ಸಂಗಮ್ ಥಿಯೇಟರ್ ಬಳಿ ಕಿಚ್ಚನನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು

0
20260104_145331

ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರವಾದ “ಮಾರ್ಕ್” ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆಡಿಯನ್ಸ್ ನಿಂದ ಮೆಚ್ಚುಗೆ ಪಡೆದಿರುವ ಮಾರ್ಕ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಮಾಡುತ್ತಿದೆ. ಸುದೀಪ್ ಅವರು ಥಿಯೇಟರ್ ವಿಸಿಟ್ ಆರಂಭಿಸಿದ್ದು, ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಫ್ಯಾನ್ಸ್ ಜತೆ ಕುಳಿತು ಸಿನಿಮಾ ನೋಡಿದರು.

ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿಯ ದರ್ಶನ ಪಡೆದು, ನಂತರ ಮೈಸೂರಿನ ಸಂಗಮ ಥಿಯೇಟರ್ ಗೆ ಹೋಗಿ ಅಭಿಮಾನಿಗಳ ಜತೆ ಸಿನಿಮಾ ವೀಕ್ಷಣೆ ಮಾಡಬೇಕಿತ್ತು, ಆದರೆ ಕಿಚ್ಚ ಸುದೀಪ್ ಬರುತ್ತಿರುವ ವಿಷಯ ತಿಳಿದು 15 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಥಿಯೇಟರ್ ಮುಂದೆ ಜಮಾಯಿಸಿದ್ದರು. ಹೀಗಾಗಿ ಸುದೀಪ್ ಚಿತ್ರ ನೋಡದೇ ವಾಪಸ್ಸು ತೆರಳಿದರು.

ರಿಲೀಸ್ ಆದ ‘ಮಾರ್ಕ್’ ಸಿನಿಮಾ ನಾಲ್ಕು ದಿನಗಳಲ್ಲಿ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಪ್ರೇಕ್ಷಕರ ಮನಸ್ಸನ್ನು ಗೆದಿದ್ದು, ಜೊತೆಗೆ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ. ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಜೋಡಿಯ ಮಾರ್ಕ್ ಚಿತ್ರ ಅಭಿಮಾನಿಗಳಿಗೆ ನಿರೀಕ್ಷೆ ಮಾಡಲಿಲ್ಲ.

Share

Leave a Reply

Your email address will not be published. Required fields are marked *