ಚಿತ್ರರಂಗದಲ್ಲಿ ನಟಿ ರಾಗಿಣಿ ದ್ವಿವೇದಿ ಹದಿನೈದು ವರ್ಷ ಪೂರ್ಣ: ಏಳು ಬೀಳು ನೆನಪಿಸಿಕೊಂಡ ನಟಿ
ತುಪ್ಪದ ಬೆಡಗಿ ಎಂದೇ ಖ್ಯಾತಿ ಪದೆದಿರುವ ರಾಗಿಣಿ ದ್ವಿವೇದಿ ಕನ್ನಡ ಚಿತ್ರರಂಗದಲ್ಲಿ 15 ವರ್ಷ ಪೂರ್ಣಗೊಳಿಸಿದ್ದಾರೆ. ಕನ್ನಡ ಅಲ್ಲದೆ ಪರಭಾಷೆಯಲ್ಲಿ ನಟಿಸಿರುವ ರಾಗಿಣಿ ಅವರಿಗೆ ಅಲ್ಲಿಯು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
“ವೀರ ಮದಕರಿ ಚಿತ್ರದಲ್ಲಿ ಕಿಚ್ಚ ಸುದೀಪ್ ಜತೆ ಬಣ್ಣ ಹಚ್ಚಿದ ರಾಗಿಣಿ ದ್ವಿವೇದಿ ಈ ಚಿತ್ರಕ್ಕೂ ಮೊದಲು “ಹೋಳಿ” ಎಂಬ ಚಿತ್ರದಲ್ಲಿ ನಟಿಸಿದರು.
ಮಾಡಲಿಂಗ್ ಮಾಡುತ್ತಿದ್ದ ಪಂಜಾಬಿ ಬೆಡಗಿ ವೀರ ಮದಕರಿ ಚಿತ್ರದಿಂದ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದರು.
ರಾಗಿಣಿ ದ್ವಿವೇದಿ ಕನ್ನಡ ಚಿತ್ರರಂಗದ ಪ್ರಮುಖ ನಾಯಕಿಯರಲ್ಲಿ ಒಬ್ಬರು. ಬಣ್ಣದ ಬದುಕಿನಲ್ಲಿ ಹದಿನೈದು ವರ್ಷ ಪೂರ್ಣಗೊಳಿಸಿರುವ ಸಮಯದಲ್ಲಿ ಸಿನಿಮಾ ಪತ್ರಕರ್ತರ ಜೊತೆ ಮುಖಾಮುಖಿಯಾಗಿದ್ದ ರಾಗಿಣಿ ದ್ವಿವೇದಿ, ನಡೆದು ಬಂದ ಹಾದಿ ಹಿಂದಿರುಗಿ ನೋಡಿ ವೇದಿಕೆ ಮೇಲೆ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದರು.
ಈ ವೇಳೆ ಮಾತಿಗಿಳಿದ ನಟಿ ರಾಗಿಣಿ ದ್ವಿವೇದಿ, “ಬೇರೆ ರಾಜ್ಯದಲ್ಲಿ ಹುಟ್ಡಿದ್ದರೂ ಕನ್ನಡ ಚಿತ್ರರಂಗ ಬದುಕು ನೀಡಿದೆ. ಹೀಗಾಗಿ ಜೀವನದ ಕೊನೆ ಗಳಿಗೆ ತನಕ ಕನ್ನಡ ನಾಡಿನ ಪ್ರೀತಿ, ವಿಶ್ವಾಸ ಎಂದಿಗೂ ಮರೆಯಲಾರೆ. ಪರಭಾಷೆಯಲ್ಲಿ ನಟಿಸುವಾಗ ನಾನೊಬ್ಬಳು ಕನ್ನಡದ ನಟಿ ಎಂದು ಗುರುತಿಸುತ್ತಾರೆ. ಪರಭಾಷೆಯಲ್ಲಿ ಸಿಗುವ ಗೌರವ ಮನ್ನಣೆ ಕನ್ನಡ ಚಿತ್ರರಂಗದಲ್ಲಿ ಸಿಗಲಿಲ್ಲ ಎಂದು ಬೇಸರದಿಂದಲೇ ನೋವು ತೋಡಿಕೊಂಡರು”.

