ಪ್ರೀತಿ,ಪ್ರೇಮದ ಜತೆ ಜೀವನದಲ್ಲಿ ತಾಳ್ಮೆ ಇರಬೇಕು…
ಕೆಂಪು ಹಳದಿ ಹಸಿರು ಚಿತ್ರ ವಿಮರ್ಶೆ
ರೇಟಿಂಗ್ : 3/5
ಚಿತ್ರ : ಕೆಂಪು ಹಳದಿ ಹಸಿರು
ನಿರ್ಮಾಣ : ಪ್ರಸಾದ್ಕುಮಾರ್ ನಾಯ್ಕ್
ನಿರ್ದೇಶಕ : ಮಣಿ ಎಜೆ ಕಾರ್ತಿಕೇಯನ್
ತಾರಾಗಣ : ಶ್ರೀಹನ್ ದೀಪಕ್, ದಿವ್ಯಾ ಸುರೇಶ್, ಅರವಿಂದ್ ಬೋಳಾರ್,
ಶೈಲಾಶ್ರೀ ಮುಲ್ಕಿ ಮುಂತಾದವರು.
———————————————————————————–
ಈ ವಾರ ತೆರೆಕಂಡ “ಕೆಂಪು ಹಳದಿ ಹಸಿರು” ಚಿತ್ರದ ಟೈಟಲ್ ಹೇಗೆ ವಿಭಿನ್ನವಾಗಿದೆಯೂ.. ಹಾಗೇ ಚಿತ್ರವು ಸಹ ವಿಭಿನ್ನವಾಗಿಯೇ ಇದೆ.
ಜೀವನದಲ್ಲಿ ಕೆಲವೊಂದು ವಿಷಯಗಳಲ್ಲಿ ತಾಳ್ಮೆ ಇರಬೇಕು, ಮಕ್ಕಳ ಉತ್ತಮ ಭವಿಷ್ಯಕ್ಕೆ ಪೋಷಕರ ಪಾತ್ರ ಹಾಗೂ ಜೀವನದಲ್ಲಿ ಎಂತಹ ಸ್ನೇಹಿತರು ಇರಬೇಕು ಎನ್ನುವ ವಿಷಯವನ್ನು ನಿರ್ದೇಶಕ ಮಣಿ ಎಜೆ ಕಾರ್ತಿಕೇಯನ್ ಕಥೆ ಎಣಿದಿದ್ದಾರೆ. ಚಿತ್ರವನ್ನು ಪ್ರಸಾದ್ಕುಮಾರ್ ನಾಯ್ಕ್ ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದೆ.
ನಾಯಕ ಅರ್ಜುನ್ ಶ್ರೀಮಂತನಾದರು ಒಂದು ವಿಷಯದಿಂದ ತಂದೆಯ ಮೇಲೆ ಬೇಜಾರಾಗಿ ತಂದೆಯನ್ನು ಬಿಟ್ಟು ತನ್ನ ತಾಯಿಯ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾನೆ.
ಅರ್ಜುನ್ (ಶ್ರೀಹನ್ ದೀಪಕ್) ಗ್ರಾಸರಿ ಮಾರ್ಟ್ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಅರ್ಜುನ್ ಜತೆ ಬಂಟಿ (ಅರವಿಂದ್ ಬೋಳಾರ್) ಹಾಗೂ ಸುಮನ್ (ಶ್ರಿಜನ್) ಕೂಡ ಕೆಲಸ ಮಾಡುತ್ತಿರುತ್ತಾರೆ. ಮೂರು ಜನ ಸಂತೋಷವಾಗಿ ಜೀವನ ನಡೆಸುತ್ತ ಇರುತ್ತಾರೆ.
ಈ ಮಧ್ಯೆ ಅರ್ಜುನ್ಗೆ ಟ್ರಾಫಿಕ್ ಪೊಲೀಸ್ ಆದ “ಶೈಲಶ್ರೀ ಮುಲ್ಕಿ” ಜತೆ ಸ್ನೇಹವಾಗಿ ಕ್ರಮೇಣ ಇಬ್ಬರ ನಡುವೆ ಲವ್ ಆಗುತ್ತದೆ ಆದರೆ ಶೈಲಶ್ರೀ ಕಣ್ಮರೆಯಾಗುತ್ತಾರೆ. ಅದನ್ನು ತಿಳಿಯಲು ಸಿನಿಮಾ ನೋಡಬೇಕು.
