ವಿದ್ಯಾವಂತ ರೈತನ ಕಥೆಯ ಚಿತ್ರ “ರಾಮನಗರ”

0
WhatsApp Image 2025-09-10 at 2.24.20 PM

ಪ್ರಭುಸೂರ್ಯ ನಾಯಕನಾಗಿ ನಟಿಸಿರುವ ಚೊಚ್ಚಲ ಚಿತ್ರ “ರಾಮನಗರ” ಚಿತ್ರವು ಇದೇ ಸೆಪ್ಟೆಂಬರ್ 12 ರಂದು ಬಿಡುಗಡೆ ಆಗುತ್ತಿದೆ. ಸಿ ಕೆ ಮಂಜುನಾಥ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ವಿಜಯ್ ರಾಜ್ ನಿರ್ದೇಶನ ಮಾಡಿದ್ದಾರೆ.

ವಿದ್ಯಾವಂತ ಹುಡುಗನೊಬ್ಬ ಉದ್ಯೋಗಕ್ಕಾಗಿ ಸಿಟಿಗೆ ಬರದೆ, ತನ್ನ ಊರಿನಲ್ಲೇ ವ್ಯವಸಾಯ ಮಾಡಲು ನಿರ್ಧಾರ ಮಾಡುತ್ತಾನೆ. ಊರಿನಲ್ಲಿರುವ ವಿದ್ಯಾವಂತ ಯುವಕರಿಗೂ ಮಾದರಿಯಾಗುವ ಕಥೆಯ ಜತೆಗೆ ಪ್ರಸ್ತುತ ರೈತರಿಗೆ ಏನೆಲ್ಲ ಸಮಸ್ಯೆ ಆಗುತ್ತಿದೆ.. ಹಾಗೆಯೇ ವ್ಯವಸಾಯ ಮಾಡುವ ಹುಡುಗರಿಗೆ ಹೆಣ್ಣು ಕೊಡುದಿಲ್ಲ.. ಈ ವಿಷಯಗಳ ಕುರಿತು ಸಿನಿಮಾ ಮಾಡಲಾಗಿದೆ” ಎಂದು ಚಿತ್ರತಂಡ ಹೇಳುತ್ತಿದೆ.

ಚಿತ್ರದಲ್ಲಿ ಮೇಘನಾ, ಹಿಮಶ್ರೀ ನಾಯಕಿಯಾರಾಗಿ ಹಾಗೂ ಪ್ರಮುಖ ಪಾತ್ರಗಳಲ್ಲಿ ಕೆಂಪೇಗೌಡ, ಶಿವಕುಮಾರ್ ಆರಾಧ್ಯ, ತಿಥಿ ಖ್ಯಾತಿಯ ತಮ್ಮಣ್ಣ ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳು ಇದ್ದು, ಕೆವಿಎನ್ ಸಂಗೀತ ನೀಡಿದ್ದಾರೆ. ಭರತ್ ಇಂಡಿಯಾ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನ ಚಿತ್ರಕ್ಕಿದೆ.

Share

Leave a Reply

Your email address will not be published. Required fields are marked *