ಮಾಡಲಿಂಗ್ ಮಾಡಿಕೊಂಡಿದ್ದೆ. ಕನ್ನಡ ಚಿತ್ರರಂಗ ಇದೆ ಎನ್ನುವುದೇ ಗೊತ್ತಿರಲಿಲ್ಲ.., ಆಗ ಸಿಕ್ಕದ್ದೇ ಹೋಳಿ ಚಿತ್ರ. ನಟಿಸಿದ ಮೊದಲ ಚಿತ್ರ. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರ ಜೊತೆ ವೈಯಕ್ತಿಕ ವಿಷಯಕ್ಕಾಗಿ ಜಗಳ ಮಾಡಿಕೊಂಡಿದ್ದೆ. ಅಲ್ಲಿಂದ ನನ್ನ ಪರಿಚಯ ಚಿತ್ರರಂಗಕ್ಕೆ ಗೊತ್ತಾಯಿತು ಮೊದಲು ಬಿಡುಗಡೆಯಾದ ಸಿನಿಮಾ ಕಿಚ್ಚ ಸುದೀಪ್ ನಟನೆಯ “ವೀರ ಮದಕರಿ”… ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಟ ಕಿಚ್ಚ ಸುದೀಪ್ ಅವರಿಂದ ಸಾಕಷ್ಟು ಕಲಿತೆ ಜೊತೆಗೆ ಚಿತ್ರರಂಗದ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಯಿತು. ಆ ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಪರಭಾಷೆಗೂ ಹೋಗಿ ನಟಿಸಿದ್ದೇನೆ..ಎಲ್ಲೇ ನಟಿಸಿದರೂ ಕನ್ನಡವೇ ನನ್ನ ಮನೆ ಎಂದರು.
ಹದಿ ನೈದು ವರ್ಷಗಳ ಚಿತ್ರಜೀವನದಲ್ಲಿ ಶಿವಣ್ಣ, ಉಪೇಂದ್ರ, ಕಿಚ್ಚ ಸುದೀಪ್, ದುನಿಯಾ ವಿಜಯ್, ಯೋಗಿ,ಆದಿತ್ಯ, ದಿಗಂತ್, ಇತ್ತೀಚೆಗೆ ರಾಜವರ್ದನ್ ಸೇರಿದಂತೆ ಅನೇಕ ನಟರ ಜೊತೆ ಕೆಲಸ ಮಾಡಿದ್ದೇನೆ ಸಾಕಷ್ಟು ಕಲಿತಿದ್ದೇನೆ ಏಳು, ಬೀಳು, ಸೋಲು- ಗೆಲಿವು ,ಸಂಕಷ್ಟಗಳ ಸತಮಾಲೆಯನ್ನೇ ಕಂಡಿದ್ದೇನೆ.ಒಳ್ಳೆಯ ದಿನ ದಿನಗಳನ್ನೂ ನೋಡಿದ್ದೇನೆ.
ಜೊತೆಗೆ ತುಂಬಾ ಕಷ್ಡದ ದಿನಗಳಲ್ಲಿ ನೋಡಿಕೊಂಡಿ ಬಂದಿದ್ದೇನೆ.,ಜೀವನದಲ್ಲಿ ನಕಾರಾತ್ಮ ವಿಷಯವನ್ನು ಎಷ್ಟು ಸ್ವೀಕಾರ ಮಾಡಿಕೊಂಡು ಮುಂದೇ ಹೋಗುತ್ತೇವೋ ಅಷ್ಟು ಮುಖ್ಯ., ಅದನ್ನು ಬದುಕು ಕಲಿಸಿಕೊಟ್ಟಿದೆ.
