ಚೌಕಿದಾರ್ ರಿಲೀಸ್ ಡೇಟ್ ಲಾಕ್..ಬಿಡುಗಡೆ ದಿನಾಂಕ ಘೋಷಿಸಿದ ಧ್ರುವ ಸರ್ಜಾ
chowkidar kannada movie
ವಿ ಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡಿರುವ “ಚೌಕಿದಾರ್” ಚಿತ್ರದ ರಿಲೀಸ್ ಡೇಟ್‌ನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಅನೌನ್ಸ್ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಇದೇ ತಿಂಗಳು 30ರಂದು ಚೌಕಿದಾರ್ ಬಿಡುಗಡೆ ಆಗುತ್ತಿದೆ.

ರಥಾವರ ಚಿತ್ರ ನಿರ್ದೇಶಿಸಿದ ಚಂದ್ರಶೇಖರ್ ಬಂಡಿಯಪ್ಪ ಆ್ಯಕ್ಷನ್ ಕಟ್ ಹೇಳಿರುವ “ಚೌಕಿದಾರ್” ಚಿತ್ರದಲ್ಲಿ ಪೃಥ್ವಿ ಅಂಬಾರ್ ನಾಯಕನಾಗಿ ಹಾಗೂ ಧನ್ಯರಾಮ್ ನಾಯಕಿಯಾಗಿ ನಟಿಸಿದ್ದಾರೆ.
ಫ್ಯಾಮಿಲಿ, ಅಪ್ಪ-ಮಗನ ಬಾಂಧವ್ಯದ ಕಥೆ ಇರುವ ಈ ಚಿತ್ರದಲ್ಲಿ ಪೃಥ್ವಿ ತಂದೆಯ ಪಾತ್ರದಲ್ಲಿ ಸಾಯಿಕುಮಾರ್ ಕಾಣಿಸಿಕೊಂಡಿದ್ದಾರೆ.
ಉಳಿದ ಪಾತ್ರಗಳಲ್ಲಿ ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ, ಸುಧಾರಾಣಿ, ಧರ್ಮ, ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಮುರುಳಿ ಮಾಸ್ಟರ್ ನೃತ್ಯ ನಿರ್ದೇಶನ, ಜ್ಞಾನೇಶ್ ಮಾತಾಡ್ ಸಂಕಲನ ಮಾಡಿದ್ದಾರೆ.