ಕಪಿಲ್ ನಿರ್ದೇಶನದ ಚಿತ್ರದಲ್ಲಿ ಕೌರವ ವೆಂಕಟೇಶ್ ಹೀರೋ

0
WhatsApp Image 2025-06-09 at 8.48.19 PM

ಖ್ಯಾತ ಫೈಟ್ ಮಾಸ್ಟರ್ ಕೌರವ ವೆಂಟೇಶ್ ಇದೀಗ ಹೀರೋ ಆಗಿ ಬೆಳ್ಳಿತೆರೆ ಮೇಲೆ ರಾರಾಜಿಸಲು ಸಜ್ಜಾಗುತ್ತಿದ್ದಾರೆ. ಬಿ ಸಿ ಪಾಟೇಲ್ ನಟಿಸಿದ ಕೌರವ ಚಿತ್ರದ ಮೂಲಕ ಸಾಹಸ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ, ಇಲ್ಲಿಯವರೆಗೂ ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ.

ಕೌರವ ವೆಂಕಟೇಶ್ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ “ಒಂದು ಸುಂದರ ದೆವ್ವದ ಕಥೆ” ಎಂದು ಹೆಸರಿಡಲಾಗಿದ್ದು, ನೃತ್ಯ ನಿರ್ದೇಶಕ ಕಪಿಲ್ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ, ಕಪಿಲ್ ನಿರ್ದೇಶನದ 10 ನೇ ಚಿತ್ರ ಇದಾಗಿದೆ. ಭಾನು ಪೃಥ್ವಿ 100 ಮಾರ್ಕ್ಸ್ ಫಿಲಂಸ್ ಶೋಭಾವತಿ ಕಪಿಲ್ ಲಾಂಛನದಲ್ಲಿ, ಆರ್. ಲಕ್ಷ್ಮಿ ನಾರಾಯಣ ಗೌಡ ಅರ್ಪಿಸುವ ಮತ್ತು ಪಿ. ಉಮೇಶ್ ಅವರ ಶುಭಹಾರೈಕೆಯೊಂದಿಗೆ ಚಿತ್ರದ ತಯಾರಿ ಶುರುವಾಗಿದೆಯಂತೆ.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ಆರ್. ಲಕ್ಷ್ಮಿ ನಾರಾಯಣ ಗೌಡ, ಕೆ.ಟಿ. ಮುನಿರಾಜ್, ಗುರು ಪ್ರಸಾದ್, ಸುರೇಶ್ ಮುರಳಿ, ವಿ.ಸಿ.ಎನ್ ಮಂಜು, ವಿಕ್ಟರಿ ದಯಾಲನ್, ನಾರಾಯಣಸ್ವಾಮಿ, ವಿಕ್ಟರಿ ವಾಸು, ಶಂಕರ್ ಭಟ್,ಪ್ರೇಮ್ ಪಾವಗಡ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ಅಭಿನಯಿಸುತ್ತಿದ್ದಾರೆ

“ಒಂದು ಸುಂದರ ದೆವ್ವದ ಕಥೆ” ಚಿತ್ರಕ್ಕೆ ಚಿತ್ರಕಥೆ-ಸಂಭಾಷೆಯನ್ನು ಸಾಯಿ ಕೃಷ್ಣ ಹೆಬ್ಬಾಳ ಬರೆದರೆ, ಹರ್ಷ ಕೊಗೋಡ್ ಸಂಗೀತ ಸಂಯೋಜಿಸುತ್ತಿದ್ದಾರೆ. ಶಂಕರ್ ಆರಾಧ್ಯ ಛಾಯಾಗ್ರಹಣ, ವಿನಯ್ ಜಿ ಆಲೂರು ಸಂಕಲನ ಚಿತ್ರಕ್ಕಿದೆ.

Share

Leave a Reply

Your email address will not be published. Required fields are marked *