Skip to content
legend director kannada movie

ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಲ್ಲಿ ಇರುವ ಬೆಳ್ಳುಳ್ಳಿ ಕಬಾಬ್ ಚಂದ್ರು ಈಗ ಸಿನಿಮಾದಲ್ಲಿ ನಟನೆ ಕೂಡ ಮಾಡುತ್ತ ಇದ್ದಾರೆ. ಇವರು ಈ ಹಿಂದೆ ಮಾಲಾಶ್ರೀ ಅವರಿಗೆ ಮೇಕಪ್ ಮ್ಯಾನ್ ಆಗಿ ಕೂಡ ಕೆಲಸ ಮಾಡಿರುವ ಇವರು ಈಗ ಸ್ವತಃ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ.

ಚಂದ್ರು ರವರಿಗೆ ಮೊದಲಿನಿಂದಲ್ಲೂ ಸಿನಿಮಾ ಹಾಗೂ ಸಿನಿಮಾದವರ ಮೇಲೆ ಅಪಾರ ಪ್ರೀತಿ ಗೌರವ. ಅದೇ ಗೌರವ ಇಂದು ಮತ್ತೇ ಬೆಳ್ಳಿ ಪರದೆಯತ್ತ ಮುಖ ಮಾಡಿಸಿದೆ. ಇದೀಗ ಲೆಜೆಂಡ್ ಡೈರೆಕ್ಟರ್ ಚಿತ್ರದಲ್ಲಿ ನಟಿಸಿದ್ದಾರೆ. ಕಾಲು ನೋವಿನ ಮಧ್ಯೆ ಕೂಡ ಲೆಜೆಂಡ್ ಡೈರೆಕ್ಟರ್ ಸಿನಿಮಾ ತಂಡಕ್ಕೆ ಸಾಥ್ ನೀಡಿದ್ದಾರೆ. ಚಂದ್ರುರವರ ಸಹಜ ಅಭಿನಯ ಎಲ್ಲರ ಗಮನ ಸೆಳೆಯುವಂತಿದೆ ಎಂದು ಚಿತ್ರದ ನಿರ್ದೇಕರಾದ ನವಿಲುಗರಿ ನವೀನ್ ಪಿ ಬಿ ತಿಳಿಸಿದ್ದಾರೆ.

ಲೆಜೆಂಡ್ ಡೈರೆಕ್ಟರ್ ಸಿನಿಮಾವು ನವಿಲುಗರಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ನವಿಲುಗರಿ ನವೀನ್ ಪಿ ಬಿ ಕಥೆ- ಚಿತ್ರಕಥೆ- ಸಂಭಾಷಣೆ ಹಾಗೂ ನಿರ್ದೇಶನದ ಜೊತೆಗೆ ನಾಯಕ ನಟರಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀಮತಿ ವಿಶಾಲ ಸತೀಶ್ ಸಹ ನಿರ್ಮಾಪಕರಾಗಿದ್ದಾರೆ.

ಪ್ರಣವ್ ಸತೀಶ್ ಸಂಗೀತ ನಿರ್ದೇಶನ, ಕ್ಯಾಮರಾ ಕೆಲಸ ಹಾಗೂ ಸಂಕಲನ ಗೌತಮ್ ಮಾಡಿದ್ದಾರೆ. ಶಿವಾಜಿ ಮತ್ತು ಲಲಿತ್ ಕೃಷ್ಣ ನಿರ್ದೇಶನದ ತಂಡದಲ್ಲಿದ್ದಾರೆ. ಇದರ ಜೊತೆಗೆ ಈ ಸಿನಿಮಾದಲ್ಲಿ ಸಾಕಷ್ಟು ಹಿರಿಯ ನಿರ್ದೇಶಕರು ಹಾಗೂ ದೊಡ್ಡ ಸ್ಟಾರ್ ನಟರುಗಳು ಕೂಡ ನಟನೆ ಮಾಡಿದ್ದಾರೆ. ಆದಷ್ಟು ಬೇಗ ಅವರುಗಳ ಬಗ್ಗೆ ಕೂಡ ತಿಳಿಸುವುದಾಗಿ ಸಿನಿಮಾ ತಂಡ ಹೇಳಿದೆ.