ನೃತ್ಯವನ್ನೇ ಉಸಿರಾಗಿಸಿಕೊಂಡ ಯುವಕರ ಸ್ಪೂರ್ತಿದಾಯಕ ಕಥೆ

0
20261117_160251.jpg

ಶ್ರೀ ಮಂಜುನಾಥ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಿ ಹೇಮಾವತಿ ಅವರು ನಿರ್ಮಿಸಿರುವ, ನೈಜ ಬದುಕಿನ ಘಟನೆಗಳ ಪ್ರೇರಣೆಯೊಂದಿಗೆ ಸಿದ್ಧಗೊಂಡಿರುವ ‘ಜನರಿಂದ ನಾನು ಮೇಲೆ ಬಂದೆ’ ಚಿತ್ರ ಈಗ ಅಧಿಕೃತವಾಗಿ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ನೃತ್ಯವನ್ನೇ ಜೀವನದ ಗುರಿಯಾಗಿಸಿಕೊಂಡಿರುವ ಯುವಕರ ಕನಸು ಹಾಗೂ ಅದನ್ನು ನನಸಾಗಿಸುವ ಹಾದಿಯಲ್ಲಿ ಅವರು ಎದುರಿಸುವ ಸವಾಲುಗಳೇ ಈ ಚಿತ್ರದ ಪ್ರಮುಖ ಕಥಾಹಂದರವಾಗಿದೆ.

ನವಿಲುಗರಿ ನವೀನ್ ಪಿ.ಬಿ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ, ಕನಕಪುರ ರಸ್ತೆಯ ನೆಟ್ಟಿಗೆರೆ ಬೋಳಾರೆ ಗ್ರಾಮದ ಯುವ ಪ್ರತಿಭೆ ಗಂಧರ್ವರಾಜ್ ಶಂಕರ್ ಮೊದಲ ಬಾರಿಗೆ ನಾಯಕನಾಗಿ ಬಣ್ಣಹಚ್ಚಿದ್ದು, ತಮ್ಮ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಭರವಸೆ ಗೆದ್ದಿದ್ದಾರೆ. ಇವರಿಗೆ ನಾಯಕಿಯರಾಗಿ ಆಪ್ತಿ ಪಟವರ್ಧನ್ ಮತ್ತು ಕೃತಿಕಾ ದಿವಾಕರ್ ಸಾಥ್ ನೀಡಿದ್ದಾರೆ. ತಾಯಿಯ ಭಾವನಾತ್ಮಕ ಪಾತ್ರದಲ್ಲಿ ಮಧುಶ್ರೀ ಅವರ ನಟನೆ ಮನಮುಟ್ಟುವಂತಿದ್ದರೆ, ಆಟೋ ಚಾಲಕನ ಪಾತ್ರದಲ್ಲಿ ಶಿವಣ್ಣ ತೆರೆಯ ಮೇಲೆ ಮಿಂಚಿದ್ದಾರೆ.

ಗಂಧರ್ವರಾಜ್ ಶಂಕರ್

ಯುವ ಸಂಗೀತ ನಿರ್ದೇಶಕ ಪ್ರಣವ್ ಸತೀಶ್ ಅವರ ಸಂಗೀತ ಸಂಯೋಜನೆಯಲ್ಲಿ ಐದು ಇಂಪಾದ ಹಾಡುಗಳು ಮೂಡಿಬಂದಿದ್ದು, ಕೇಳುಗರ ಮನಗೆದ್ದಿವೆ. ಪೃಥ್ವಿರಾಜ್ ಸಂಕಿ, ಭುವನ್ ಎಂ.ಎಸ್. ಮತ್ತು ನವೀನ್ ಪಿ.ಬಿ. ರಚಿಸಿರುವ ಈ ಗೀತೆಗಳಿಗೆ ಯಶಸ್ವಿನಿ ಕಾಪ್ಸೆ, ಷಣ್ಮುಖ ಗೋವಿಂದ ರಾಜು, ರೇವಣ್ಣ ಸಿದ್ದ ಫುಲಾರಿ ಹಾಗೂ ಎ.ಆರ್. ತನ್ವೀರ್ ಧ್ವನಿಯಾಗಿದ್ದಾರೆ.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿಜಿತ್, ಶಿವಕುಮಾರ್ ಆರಾಧ್ಯ, ಮಧುಶ್ರೀ, ಶಿವಣ್ಣ, ಚಾಮರಾಜ ಮಾಸ್ಟರ್, ಶಾಂತಕುಮಾರಿ, ಹಿರಿಯ ಕಲಾವಿದೆ ಶ್ಯಾಮಲಮ್ಮ, ಸುನಂದಾ ಕಲಬುರಗಿ, ಶೈಲಜಾ ದ್ವಾರಕೀಶ್, ಜಯಪ್ರಕಾಶ್ ನಾಗತಿಹಳ್ಳಿ, ಪ್ರವೀಣ ಕುಲಕರ್ಣಿ, ವಿಶಾಲ ಸತೀಶ್, ಡಾ. ಅಕ್ಷತಾ, ಯಶು ರಾಜು ಹಾಗೂ ಅನಿಲ್ ಕುಮಾರ್ ಬಾಬಿ ಅಭಿನಯಿಸಿದ್ದಾರೆ.

ಗೌತಮ್ ಟಿ.ಆರ್. ಅವರ ಛಾಯಾಗ್ರಹಣ ಮತ್ತು ಸಂಕಲನ ಈ ಚಿತ್ರಕ್ಕಿದ್ದು, ಬೆಂಗಳೂರು ಹಾಗೂ ಮೇಲುಕೋಟೆಯ ಸುಂದರ ತಾಣಗಳಲ್ಲಿ ಸಿನಿಮಾವನ್ನು ಸೆರೆಹಿಡಿಯಲಾಗಿದೆ.

Share

Leave a Reply

Your email address will not be published. Required fields are marked *