ಸರ‍್ಸೇ ನಿನ್ನ ಸೆರಗಾ ಸರ್ಸೇ ಎಂದಬಾಲಿವುಡ್ ದಿವಾ ನೋರಾ ಫತೇಹಿ

0
20260315_150316.jpg

ಆಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷಿತ ಚಿತ್ರ ಹಾಗೂ ಜೋಗಿ ಪ್ರೇಮ್ ನಿರ್ದೇಶನದ 6ನೇ ಸಿನಿಮಾ ಕೆಡಿ ಏಪ್ರಿಲ್ 30 ರಂದು ಬಿಡುಗಡೆ ಆಗುತ್ತಿದೆ, ಇದೊಂದು ಬಿಗ್ ಬಜೆಟ್ ಹಾಗೂ ಪ್ಯಾನ್ ಇಂಡಿಯಾ ಚಿತ್ರ ಆಗಿರುವುದರಿಂದ ಬೇರೆ ಭಾಷೆಯ ನಟರುಗಳು ನಟಿಸಿದ್ದಾರೆ. ಧ್ರುವ ಸರ್ಜಾಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಬಿಡುಗಡೆ ಆದ ಮೂರು ಹಾಡುಗಳು ಸೌಂಡು ಮಾಡುತ್ತಿದ್ದು, ಇದೀಗ “ಸರ‍್ಸೇ ಸರ‍್ಸೇ ನಿನ್ನ ಸೆರಗಾ ಸರಿಸೇ“….. ಎಂಬ ಹಾಡಿನ (ಲಿರಿಕಲ್ ಸಾಂಗ್) ಬಿಡುಗಡೆ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಪ್ರೇಮ್.. ಬಿಡುಗಡೆ ಆದ ಮೂರು ಹಾಡುಗಳನ್ನು ಹಿಟ್ ಮಾಡಿದ್ದೀರಿ, ನಾಲ್ಕನೇ ಸಾಂಗ್‌ನ್ನು ರಕ್ಷಿತಾ ಪ್ರೇಮ್ ಬಿಡುಗಡೆ ಮಾಡಿದ್ದಾರೆ. ಮೊದಲ ಗೀತೆಯನ್ನು ಸಹ ಅವರೇ ರಿಲೀಸ್ ಮಾಡಿದ್ದರು, ಸದ್ಯದಲ್ಲೇ ಟ್ರೈಲರ್ ರಿಲೀಸ್ ಪ್ಲಾನ್ ಮಾಡುತ್ತಿದ್ದೇವೆ.ಎಂದರು.

1970-75ರ ಸಮಯದಲ್ಲಿ ನಡೆದ ನೈಜಘಟನೆ ಆಧಾರಿತ ಗ್ಯಾಂಗ್‌ಸ್ಟರ್ ಕಥಾಹಂದರ ಇರುವ ಕೆಡಿ ಚಿತ್ರವನ್ನು ಕೆ.ವಿ.ಎನ್. ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಅವರು ನಿರ್ಮಾಣ ಮಾಡಿದ್ದಾರೆ.
ಜೋಗಿ ಪ್ರೇಮ್ ನಿರ್ದೇಶನದ ಚಿತ್ರಗಳಲ್ಲಿ ಹಾಡುಗಳು ಒಂದಕ್ಕಿಂತ ಒಂದು ಸಾಂಗ್‌ಗಳು ಹೈಲೈಟ್ ಆಗಿರುತ್ತವೆ, ಅದೇ ರೀತಿ ಕೆಡಿ ಚಿತ್ರದಲ್ಲೂ ಸಹ ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಅರ್ಜುನ್ ಜನ್ಯ ಇಡೀ ಚಿತ್ರದ ಮ್ಯೂಸಿಕ್‌ನಲ್ಲಿ ಮ್ಯಾಜಿಕ್ಕನ್ನೇ ಮಾಡಿದ್ದಾರೆ,

