ಕೆಮಿಸ್ಟ್ರಿ ಆಫ್ ಕರಿಯಪ್ಪ ನಿರ್ದೇಶಕರ ಹೊಸ ಚಿತ್ರದ ಟ್ರೇಲರ್ ಔಟ್

0
20251029_124654

ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ನಿರ್ದೇಶಕ ಕುಮಾರ್ ಅವರ “ಲವ್ ಯು ಮುದ್ದು” ಚಿತ್ರ ನವೆಂಬರ್ 7ರಂದು ಬಿಡುಗಡೆ ಆಗುತ್ತಿದೆ. ಚಿತ್ರದ ಟೈಟಲ್ ಕೇಳಿದರೆ ಇದೊಂದು ಪ್ರೇಮ ಕಥೆ ಎಂಬುದು ತಿಳಿದರು ನಿರ್ದೇಶಕ ಕುಮಾರ್ ವಿಭಿನ್ನವಾದ ಪ್ರೇಮಕಥೆಯನ್ನು ಸಿನಿಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.

ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ನಿರ್ಮಾಪಕರು ಹಾಗೂ ಖ್ಯಾತ ಛಾಯಾಗ್ರಹಕ ಜೆ ಜಿ ಕೃಷ್ಣ, ನಟಿ ಸಂಜನಾ ಆನಂದ್ ವಿಶೇಷ ಅತಿಥಿಯಾಗಿ ಆಗಮಿಸಿದರು.

ಕಿಶನ್ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಡಿ ಕಿಶನ್ ಟಿ.ಎನ್. ಚಿತ್ರ ನಿರ್ಮಾಣ ಮಾಡಿದ್ದಾರೆ. ಸಿದ್ದು ಮೂಲಿಮನಿ ನಾಯಕ, ಯುವನಟಿ ರೇಷ್ಮಾ ನಾಯಕಿಯಾದ್ದರೆ, ಉಳಿದ ಪಾತ್ರಗಳಲ್ಲಿ ರಾಜೇಶ್ ನಟರಂಗ, ತಬಲಾ ನಾಣಿ, ಗಿರೀಶ್ ಶಿವಣ್ಣ, ಶ್ರೀವತ್ಸ ಮತ್ತು ಸ್ವಾತಿ ನಟಿಸಿದ್ದಾರೆ

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ಜೆ ಜಿ ಕೃಷ್ಣ ಅವರು ನಾಯಕ,ನಾಯಕಿ ಚಿತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ, ಚಿತ್ರದ ಪ್ರತಿ ಫ್ರೇಮ್ ಅದ್ದೂರಿಯಾಗಿ ಮೂಡಿಬಂದಿರುವುದು ಟ್ರೇಲರ್ ನಲ್ಲಿ ಕಾಣುತ್ತಿದೆ” ಹಾಗೂ ನಿರ್ಮಾಪಕರು ಉಳಿದರೆ ನೂರು ಫ್ಯಾಮಿಲಿಗೆ ಊಟ ಹಾಕುತ್ತಾರೆ. ಆ ನಿರ್ಮಾಪಕರು ಗೆಲ್ಲಬೇಕು ಎಂದರು.

ನಟಿ ಸಂಜನಾ ಆನಂದ್ ಮಾತನಾಡಿ, ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಕುಮಾರ್, ಅವರ ಬರವಣಿಗೆ ನನಗೆ ತುಂಬಾ ಇಷ್ಟವಾಗುತ್ತದೆ. ಲವ್ ಯು ಮುದ್ದು ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಇಡೀ ಚಿತ್ರರಂಗಕ್ಕೆ ಒಳ್ಳೆಯದಾಗಲಿ, ಸಿದ್ದು ಅವರ ಡಿಡಿಕೇಷನ್ ನೋಡಿ ಖುಷಿಯಾಯ್ತು ಎಂದರು.

ನಿರ್ದೇಶಕ ಕುಮಾರ್ ಮಾತನಾಡಿ, ಇದು ನನ್ನ ಐದನೇ ಸಿನಿಮಾ ಈ ಚಿತ್ರದಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಘಟನೆ ಇಟ್ಕೊಂಡು ಸಿನಿಮಾ ಮಾಡಲಾಗಿದ್ದು, ಇದು ಮನಸ್ಸಿಗೆ ಮುಟ್ಟುವ ಕಥೆ. ನಿರ್ಮಾಪಕರು ನನ್ನ ಮೊದಲ ಸಿನಿಮಾದಿಂದ ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆಎಂದರು.

ಪ್ರೀತಿಯೇ ಜೀವನ ಎಂದು ಬಾಳುವ ಜೋಡಿಗಳ ಕಥೆಯ ಜತೆ ತಂದೆ-ತಾಯಿಯರ ಸೆಂಟಿಮೆಂಟ್ ಜತೆ ಕಾಮಿಡಿ ಕೂಡ ಟ್ರೇಲರ್ ನಲ್ಲಿ ನೋಡಬಹುದು.

ನಿರ್ದೇಶಕ ಕುಮಾರ್ ಅವರು ಪ್ರೀತಿ, ಪ್ರೇಮದ ಮೇಲೆ ಕಥೆಯನ್ನು ಎಣಿದಿದ್ದು, ಈಗಿನ ಯುತ್ಸ್ ಗಮನದಲ್ಲಿಟ್ಟುಕೊಂಡು ಕಥೆಯನ್ನು ಎಣಿದಿರುವ ಆಗಿದೆ. ಎಲ್ಲಾ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಮುದ್ರೆಯಾಗುತ್ತದೆ

ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರೀ ಸಂಗೀತ ನಿರ್ದೇಶನ ಹಾಗೂ ಸಿ.ಎಸ್.ದೀಪು ಸಂಕಲನ ಚಿತ್ರಕ್ಕಿದೆ.ಲವ್ ಯು ಮುದ್ದು ಸಿನಿಮಾ ನವೆಂಬರ್ 7ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದ್ದು, ಜಗದೀಶ್ ಫಿಲ್ಮಂ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ.

Share

Leave a Reply

Your email address will not be published. Required fields are marked *