ಎಂಟು ವರ್ಷದ ನಂತರ ಅಮೂಲ್ಯ ಕಮ್ಬ್ಯಾಕ್
ದರ್ಶನ್, ಸುದೀಪ್ ಅವರ ಜತೆ ಬಾಲನಟಿಯಾಗಿ ನಟಿಸಿದ ಅಮೂಲ್ಯ “ಚೆಲುವಿನ ಚಿತ್ತಾರ” ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಯ ಮೇಲೆ ರಾರಾಜಿಸಿದರು. ಚಿತ್ರವು ಸೂಪರ್ ಡೂಪರ್ ಹಿಟ್ ಆಯಿತು. ನಂತರ ಪ್ರೇಮ ಚಂದ್ರಮ, ಗಜಕೇಸರಿ, ಮಳೆ, ಸೇರಿದಂತೆ ಬ್ಯಾಂಕ್ ಟು ಬ್ಯಾಂಕ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು.
ದುನಿಯಾ ವಿಜಯ್ ಜತೆ ಮಾಸ್ತಿಗುಡಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು, ಈ ಚಿತ್ರ 2017 ರಲ್ಲಿ ತೆರೆಕಂಡಿತು.
ಸ್ಟಾರ್ಡಮ್ ಇರುವಾಗಲೇ ಮದುವೆಯಾದ ಅಮೂಲ್ಯ ಕುಟುಂಬ, ಮಕ್ಕಳು ಅಂತ ಚಿತ್ರರಂಗದಿಂದ ದೂರ ಇದ್ದರು, ಇದೀಗ 8 ವರ್ಷದ ಬಳಿಕ ನಟನೆ ಮಾಡಲು ಸಿದ್ದರಾಗಿದ್ದಾರೆ. ಅಮೂಲ್ಯ ತಮ್ಮ ಹುಟ್ಟುಹಬ್ಬದ ದಿನ ಹೊಸ ಚಿತ್ರವನ್ನು ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೈಟಲ್ ಟೀಸರ್ ಮೂಲಕ ಅನೌನ್ಸ್ ಮಾಡಿದ್ದಾರೆ.

ಅಮೂಲ್ಯ ಕಮ್ ಬ್ಯಾಕ್ ಮಾಡಿ ನಟನೆ ಮಾಡುತ್ತಿರುವ ಚಿತ್ರದ ಹೆಸರು “ಪೀಕಬೂ“. ಈ ಹಿಂದೆ ಶ್ರಾವಣಿ ಸುಬ್ರಮಣ್ಯ ಚಿತ್ರವನ್ನು ನಿರ್ದೇಶಿಸಿದ ಮಂಜು ಸ್ವರಾಜ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ,
“ಪೀಕಬೂ” ಎಂಬುದು ಗೀಬ್ರಿಷ್ ಭಾಷೆಯೆ ಪದವಾಗಿದ್ದು, ಮಕ್ಕಳನ್ನು ಖುಷಿಪಡಿಸುವುದಕ್ಕಾಗಿ ಈ ಪದವನ್ನು ಬಳಸುತ್ತಾರೆ ಎಂದಿದೆ ಚಿತ್ರತಂಡ.
ಗಣೇಶ್ ಕೆಂಚಾಂಬಾ ನಿರ್ಮಾಣದಲ್ಲಿ ಮಂಜು ಸ್ವರಾಜ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಪ್ರತಿ ಮನೆಯಲ್ಲೂ ನಡೆಯುವ ಕಾಮನ್ ಕಥೆಯ ಜತೆಗೆ ಹಾಸ್ಯದಿಂದ ಕೊಡಿರುವ ಈ ಚಿತ್ರದ ಚಿತ್ರೀಕರಣ ಆಕ್ಟೋಬರ್ 2ರಿಂದ ಪ್ರಾರಂಭವಾಗುತ್ತಿದೆಯಂತೆ.
ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಾಹಕರಾದರೆ, ವೀರಸಮರ್ಥ್ ಮತ್ತು ಶ್ರೀಧರ್ ಸಂಗೀತವಿದೆ.