“ಜೀವನದಲ್ಲಿ ಕಷ್ಟದ ಸಮಯದಲ್ಲಿದ್ದಾಗ ಯಾರೂ ನೆರವಿಗೆ ಬರಲಿಲ್ಲ. ಒಳ್ಳೆಯ ಸಮಯದಲ್ಲಿ ಎಲ್ಲರೂ ಇರ್ತಾರೆ. ನಾನು ಕಷ್ಡದ ಸಮಯದಲ್ಲಿ ಎಲ್ಲರ ಜೊತೆ ನಿಂತಿದ್ದೇನೆ. ಮುಂದೆಯೂ ನಿಲ್ಲುತ್ತೇನೆ. ಹಿಂದಿನದನ್ನು ನೆನಪು ಮಾಡಿಕೊಂಡರ ಕಷ್ಣಲ್ಲಿ ನೀರು ಬರುತ್ತದೆ.
ಪರಭಾಷೆಯವರು ಕೊಡುವ ಪ್ರೀತಿಯನ್ನು ಕನ್ನಡದ ಮಂದಿ ಕೊಡಲಿಲ್ಲವಲ್ಲಾ ಎನ್ನುವ ಬೇಸರ ಮತ್ತು ಕೊರಗು ಇದೆ. ಒಳ್ಳೆಯದು ಏನಾದರೂ ಮಾಡಬೇಕು ಅಂದಾಗ ಒಳ್ಳೆಯದು ಇರುತ್ತೆ. ಕೆಟ್ಟದ್ಸೂ ಇರುತ್ತೆ ಎಲ್ಲವನ್ನು ದಾಟಿಕೊಂಡು ಮುಂದೆ ಬಂದಿದ್ದೇನೆ. ಯಾವುದನ್ನು ಬಿಟ್ಟುಕೊಡುವುದಿಲ್ಲ” .
ನಟ ದರ್ಶನ್ ಅಬಿನಯದ ಡೆವಿಲ್ ಚಿತ್ರದಲ್ಲಿ ಪಾತ್ರದಲ್ಲಿ ನಟಿಸುವಂತೆ ಅವಕಾಶ ಬಂದಿತ್ತು. ಆ ಪಾತ್ರ ಇಷ್ಟವಾಗಲಿಲ್ಲ. ಹೀಗಾಗಿ ನಟಿಸುವುದಿಲ್ಲ ಎಂದು ಹೇಳಿದ್ದೆ. ಪಾತ್ರಗಳ ಆಯ್ಕೆಯಲ್ಲಿ ಚೂಸಿ ಆಗಿದ್ದೇನೆ,. ಹಾಡು, ರೋಮಾಂಟಿಕ್ ಸನ್ನಿವೇಶದಲ್ಲಿ ಮಾತ್ರ ನಟಿಸುತ್ತಿಲ್ಲ, ಕತೆಗೆ ಒತ್ತು ನೀಡುತ್ತಿದ್ದೇನೆಎನ್ನುವ ಸಂಗತಿ ಹೊರ ಹಾಕಿದರು.
ಮೂಲ ಪಂಜಾಬಿ ಆಗಿದ್ದರೂ ಒಬ್ಬ ಕನ್ನಡತಿಯಾಗಿ ಕನ್ನಡ ಚಿತ್ರರಂಗಕ್ಕೆ ಏನಾದರೂ ಕೊಡುಗೆ ನೀಡಬೇಕಿ ಎನ್ನುವ ಹಂಬಲವಿದೆ. ಹೊಸ ವರ್ಷದ ಆರಂಭದಲ್ಲಿ ಮೂರು ಕನ್ನಡ ಚಿತ್ರಗಳಿಗೆ, ಜೊತೆಗೆ ಪರಭಾಷೆಯಲ್ಲಿಯೂ ಅವಕಾಶ ಬಂದಿದೆ. ಜೊತೆಗೆ ಈ ನಡುವೆ ಸಮಾಜ ಸೇವೆಯೂ ಮುಂದುವರಿದಿದೆ. ಕಷ್ಟದಲ್ಲಿದ್ದವರಿಗೆ ನೆರವು ನೀಡುವುದು ನನ್ನ ಗುರಿ ಅದನ್ನು ಮುಂದುವರಿಸುತ್ತಿದ್ದೇನೆ. ಎಂದರು.