಂದರು.
ಹಾಗೆಯೇ ರಂಗಭೂಮಿ ಪ್ರತಿಭೆ ಮತ್ತೋರ್ವ ನಟಿ ರಿಷಾ ಗೌಡ ಮಾತನಾಡುತ್ತಾ “ನನ್ನ ಪಾತ್ರ ಬಹಳ ವಿಭಿನ್ನವಾಗಿದೆ. ನನಗೆ ಕೊಟ್ಟ ಪಾತ್ರಕ್ಕೆ ನ್ಯಾಯ ನೀಡುವ ಪ್ರಯತ್ನ ಮಾಡಿದ್ದೇನೆ. ನೀವು ಚಿತ್ರಮಂದಿರದಲ್ಲಿ ನಮ್ಮ ಸಿನಿಮಾ ನೋಡಿ ಹೇಳಬೇಕು“ ಎಂದು ಕೇಳಿಕೊಂಡರು.
ಇದೊಂದು ಕಂಟೆಂಟ್ ಒರಿಯೆಂಟೆಡ್ ಚಿತ್ರವಾಗಿದ್ದು , ಬಾಲರಾಜ್ವಾಡಿ , ರಘು ರಾಮನಕೊಪ್ಪ, ಜಗಪ್ಪ, ಸ್ವಾತಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ರಾಜಕಾಂತ್ ಛಾಯಾಗ್ರಹಣ , ಶ್ರೀನಿವಾಸ್ ಹಾಗೂ ಶಶಿಧರ್ ಸಂಕಲನವಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿದ್ದು , ಪೂರ್ವ ತಯಾರಿಯನ್ನ ಮಾಡಿಕೊಂಡು ಅದ್ದೂರಿಯಾಗಿ ಸೆಪ್ಟೆಂಬರ್ 05ರಂದು ರಾಜ್ಯದ್ಯಂತ ಚಿತ್ರ ತೆರೆಯ ಮೇಲೆ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.