ನಾಳೆಯಿಂದ zee5ನಲ್ಲಿ ರಾಕ್ಷಸ ವೆಬ್ ಸಿರೀಸ್ ಸ್ಟ್ರೀಮಿಂಗ್..
zee5 ಕನ್ನಡದಲ್ಲಿ ಈಗಾಗಲೇ ಅಯ್ಯನ ಮನೆ, ಮಾರಿಗಲ್ಲು ಸೇರಿದಂತೆ ಹಲವು ವೆಬ್ ಸರಣಿಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿವೆ. ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಜಾನರ್ ಇರುವ “ರಾಕ್ಷಸ” ವೆಬ್ ಸಿರೀಸ್ ಇದೇ ತಿಂಗಳ 20ರಿಂದ zee5 ಕನ್ನಡದಲ್ಲಿ ಪ್ರಸಾರವಾಗಲಿದೆ. ಇದರ ವಿಷಯವಾಗಿ ಪತ್ರಿಕಾಗೋಷ್ಠಿ ನೆನ್ನೆ ನಡೆಯಿತು.
ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಮೊದಲ ವೆಬ್ ಸಿರೀಸ್ ಇದಾಗಿದ್ದು, ನಟ ವಿಜಯ್ ರಾಘವೇಂದ್ರ ಮೊದಲ ವೆಬ್ ಸರಣಿ ಇದಾಗಿದ್ದು, ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ, ಇನ್ನೂ ಇತರೆ ಪಾತ್ರದಲ್ಲಿ ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಮತ್ತು ಅಭಿಜಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Zee5 ಬ್ಯುಸಿನೆಸ್ ಹೆಡ್ ದೀಪಕ್ ತಿಮ್ಮಯ್ಯ ಮಾತನಾಡಿ.. “zee5 ವೆಬ್ ಸಿರೀಸ್ ಜರ್ನಿ ಶುರು ಮಾಡಿದಾಗ, ಶೃತಿ ನಾಯ್ಡು ಪ್ರೊಡಕ್ಷನ್, ಪಿಆರ್ ಕೆ, ಕೆಆರ್ ಜಿ ಈಗ ತರುಣ್ ಸುಧೀರ್ ಅವರು ಸಾಥ್ ಕೊಟ್ಟಿದ್ದಾರೆ. ನಾವು ಕೇಳಿದಾಗ ಸಿರೀಸ್ ಮಾಡಲು ಮುಂದೆ ಬಂದರು.
ಮುಂದಿನ ವರ್ಷ ಸಾಕಷ್ಟು ಜಾನರ್ ನೊಂದಿಗೆ ವೆಬ್ ಸಿರೀಸ್ನಲ್ಲಿ ಬರುತ್ತಿದ್ದೇವೆ. ರಾಕ್ಷಸ ಉತ್ತರ ಕರ್ನಾಟಕ ಭಾಗದ ಕಥೆ. ಕಲಾವಿದರು ಹಾಗೂ ನಿರ್ಮಾಪಕರು ಕೂಡ ಉತ್ತರ ಕರ್ನಾಟಕದವರೇ ಆಗಿದ್ದಾರೆ. 22ರಿಂದ 25 ನಿಮಿಷದ ಏಳು ಎಪಿಸೋಡ್ ಆಗಿ ಪ್ರಸಾರ ಆಗಲಿದೆ. ನಿಮ್ಮ ಸಪೋರ್ಟ್ ಹೀಗೆ ಇರಲಿ. ಏಪ್ರಿಲ್ ನಿಂದ ಬೇರೆ ಬೇರೆ ಪ್ರಾಜೆಕ್ಟ್ ಜೊತೆ ಬರುತ್ತೇವೆ” ಎಂದರು.
ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ಈ ಪ್ರಾಜೆಕ್ಟ್ ಮಾಡಿರುವುದು ಬಹಳ ಖುಷಿ ಇದೆ. “ಸಿನಿಮಾ ಅಂತಾ ಬಂದಾಗ ಥಿಯೇಟರ್ ಗೆ ಹೋಗುತ್ತೇ. ಕಲೆಕ್ಷನ್ ಆಗುತ್ತದೆ. ಅಲ್ಲಿ ಯಾವುದೇ ಚೌಕಟ್ಟು ಇರುವುದಿಲ್ಲ.ಆದರೆ ವೆಬ್ ಸಿರೀಸ್ ಮಾಡಿದಾಗ ಫ್ಲಾಟ್ ಫಾರ್ಮ್ ಸಪೋರ್ಟ್ ಬೇಕು. ಅದನ್ನು ರೆಡಿ ಮಾಡಿ ಎಲ್ಲಿ ಪ್ರೆಸೆಂಟ್ ಮಾಡುತ್ತೀರಾ? ಒಂದು ಫ್ಲಾಟ್ ಫಾರ್ಮ್ ಸಪೋರ್ಟ್ ಮಾಡಿದಾಗ ಇಂಡಸ್ಟ್ರಿ ಬೆಳೆಯಲು ಆಗುವುದು. ಈಗ ಅದನ್ನು zee5 ಮಾಡುತ್ತಿದೆ.
ಸುಹಾಸ್ ಹೇಳಿದ ಲೈನ್ ಇಷ್ಟವಾಯ್ತು. ನನಗೆ ಉತ್ತರ ಕರ್ನಾಟಕದ ಎಲಿಮೆಂಟ್ ನನ್ನ ಸಿನಿಮಾದಲ್ಲಿ ಇರಬೇಕು. ಅದನ್ನು ನನ್ನ ಸಿನಿಮಾದಲ್ಲಿ ಅಳವಡಿಸಿದ್ದೇನೆ.ಉತ್ತರ ಕರ್ನಾಟಕ ನಮ್ಮ ಕುಟುಂಬಕ್ಕೆ ಇರುವ ಕೊಡುಗೆ. ಪ್ರೀತಿ. ಅದನ್ನು ಈ ರೀತಿ ವಾಪಸ್ ನೀಡುತ್ತಿದ್ದೇನೆ. 89 ಪಾತ್ರಗಳು ಈ ಸಿರೀಸ್ ನಲ್ಲಿ ಇದ್ದಾರೆ. ಅವರೆಲ್ಲರೂ ಉತ್ತರ ಕರ್ನಾಟಕ ಭಾಗದವರು. ವೆಬ್ ಸಿರೀಸ್ ಗೆ ಒಂದು ಪ್ರೆಸ್ ಮೀಟ್ ಮಾಡುತ್ತಿದ್ದೇವೆ ಅಂದರೆ ಇದು ಗ್ರೇಟ್ ಮೂವ್. ಇದೆಲ್ಲಾ zee5ನಿಂದ ಆಗಿದೆ“ ಎಂದರು.
ರಾಕ್ಷಸ ವೆಬ್ ಸೀರಿಸ್ಗೆ ಸುಹಾನ್ ಪ್ರಸಾದ್ ಮತ್ತು ಅಪೂರ್ವ ಕಥೆ ಒದಗಿಸಿದ್ದಾರೆ. ಹಾಗೇ ಸುಹಾನ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಈ ವೆಬ್ ಸೀರಿಸ್ ಅನ್ನು ತರುಣ್ ಸುಧೀರ್ ಪ್ರೊಡಕ್ಷನ್ಸ್ನಲ್ಲಿ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ನಿರ್ಮಿಸಿದ್ದಾರೆ