ಮನುಷ್ಯ ಮತ್ತು ನಾಯಿ ನಡುವಿನ ಎಮೋಷನಲ್ ಜರ್ನಿ
ಸಿನಿಮಾ ವಿಮರ್ಶೆ
ರೇಟಿಂಗ್ : 3.5
ಚಿತ್ರ: ನಾನು ಮತ್ತು ಗುಂಡ 2
ನಿರ್ಮಾಣ – ನಿರ್ದೇಶನ : ರಘುಹಾಸನ್
ತಾರಾಗಣ: ರಾಕೇಶ್ ಅಡಿಗ,ರಚನಾ ಇಂದರ್, ಗೋವಿಂದೇಗೌಡ, ನಯನ,
ಸಾಧುಕೋಕಿಲ ಮುಂತಾದವರು
_________________________________________________
ನಾನು ಮತ್ತು ಗುಂಡ ಮೊದಲ ಭಾಗದಲ್ಲಿ ಶಂಕರ ಮತ್ತು ಅನಾಥ ಗುಂಡನ ಬಗ್ಗೆ ಭಾವ ತೀರ ಯಾನ ವನ್ನು ತಿಳಿಸಲಾಗಿತ್ತು. ಈಗ ಈ ಸಿಕ್ವೀಲ್‌ನಲ್ಲೂ ಕೂಡ ಅದೇ ಯಾನ ಮುಂದುವರಿದಿದೆ. ಆದರೆ ಇಲ್ಲಿ ಶಂಕರ ಇಲ್ಲ, ಗುಂಡ ಇದ್ದನೆ ಆದರೆ ತೀರಿಹೋದ ಶಂಕರನ ಮಗ ಹುಟ್ಟುತ್ತಾನೆ.
ಶಂಕರನ ಮಗ ಹಾಗೂ ಗುಂಡನ ಎಮೋಷನಲ್ ಜರ್ನಿ ಈ ಸಿಕ್ವೀಲ್‌ನಲ್ಲಿ ಮುಂದುವರಿದಿದೆ. ನಿರ್ದೇಶಕ ರಘುಹಾಸನ್ ಮಾನವ ಮತ್ತು ಪ್ರಾಣಿ ಸಂಬಂಧವನ್ನು ಮತ್ತಷ್ಟು ಭವ್ಯವಾಗಿ ಕಟ್ಟಿಕೊಟ್ಟಿದ್ದಾರೆ.
ತೀರಿಹೋಗಿದ ಮಾಲೀಕ ಮತ್ತೆ ಬರುತ್ತಾನೆ ಎಂದು ಸಮಾದಿ ಬಳಿ ಗುಂಡ(ನಾಯಿ) ಕಾಯುತ್ತ ಇರುತ್ತಾನೆ, ಅದೇ ಸಮಯಕ್ಕೆ ಶಂಕರನ ಮಗ ಹುಟ್ಟುತ್ತಾನೆ, ಆದರೆ ಹುಟ್ಟಿದ ಘಳಿಗೆಯಲ್ಲಿಯೇ ತಾಯಿಯನ್ನು ಕಳೆದುಕೊಳ್ಳುತ್ತಾನೆ. ಆಗ ಗುಂಡನಿಗೆ ಜೊತೆಯಾಗುವುದು ಶಂಕರನ ಮಗ. ತಬ್ಬಲಿಯಾದ ಶಂಕರನ ಮಗನನ್ನು ಶಂಕರನ ಸ್ನೇಹಿತನಾದ ಭೂರಿ ದಂಪತಿ (ಗೋವಿಂದೇಗೌಡ ಹಾಗೂ ನಯನ) ಶಂಕರನ ಮಗನಿಗೆ ಶಂಕರ ಎಂದೇ ಹೆಸರಿಟ್ಟು ಸಾಕುತ್ತಾರೆ.
ಮೊದಲಾರ್ಧ ಭಾಗದಲ್ಲಿ ಬಾಲಕ ಶಂಕರ (ಮಾಸ್ಟರ್ ಸಾಯಿ ಯುವನ್) ಹಾಗೂ ಗುಂಡನ ನಡುವಿನ ತಮಾಷೆ, ಭಾವನಾತ್ಮಕ ದೃಶ್ಯಗಳು ನೋಡವವರಿಗೆ ನಗು ತರುವುದರ ಜತೆಗೆ ಕಣ್ಣಲ್ಲಿ ನೀರು ತುಂಬಿಸುತ್ತದೆ.
ಗುಂಡನಿಗೆ ಹೃದಯಘಾತವಾಗಿ ಸಾಯುತ್ತಾನೆ. ಆದರೆ ಹಲವು ವರ್ಷಗಳು ಕಳೆದರು ಶಂಕರನಿಗೆ ಗುಂಡನನ್ನು ಮರೆಯುವುದಕ್ಕೆ ಆಗುವುದಿಲ್ಲ.
ಯುವಕ ಶಂಕರನಾಗಿ ರಾಕೇಶ್ ಅಡಿಗನನ್ನು ತೆರೆಯ ಮೇಲೆ ನೋಡಬಹುದು. ಗುಂಡನಿಗೆ ಮರುಜನ್ಮವಾಗಿದೆ ಎಂದು ಹುಡುಕಿಕೊಂಡು ಊಟಿಗೆ ಹೋಗುವ ಶಂಕರನಿಗೆ ಇಂದು(ರಚನಾ ಇಂದರ್) ಭೇಟಿಯಾಗುತ್ತಾರೆ.
ಮುಂದೆ ಶಂಕರನಿಗೆ ಗುಂಡ ಸಿಗುತ್ತಾನ..? ಶಂಕರ ಇಂದುವನ್ನು ಏಕೆ ಭೇಟಿಮಾಡುತ್ತಾನೆ..? ಎಂಬುದನ್ನು ದ್ವಿತೀಯಾರ್ಧದಲ್ಲಿ ನೋಡ ಬಹುದು.
ಚಿತ್ರದ ಕ್ಲೆಮ್ಯಾಕ್ಸ್ ಕುತೂಹಲ ಮೂಡಿಸುವುರ ಜತೆಗೆ ವಿಶೇಷವಾಗಿದೆ. ನಾಯಕ ರಾಕೇಶ್ ಅಡಿಗರ ನಟನೆ ಅದ್ಭುತವಾಗಿದ್ದು. ರಚನಾ ಇಂದರ್ ಅವರ ಪಾತ್ರ ಗಂಭೀರತೆಗಿಂತ ಹಾಸ್ಯಕ್ಕೆ ಹೆಚ್ಚು ಒತ್ತು ಕೊಟ್ಟ ಆಗಿದೆ.
ಕಾಮಿಡಿ ಕಿಲಾಡಿ ಖ್ಯಾತಿಯ ಗೋವಿಂದೇ ಗೌಡ, ನಯನಾ ಹಾಗೂ ಸಾಧುಕೋಕಿಲ ತಮ್ಮ ಪಾತ್ರಗಳಿಂದ ನಗಿಸಿದ್ದಾರೆ.
ಆರ್ ಪಿ ಪಟ್ನಾಯಕ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಇಂಪಾಗಿದ್ದು. ತಾಂತ್ರಿಕವಾಗಿ ಚಿತ್ರವು ಉತ್ತಮವಾಗಿದೆ.