ಎಸ್ ಪ್ರದೀಪ್ ವರ್ಮ ನಿರ್ದೇಶನದ ಹೊಸ ಚಿತ್ರ ಪ್ರೇಮಿ

0
20250929_230556

ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಎಸ್ ಪ್ರದೀಪ್‌ವರ್ಮ ನಟನೆಯ ಜತೆಗೆ ಚಿತ್ರ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಪ್ರದೀಪ್‌ವರ್ಮ ಇದೀಗ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡಿದ್ದು, ಚಿತ್ರದ ಟೈಟಲ್‌ನ್ನು ನಿರ್ಮಾಪಕ ಸುರೇಶ್ ಗೌಡ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಚಿತ್ರಕ್ಕೆ ಪ್ರೇಮಿ ಎಂದು ಹೆಸರಿಡಲಾಗಿದ್ದು, ಜ್ಯೋತಿಷ್ಯದ ಮೂಲಕ ಪ್ರೀತಿಯನ್ನು ಹುಡುಕುವ ವಿಭಿನ್ನ ಕಥಾಹಂದರ ಇರುವ ಈ ಚಿತ್ರದ ನಾಯಕನಾಗಿ ಅದ್ವಿಕ್, ನಾಯಕಿ ಸಾತ್ವಿಕ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಪ್ರದೀಪ್‌ವರ್ಮ ಅಭಿನಯಿಸಿದ್ದಾರೆ.

ನಾಯಕ ಅದ್ವಿಕ್, ನಾಯಕಿ ಸಾತ್ವಿಕ

ಚಿತ್ರಕ್ಕೆ ಟಿ.ಎಸ್ ಅಕ್ಕಮಹಾದೇವಿ ಕಥೆ ಬರೆದಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಪ್ರದೀಪ್ ವರ್ಮ ಅವರೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ.
ಶ್ರೀ ಗುರು ಕರಿಬಸವೇಶ್ವರ ಪ್ರೊಡಕ್ಷನ್ ಲಾಂಛನದಲ್ಲಿ ಬಿ.ಸಿದ್ದಲಿಂಗಯ್ಯ ಅವರು ನಿರ್ಮಾಣ ಮಾಡಿದ್ದಾರೆ.
“ಪ್ರೇಮಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಮಾತಿನ ಜೋಡಣೆ ನಡೆಯುತ್ತಿದೆ. ದಾವಣಗೆರೆ, ದೇವರಬೆಳಕೆರೆ, ಗೋಕರ್ಣ, ಕನಕಪುರ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.

ಇತರೆ ಪಾತ್ರಗಳಲ್ಲಿ ಶೋಭಿತ ಹರೀಶ್ ಉಕ್ಕಡಗಾತ್ರಿ, ಶಂಕರ್ ಅಂಬಿ, ಹೆಚ್ ಜಿ ವೀರೇಶ್, ದ್ವಿತ ಕೆ ಗೌಡ, ಸಂದೇಶ್, ಸಂಗಮೇಶ್ ದೇವರಬೆಳಕೆರೆ, ಕಲ್ಕಿ, ಮಾಸ್ಟರ್ ಹರೀಶ್, ಮಾಸ್ಟರ್ ಸಂತೃಪ್ತಿ ಶಿವಧರಮಠ, ಸಮರ್ಥ್ ರಾಘವೇಂದ್ರ, ಸುರೇಶ್ ಬಾಬು ಮುಂತಾದವರನ್ನು ನೋಡಬಹುದು.

Share

Leave a Reply

Your email address will not be published. Required fields are marked *