ರಾಮನಗರ ರೈತನ ನೋವು-ನಲಿವು

0
20250914_200047

ರಾಮನಗರ ಚಿತ್ರ ವಿಮರ್ಶೆ

ರೇಟಿಂಗ್ : 3/5
ಚಿತ್ರ : ರಾಮನಗರ
ನಿರ್ಮಾಣ : ಸಿ ಕೆ ಮಂಜುನಾಥ್
ನಿರ್ದೇಶನ : ವಿಜಯ್ ರಾಜ್
ತಾರಾಗಣ : ಪ್ರಭುಸೂರ್ಯ, ಮೇಘನಾ, ಹಿಮಶ್ರೀ,
ಕೆಂಪೇಗೌಡ ಮುಂತಾದವರು

————————————————————–


ನಿರ್ದೇಶಕ ವಿಜಯ್ ರಾಜ್ ಕಥೆಯನ್ನು ಚೆನ್ನಾಗಿ ನಿರೂಪಿಸಿದ್ದು, ಪ್ರೀತಿ, ಪ್ರೇಮ, ಆಕ್ಷನ್ ಸೇರಿ ಹಲವು ಭಾವನೆಗಳನ್ನು ಕಥಯಲ್ಲಿ ಮೂಡಿಸಿದ್ದಾರೆ.

ನಾಯಕ ರಾಘವ (ಫ್ರಭುಸೂರ್ಯ) ಹಳ್ಳಿಯಿಂದ ಬೆಂಗಳೂರಿಗೆ ಬಂದಿರುತ್ತಾನೆ, ಬೆಂಗಳೂರಿನಲ್ಲಿ ರೈತರ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳನ್ನು ತಪ್ಪಿಸಿ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿ ಎಂಬುದು ಪ್ರಭುಸೂರ್ಯ ಮತ್ತು ಸ್ನೇಹಿತ ಸುಲ್ತಾನ್ (ಕೆಂಪೇಗೌಡ) ಉದ್ದೇಶವಾಗಿರುತ್ತದೆ.
ದಲ್ಲಾಳಿಗಳಿಗೂ ನಾಯಕನಿಗೂ ಹಲವು ಬಾರಿ ಸಂಘರ್ಷ ಆಗುತ್ತದೆ, ನಾಯಕಿ ಹಿಮಶ್ರೀ ನಾಯಕನ ಬಳಿ ಪ್ರೀತಿ ನಿವೇಂದನೆ ಮಾಡಿಕೊಂಡರು, ನಾಯಕ ಒಪ್ಪವುದಿಲ್ಲ.ಚಿತ್ರದ ಮೊದಲ ಭಾಗ ಆಕ್ಷನ್‌ನಿಂದ ಕೊಡಿದು ಎರಡನೇಯ ಭಾಗದಲ್ಲಿ ನಾಯಕನ ಹಿಂದಿನ ಘಟನೆ ತೆರೆಯುತ್ತದೆ.

ಎರಡನೇಯ ಭಾಗದಲ್ಲಿ ಸಿನಿಮಾದ ನಿಜವಾದ ಕಥೆ ಶುರುವಾಗುತ್ತದೆ. ನಾಯಕ ಪ್ರಭುಸೂರ್ಯ ಇಂಜಿನಿಯರ್ ಮಾಡಿ, ಕೃಷಿಯಲ್ಲಿ ನಿರಂತರನಾಗಿರುತ್ತಾನೆ.ತಂದೆ-ತಾಯಿ ನಾಯಕನಿಗೆ ಹೆಣ್ಣು ಹುಡುಕಿದರು ಯಾರು ಕೊಡುವುದಿಲ್ಲ ಕಾರಣ ರೈತ ಎಂಬ ಕಾರಣಕ್ಕೆ, ಆದರೆ ನಾಯಕ ಮತ್ತೊಂಬ್ಬ ನಾಯಕಿ ಜಾನಕಿಯನ್ನು(ಮೇಘನಾ) ಪ್ರೀತಿಸುತ್ತಿರುತ್ತಾನೆ.
ಆದರೆ ನಾಯಕಿ ತಂದೆಗೆ ನಾಯಕ ಪ್ರಭುಸೂರ್ಯ ವ್ಯವಸಾಯ ಮಾಡುವುದು ಇಷ್ಟಇರದ ಕಾರಣ ಮದುವೆ ನಿರಾಕರಿಸುತ್ತಾರೆ. ಆಗ ನಾಯಕ ರಾಘವಾ ಏನು ಮಾಡುತ್ತಾನೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.
ನಾಯಕ ಪ್ರಭುಸೂರ್ಯ ಜಾನಕಿ ಜೊತೆ ಮದುವೆ ಆದರೂ ಬೇರೇ ಆಗಿ ಕೊನೆಯಲ್ಲಿ ಒಂದಾಗುತ್ತಾರೆ.ಯಾಕೆ ಬೇರಾಗುತ್ತಾರೆ..? ಹೇಗೆ ಒಂದಾಗುತ್ತಾರೆ ಎಂಬುದನ್ನು ತಿಳಿಯಲು ಚಿತ್ರ ನೋಡಿ.

ನಿರ್ದೇಶಕ ವಿಜಯ್ ರಾಜ್ ಹೆಣ್ಣು ಸಿಗದ ರೈತನ ತೂಳಲಾಟವನ್ನು ಚಿತ್ರದಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ. ನಾಯಕ ಪ್ರಭುಸೂರ್ಯ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ರೈತನ ಪಾತ್ರವಂತು ಪ್ರೇಕ್ಷಕರ ಮನಸ್ಸನ್ನು ಮೆಚ್ಚಿಸುತ್ತದೆ.
ಇನ್ನೂ ಕಾಮಿಡಿ ಪಾತ್ರಕ್ಕೆ ಅಷ್ಟೇ ಸೀಮಿಂತವಾಗಿದ ಕೆಂಪೇಗೌಡ ಈ ಚಿತ್ರದಲ್ಲಿ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾದ ಹಿಮಶ್ರೀ ಹಾಗೂ ಮೇಘನಾ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ. ಚಿತ್ರದಲ್ಲಿ ಎರಡು ಹಾಡುಗಳು ನೆನಪಿನಲ್ಲಿ ಉಳಿಯುತ್ತದೆ.

Share

Leave a Reply

Your email address will not be published. Required fields are marked *