ಕ್ಲಾಸ್ ಆಫ್ ಮೈಸೂರು ಚಿತ್ರದ ಮುಹೂರ್ತ
class of mysore movie muhurtha
ಕ್ಲಾಸ್ ಆಫ್ ಮೈಸೂರು ಚಿತ್ರದ ಮುಹೂರ್ತ ಮತ್ತು ಶೀರ್ಷಿಕೆ ಅನಾವರಣ ಸಮಾರಂಭವು ಶ್ರೀ ಬಂಡೆ ಮಹಾಂಕಾಳಿ ಅಮ್ಮನ ದೇವಸ್ಥಾನದಲ್ಲಿ ನಡೆಯಿತು. ನಟ ದತ್ತಣ್ಣ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಹಿರಿಯ ನಟಿ ತಾರಾ ಟೈಟಲ್‌ನ್ನು ಲೋಕಾರ್ಪಣೆಗೊಳಿಸಿದರು.
ಯಥಾಭವ’ ನಿರ್ಮಿಸಿ, ನಿರ್ದೇಶನ ಮಾಡಿರುವ ಗೌತಂ ಬಸವರಾಜು ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುವ ಜತೆಗೆ ಮಾಕ್ಟ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ.
ನಿರ್ದೇಶಕರು ಮಾತನಾಡಿ.. “ನಿವೃತ್ತಿ ಬದುಕಲ್ಲಿ ನಾವು ಏನನ್ನು ಕಳೆದುಕೊಂಡಿರುತ್ತೆವೋ, ಅದನ್ನು ಅನುಭವಿಸಿದರೆ ಹೆಂಗಿರುತ್ತೆ? ಎಂಬುದನ್ನು ತೋರಿಸಲಾಗುತ್ತಿದೆ. ಮೈಸೂರು ಭಾಗಕ್ಕೆ ಸೇರಿದ ಕತೆಯಾಗಿದ್ದು, ಪ್ರತಿಯೊಂದು ಫ್ರೇಮ್‌ನಲ್ಲಿ ಎಲ್ಲಾ ಕಲಾವಿದರು ಕಾಣಿಸಿಕೊಳ್ಳುತ್ತಾರೆ. ಇಬ್ಬರು ಹುಡುಗಿಯರಿಗಾಗಿ ತಲಾಷ್ ನಡೆಯುತ್ತಿದೆ.
ಗೋವಾ, ಮಂಗಳೂರು, ಕೂರ್ಗ್, ಬೆಂಗಳೂರು ಸುತ್ತಮುತ್ತ ಎರಡು ಹಂತಗಳಲ್ಲಿ 40 ದಿನಗಳ ಕಾಲ ಚಿತ್ರೀಕರಣವನ್ನು ಫೆಬ್ರವರಿ 2ರಿಂದ ನಡೆಸಲು ಯೋಜನೆ ಹಾಕಲಾಗಿದೆ. ಪೋಸ್ಟ್ ಪ್ರೊಡಕ್ಷನ್‌ಗೆಂದು ಎರಡು ತಿಂಗಳು ಮೀಸಲಿಡಲಾಗಿದೆ” ಎಂದರು.

ನಟಿ ತಾರಾ ಮಾತನಾಡಿ… “ಒಂದೊಂದು ಪಾತ್ರಕ್ಕೂ ಅದರ ಹಿಂದಿನ ಕಥೆ ಇದೆ. ಒಂದೊದು ಪಾತ್ರಕ್ಕೂ ಅದರದೆ ಆದ ಗಾತ್ರ ಇದೆ. ಒಂದೊಂದು ಪಾತಕ್ಕ್ಕೂ ಅದರದೆ ಆಯಕಟ್ಟು ಮಾಡಿದ್ದಾರೆ. ಪ್ರಸ್ತುತ ಬರುತ್ತಿರುವ ಸಿನಿಮಾಗಳನ್ನು ಹೊರತುಪಡಿಸಿ, ಬೇರೆ ಆಯಾಮದ ವಿಷಯವನ್ನು ಇವರು ಯಾವ ರೀತಿ ಆರಿಸಿಕೊಂಡರು ಎಂಬುದು ನಿಜಕ್ಕೂ ಸೋಜಿಗವಾಗಿದೆ. ಅಲ್ಲದೆ ಇಂತಹ ಮಹಾನ್ ಕಲಾವಿದರನ್ನು ಒಟ್ಟಿಗೆ ಕೂಡಿಸಿರುವುದು ಛಾಲೆಂಜ್ ಆಗಿದೆ“ ಎಂದರು
ಚಿತ್ರದ ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು, ದತ್ತಣ್ಣ, ತಬಲ ನಾಣಿ, ತಾರಾ, ಮಾಂತೇಶ್, ಜಗ್ಗಪ್ಪ ಮುಂತಾದವರು ನಟಿಸುತ್ತಿದ್ದಾರೆ. ನಾಗಾರ್ಜುನ ಶರ್ಮ ಸಾಹಿತ್ಯದ ನಾಲ್ಕು ಹಾಡುಗಳಿಗೆ ಜೋ ಕೋಸ್ಟ್ಟ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಎಸ್.ಕೆ.ರಾವ್, ಸಂಭಾಷಣೆ ಮಾಸ್ತಿ ಅವರದಾಗಿದೆ.