ಮಾಸ್ ಲುಕ್ ನಲ್ಲಿ ನಿರೂಪ್ ಭಂಡಾರಿ

0
SUDDINOTA CINEMA SUDDI

suddinota Exclusive

ಪದೇ ಪದೇ, ನಮಕ್ ಹರಾಮ್ ಹಾಗೂ ಬೂತಯ್ಯನ ಮಗ ಅಯ್ಯ ಚಿತ್ರಗಳನ್ನು ನಿರ್ದೇಶಿಸಿದ ನಾಗರಾಜ್ ಪೀಣ್ಯ ಸಣ್ಣ ಗ್ಯಾಪ್‌ನ ಬಳಿಕ ಇದೀಗ ನಿರೂಪ್ ಭಂಡಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಅತಿಕಾಯ ಎಂದು ಹೆಸರಿಡಲಾಗಿದ್ದು, ಈಗಾಗಲೇ ಚಿತ್ರದ ಎರಡು ಹಂತದ ಚಿತ್ರೀಕರಣ ಸಂಪೂರ್ಣವಾಗಿದ್ದು, ಮೂರನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿದೆ.

ಈ ಹಿಂದಿನ ಸಿನಿಮಾಗಳಲ್ಲಿ ನಿರೂಪ್ ಭಂಢಾರಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದು, ಅತಿಕಾಯದಲ್ಲಿ ಮಾಸ್ ಲುಕ್ ನಲ್ಲಿ ಸಿನಿಪ್ರಿಯರು ನಿರೂಪ್ ಅನ್ನು ತೆರೆಯ ಮೇಲೆ ನೋಡಬಹುದು. ಚಿತ್ರದ ಬಗ್ಗೆ ಬಿಟ್ಟು ಕೊಡದ ನಿರ್ದೇಶಕರು “ಇದೊಂದು ಮಾಸ್ ಜಾನರ್ ಚಿತ್ರವಾಗಿದ್ದು ನಿರೂಪ್ ಭಂಡಾರಿಗಾಗಿಯೇ ಬರೆದ ಕಥೆಯಿದು, ಚಿತ್ರದ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ”ಎಂದರು

ನಿರ್ದೇಶಕ ನಾಗರಾಜ್ ಪೀಣ್ಯ

ಪ್ರಸುತ್ತ ಅಡಿಯನ್ಸ್ ಪಲ್ಸ್ ಅರಿತಿಕೊಂಡು ನಾಗರಾಜ್ “ಅತಿಕಾಯ” ಕಥೆಯನ್ನು ಹೆಣೆದಿದ್ದಾರೆ. ಚಿತ್ರದ ಮೇಕಿಂಗ್ ಅಧ್ಬುತವಾಗಿ ಮೂಡಿಬರುತ್ತಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಆದರು ಆಶ್ಚರ್ಯವಿಲ್ಲ

ಹೆಸರಾಂತ ಕಲಾವಿದರು ನಟಿಸುತ್ತಿದ್ದು ಬಹು ದೊಡ್ಡ ತಾರಾಗಣವಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಸತೀಶ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ಉದಯಲೀಲ ಛಾಯಾಗ್ರಹಣ, ಪಿ ಶ್ರೀನಿವಾಸ್ ಸಂಕಲನ ಚಿತ್ರಕ್ಕಿದೆ

Share

Leave a Reply

Your email address will not be published. Required fields are marked *