ನಾಯಕ ಧ್ರುವ ಸರ್ಜಾ ಮಾತನಾಡಿ.. ನಮ್ಮ ಚಿತ್ರದ 4ನೇ ಹಾಡಿದು, ರಕ್ಷಿತಾ ಮೇಡಂ ಅವರ ದೊಡ್ಡ ಸಪೋರ್ಟ್ ಚಿತ್ರಕ್ಕಿದೆ. ಇನ್ನು ಈ ಸಿನಿಮಾದ ಕ್ಯಾಪ್ಟನ್, ನಿಜವಾದ ಹೀರೋ ಅಂದ್ರೆ ಪ್ರೇಮ್ ಮತ್ತು ಅರ್ಜುನ್ ಜನ್ಯ ಪ್ರೇಮ್ ಸೇರಿ ಇಷ್ಟು ದೊಡ್ಡ ಆಲ್ಬಂ ಆಗಿದೆ. ಚಿತ್ರಕ್ಕೆ ಲಂಡನ್‌ನಲ್ಲಿ ಲೈವ್ ಮ್ಯೂಸಿಕ್ ಮಾಡಿಸಿದ್ದಾರೆ, ಈಗ ಲೈವ್ ಮ್ಯೂಸಿಕ್ ತುಂಬಾ ಕಮ್ಮಿಯಾಗಿದೆ. ಆಲ್ಬಂ ಇಷ್ಟು ಚೆನ್ನಾಗಿ ಆಗಿದೆ ಎಂದರೆ ಅದಕ್ಕೆ ಜನ್ಯ ಅವರೇ ಕಾರಣ ಎಂದರು.

ರಕ್ಷಿತಾ ಪ್ರೇಮ್ ಮಾತನಾಡಿ.. ನಾನು ಚಿತ್ರರಂಗಕ್ಕೆ ಬಂದು 24 ವರ್ಷ ಆಯ್ತು. ಏಪ್ರಿಲ್ 30ಕ್ಕೆ ಕೆಡಿ ರಿಲೀಸ್ ಆಗುತ್ತಿದೆ. ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿದ್ದು, ಸಿನಿಮಾ ಕೂಡ ಹಿಟ್ ಆಗುವ ಭರವಸೆಯಿದೆ ಎಂದರು.

ನೋರಾ ಫತೇಹಿ ಅದ್ಭುತವಾದ ಡ್ಯಾನ್ಸರ್, ಅವರ ಜತೆ ಕೆಲಸ ಮಾಡಿದ್ದು ತುಂಬಾ ಖುಷಿಯಾಗಿದೆ ಎಂದು ನಾಯಕಿ ರೀಷ್ಮಾ ನಾಣಯ್ಯ ಹೇಳಿದರು.

ಕಾರ್ಯಕ್ರಮದ ಕೇಂದ್ರಬಿಂದು ನಟಿ ನೋರಾ ಫತೇಹಿ ಮಾತನಾಡಿ ನಾನು ಕೊನೆಯ ಕ್ಷಣದಲ್ಲಿ ಈ ಚಿತ್ರತಂಡ ಸೇರಿದೆ. ಕನ್ನಡದಲ್ಲಿ ಕೆಡಿ ಮೊದಲ ಚಿತ್ರ, ಪ್ರೇಮ್ ಟ್ಯಾಲೆಂಟ್ ನಿರ್ದೇಶಕ ಎಂದು ಮೆಚ್ಚಿಕೊಂಡರು.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ.. ಕೆಡಿ ಪ್ರೇಮ್ ಅವರ ಜೊತೆ ನಾಲ್ಕನೇ ಚಿತ್ರ. ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲಿರುತ್ತದೆ. ಅದೇ ಸ್ಟೈಲ್‌ನಲ್ಲಿ ಮ್ಯೂಸಿಕ್ ಮಾಡಿದ್ದೇನೆಎಂದರು.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಹೀಗೆ ಹೆಸರಾಂತ ಕಲಾವಿದರ ನಟಿಸಿದ್ದಾರೆ. ಈ ಚಿತ್ರಕ್ಕೆ ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಅವರ ಕ್ಯಾಮೆರಾ ವರ್ಕ್ ಇದೆ.

Share

Leave a Reply

Your email address will not be published. Required fields are marked *