Skip to content
volleball
Home » ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡ

ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡ

ಕನಕಪುರ : HCL Foundation ವತಿಯಿಂದ ರಾಜ್ಯತಂಡದ ಆಯ್ಕೆಯ ಸಲುವಾಗಿ ತುಮಕೂರಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ (ಸರ್ಕಾರಿ ಶಾಲೆಗಳ) ‘ಆಹ್ವಾನಿತ ಜಿಲ್ಲೆಗಳ ವಾಲಿಬಾಲ್’ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಪ್ರಥಮಸ್ಥಾನ ಪಡೆದು ದಕ್ಷಿಣ ಭಾರತ ವಲಯಮಟ್ಟದಲ್ಲಿ (South Zone) ನಲ್ಲಿ “ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ” ಅವಕಾಶ ಪಡೆದ ಅಚ್ಚಲು ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡ.

ಭಾರತ ದಕ್ಷಿಣವಲಯ ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಅರ್ಹತೆಗಳಿಸಿದ ಅಚ್ಚಲು ಶಾಲಾ ವಾಲಿಬಾಲ್ ತಂಡವನ್ನು ಮತ್ತು ತರಬೇತುದಾರರಾದ ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜು ಎಸ್ ರವರನ್ನು ಅಚ್ಚಲು ಗ್ರಾಮಪಂಚಾಯ್ತಿ ಅಧ್ಯಕ್ಷ ನಂಜೇಶ್, ಸದಸ್ಯರಾದ ದೊಡ್ಮನೆ ಸತೀಶ್, ಮುಖ್ಯಶಿಕ್ಷಕ ಪರಮೇಶ್ವರಪ್ಪ, ಕ್ರೀಡಾ ಪೋಷಕರಾದ ಉಪ್ಪಕೆರೆದೊಡ್ಡಿ ಸುರೇಶ್, SDMC ಅಧ್ಯಕ್ಷ ಶಿವಕುಮಾರ್, ಅಚ್ಚಲು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್, ಚಿಕ್ಕಸ್ವಾಮಿ ಹಾಗೂ ಗ್ರಾಮಸ್ಥರು ಅಭಿನಂದಿಸಿದರು.