ಅರ್ಜುನ್ ಗ್ರಾಸರಿಯನ್ನು ಡೆಲಿವರಿ ಮಾಡುವಾಗ ನಾಯಕಿ ಸಾಕ್ಷಿಯನ್ನು (ದಿವ್ಯಾ ಸುರೇಶ್) ಭೇಟಿಯಾಗಿ ಆಗುತ್ತಾನೆ. ಇವರಿಬ್ಬರ ನಡುವೆ ಸ್ನೇಹ ಬೆಳೆದು ಲವ್ ಆಗುತ್ತದೆ. ಈ ಮಧ್ಯೆ ಮ್ಯಾಜಿಕ್ ಮ್ಯಾನ್ (ಅನಾಮಧೇಯನಿಂದ) ಮೂರು ಜನರಿಗೆ ಒಂದು ಕೆಲಸ ಮಾಡೊಕೊಟ್ಟರೆ ನೀವು ಕೇಳಿದು ಕೊಡುತ್ತೇನೆ ಎಂದು ಆಫರ್ ಕೊಡುತ್ತಾನೆ ಆದರೆ ಮೂರುಜನ ಅದನ್ನು ನಿರಾಕರಿಸುತ್ತಾರೆ.
ನಂತರ ಒಂದು ದಿನ ಗ್ರಾಸರಿ ಮಾರ್ಟ್ ಗೆ ಅದೇ ಮ್ಯಾಜಿಕ್ ಮ್ಯಾನ್ ಕರೆ ಮಾಡುತ್ತಾನೆ ಆ ಕರೆಯನ್ನು ಸ್ವೀಕರಿಸಿದ ಅರ್ಜುನ್ ಅವರನ್ನು ಭೇಟಿ ಮಾಡಲು ಹೋಗುತ್ತಾನೆ. ನಾಯಕನ ಇಬ್ಬರು ಸ್ನೇಹಿತರು ನಮ್ಮನ್ನು ಬಿಟ್ಟು ವ್ಯವಹಾರ ಮಾಡುತ್ತಾನೆಂದು ಅನುಮಾನ ಪಟ್ಟು ಅರ್ಜುನ್ನನ್ನು ಹಿಂಬಾಲಿಸುತ್ತಾರೆ. ಕೊನೆಗೆ ಆ ಇಬ್ಬರು ಸ್ನೇಹಿತರಿಗೆ ಅನಿರೀಕ್ಷಿತವಾದ ಸಂಗಾತಿಗಳು ತಿಳಿಯುತ್ತದೆ.
ಅರ್ಜುನ್ ಅಪ್ಪನನ್ನು ಬಿಟ್ಟು ಬರಲು ಕಾರಣ..? ಆ ಮ್ಯಾಜಿಕ್ ಮ್ಯಾನ್ ಮೂವರ ಬಳಿ ಸಹಾಯ ಕೇಳಲು ಕಾರಣ..? ಟ್ರಾಫಿಕ್ ಪೊಲೀಸ್ ದೊರ ಆಗಲು ಕಾರಣ..? ಇದನ್ನು ತಿಳಿಯಲು ಸಿನಿಮಾ ನೋಡಲೇ ಬೇಕು. ಚಿತ್ರದ ಪ್ರತಿ ದೃಶ್ಯವು ಟ್ವಿಸ್ಟ್ ಯಿಂದ ಕೊಡಿದು ಚಿತ್ರದ ಕ್ಲೆöಮ್ಯಾಕ್ಸ್ನಲ್ಲಿ ಉತ್ತರ ಸಿಗಲ್ಲಿದೆ.
ವಿಕಾಸ್ ವಿಶ್ವಕರ್ಮ ಸಂಗೀತ ಸಂಯೋಜನೆಯ ಹಾಡುಗಳು ಕೇಳಲು ಇಂಪಾಗಿವೆ, ಕಥೆಗೆ ಪೂರಕವಾಗಿ ಹಿನ್ನಲೆ ಸಂಗೀತ ಮೂಡಿಬಂದಿದೆ. ಮಂಗಳೂರು, ಉಡುಪಿ ಸುತ್ತಮುತ್ತ ಸುಂದರ ಸ್ಥಳಗಳನ್ನು ಚಿತ್ರದಲ್ಲಿ ಕಾಣಬಹುದು. ಒಟ್ಟಾರೆ ಚಿತ್ರವನ್ನು ಫ್ಯಾಮಿಲಿ ಕುತ್ತ ನೋಡಬಹುದಾದ ಸಿನಿಮಾ “ಕೆಂಪು ಹಳದಿ ಹಸಿರು”