ಕೆಂಪು ಹಳದಿ ಹಸಿರು ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ

0
20251202_220150

ಸನ್‌ರೈಸ್ ಎಂಟರ್‌ಟೈನ್‌ಮೆಂಟ್ ಅಂಡ್ ಫಿಲಂಸ್ ಬ್ಯಾನರ್ ನಲ್ಲಿ ಮಣಿ.ಎಜೆ.ಕಾರ್ತಿಕೇಯನ್ ನಿರ್ದೇಶನ ಮಾಡಿರುವ ಕೆಂಪು ಹಳದಿ ಹಸಿರು ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಆಗಿದೆ.
‘ಸ್ಟಾಪ್, ಥಿಂಕ್ ಅಂಡ್ ಪ್ರೊಸೀಡ್ ಇನ್ ಲೈಫ್’ ಎಂಬ ಅಡಿಬರಹ ಇರುವ ಈ ಚಿತ್ರಕ್ಕೆ ಶ್ರೀಹನ್‌ದೀಪಕ್ ನಾಯಕ. ದಿವ್ಯಾಸುರೇಶ್ ನಾಯಕಿಯಾಗಿ ನಟಿಸಿದ್ದಾರೆ.

ನಿರ್ದೇಶಕ ಮಣಿ.ಎಜೆ.ಕಾರ್ತಿಕೇಯನ್ ಮಾತನಾಡಿ..ಉದ್ಯಮಿಯ ಮಗ ಯಾವುದೋ ಒಂದು ಕಾರಣಕ್ಕಾಗಿ ಡಿಲಿವರಿ ಬಾಯ್ ಆಗಿ ಕೆಲಸ ಮಾಡುತ್ತನೆ ಮತ್ತು ಹೆಸರೇ ಹೇಳುವಂತೆ ಪಾತ್ರಗಳ ಭಾವನೆಗಳನ್ನು ಹೇಳಲಾಗುತ್ತಿದೆ. ಕೆಂಪು, ಹಳದಿ, ಹಸಿರು ಎನ್ನುವಂತ ಮೂರು ರೋಲ್‌ಗಳು ಇರುತ್ತದೆ. ಇವರು ಸನ್ನಿವೇಶಗಳನ್ನು ಹುಡುಕಲು ಹೋದಾಗ ಉತ್ತರ ಸಿಗುತ್ತದೆ.
ಅದನ್ನು ಹೇಗೆ ಎದುರಿಸುತ್ತಾರೆ. ತ್ರಿಕೋನ ಪ್ರೇಮಕಥೆಯು ಸೆಸ್ಪೆನ್ಸ್, ಥ್ರಿಲ್ಲರ್ ಕಾಮಿಡಿಯಾಗಿ ಹೋಗುತ್ತದೆ. ಸಣ್ಣ ಎಳೆ ಬಿಟ್ಟುಕೊಟ್ಟರೂ ಒಟ್ಟಾರೆ ಸಿನಿಮಾದ ಸಾರ ತಿಳಿಸಿದಂತೆ ಆಗುತ್ತದೆ ಎಂದರು.

ಚಿತ್ರದ ಪ್ರಮಖ ಪಾತ್ರಗಳಲ್ಲಿ ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್, ಒಂದು ಮೊಟ್ಟೆಯ ಕಥೆಯಲ್ಲಿ ಮುಖ್ಯ ಪಾತ್ರವಹಿಸಿದ್ದ ಶೈಲಾಶ್ರೀ ಮುಲ್ಕಿ ಉಳಿದಂತೆ ಚಿಂದೋಡಿ ವಿಜಯ್‌ಕುಮಾರ್, ಶ್ರೀಜನ್, ಮೀನಾಕ್ಷಿಹರ್ತಿ, ಮಾನಸ್, ಉಮೇಶ್‌ಹೆಗಡೆ ಕಡ್ತಲಾ ಮುಂತಾದವರು ಅಭಿನಯಿಸಿದ್ದಾರೆ.

ಛಾಯಾಗ್ರಹಣ ಮಂಜುನಾಥ್ ನಾಯಕ್, ನಿರ್ದೇಶಕರು ಹಾಗೂ ಕಿಶೋರ್ ಮೂಡಬಿದ್ರ‍್ರೆ ಬರೆದಿರುವ ನಾಲ್ಕು ಹಾಡುಗಳಿಗೆ ಮುಂಬೈ ಮೂಲದ ವಿಕಾಶ್ ವಿಶ್ವಕರ್ಮ ಸಂಗೀತ ಸಂಯೋಜಿಸಿದ್ದಾರೆ. ಸಂಕಲನ ಸತೀಶ್ ಈರ್ಲಾ. ಹಾಗೂ . ಬಾಲಾಜಿ ಫಿಲಂ ವರ್ಕ್ಸ್ ಅಡಿಯಲ್ಲಿ ಪ್ರಸಾದ್ ಈರ್ಲಾ ಮತ್ತು ಹರೀಶ್ ಧಾಸ್ಮಾನ ಸಹ ನಿರ್ಮಾಪಕರುಗಳಾಗಿದ್ದಾರೆ.

Share

Leave a Reply

Your email address will not be published. Required fields are marked *