ಮೆಜೆಸ್ಟಿಕ್- 2 ಟ್ರೇಲರ್ ರಿಲೀಸ್

0
20260219_155527.jpg

25 ವರ್ಷಗಳ ಹಿಂದೆ ದರ್ಶನ್ ನಾಯಕನಾಗಿ ನಟಿಸಿದ “ಮೆಜೆಸ್ಟಿಕ್” ಚಿತ್ರ ಸೂಪರ್-ಡೂಪರ್ ಹಿಟ್ ಆಗಿತ್ತು. ಇದೀಗ ಅದೇ ಹೆಸರಿನ ಮತ್ತೊಂದು ಚಿತ್ರ ನಿರ್ಮಾಣವಾಗಿದ್ದು, ಚಿತ್ರಕ್ಕೆ ಮೆಜೆಸ್ಟಿಕ್- -2 ಎಂಬ ಟೈಟಲ್ ಇಡಲಾಗಿದೆ.
ಅಮ್ಮಾ ಎಂಟರ್‌ಪ್ರೈಸಸ್ ಮೂಲಕ ಚಿತ್ರದುರ್ಗದ ಹೆಚ್.ಆನಂದಪ್ಪ ಅವರು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರದ ಟ್ರೇಲರ್ ನ್ನು ನಿರ್ಮಾಪಕರ ಪತ್ನಿ ಶ್ರೀಮತಿ ನಿರ್ಮಲಮ್ಮ ಅವರು ಬಿಡುಗಡೆ ಮಾಡಿದರು.

ಹಿರಿಯ ನಿರ್ಮಾಪಕ ಶಿಲ್ಪಾಶ್ರೀನಿವಾಸ್ ಅವರ ಪುತ್ರ ಭರತ್‌ಕುಮಾರ್ ನಾಯಕನಾಗಿ, ಸಂಹಿತಾ ವಿನ್ಯಾ ನಾಯಕಿಯಾಗಿ , ತಾಯಿ ಪಾತ್ರದಲ್ಲಿ ಶೃತಿ ಹಾಗೂ ಮಾಲಾಶ್ರಿ ಅವರು ಕೂಡ ನಟಿಸಿದ್ದಾರೆ.
ಪ್ರಸ್ತುತ ಮೆಜೆಸ್ಟಿಕ್‌ನಲ್ಲಿ ನಡೆಯುವ ವ್ಯವಹಾರಗಳು, ಅಕ್ರಮ ಚಟುವಟಿಕೆಗಳ ಜತೆ ರೌಡಿಸಂ ಹೇಗೆಲ್ಲ ನಡೆಯುತ್ತದೆ ಎನ್ನುವ ಕಥಾಸಾರಂಶ ಇರುವ ಮೆಜೆಸ್ಟಿಕ್ 2 ಚಿತ್ರವು ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡುವ ತಯಾರಿ ನಡೆಸುತ್ತಿದೆ ಚಿತ್ರತಂಡ.

ಚಿತ್ರದ ನಾಯಕ ಭರತ್‌ಕುಮಾರ್ ಮಾತನಾಡಿ.. ನನ್ನನ್ನು ನಾಯಕನನ್ನಾಗಿ ಚಿತ್ರರಂಗಕ್ಕೆ ಪರಿಚಯಿಸಿದ ನಿರ್ಮಾಪಕರಿಗೆ ನಾನು ಜೀವನ ಪೂರ್ತಿ ಅಭಾರಿ, ಇಷ್ಟು ದೊಡ್ಡ ಟೈಟಲ್ ಇರುವ ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಜತೆಗೆ ನಮ್ಮ ತಂದೆಯ ಸಪೋರ್ಟ್ ಕೂಡ ದೊಡ್ಡದು. ಚಿತ್ರದ ಶೂಟಿಂಗ್ ತುಂಬಾ ಚೆನ್ನಾಗಿ ನಡೆಯಿತು, ಆನಂತರ ಸಾಕಷ್ಟು ತೊಂದ್ರೆ ಅನುಭವಿಸಬೇಕಾಯ್ತು. ನಮ್ಮನ್ನು ತುಳಿಯುವವರೇ ಜಾಸ್ತಿ. ಅವರನ್ನೆಲ್ಲ ಎದುರಿಸಿ ನಿಂತು ಗೆಲ್ಲಬೇಕು, ನಮ್ಮ ಸಿನಿಮಾದಿಂದ ಹೆಸರು ಮಾಡಬೇಕು, ಕೆಲಸದಿಂದ ಗುರುತಿಸಿಕೊಳ್ಳಬೇಕು ಅಂತ ನಮ್ಮ ನಿರ್ಮಾಪಕರೇ ಹೇಳಿಕೊಟ್ಟಿದ್ದು,
ಮೆಜೆಸ್ಟಿಕ್ ಸುತ್ತಮುತ್ತಲಿನ ಜಗತ್ತು ಹೇಗಿರುತ್ತೆ ಅಂತ 10 ದಿನ ಸುತ್ತಾಡಿ ನೋಡಿದೆ, ಬೆಳಗಿನ ಜಾವ, ರಾತ್ರಿ ವೇಳೆ ಓಡಾಡಿ ಅಲ್ಲಿ ಹೇಗೆಲ್ಲ, ಏನೆಲ್ಲ ನಡೆಯುತ್ತೆ ಎಂದು ಅರಿತಿದ್ದೇನೆ ಎಂದು ಹೇಳಿದರು.

ನಿರ್ಮಾಪಕ ಆನಂದಪ್ಪ ಮಾತನಾಡಿ.. ನಾನು 4 ಬಾರಿ ಎಂಎಲ್‌ಎ ಎಲೆಕ್ಷನ್‌ಗೆ ನಿಂತು ಸೋತೆ. ಆದರೆ, ಈ 2 ಸಿನಿಮಾದಿಂದ ನೂರು ವರ್ಷಗಳಿಗಾಗುವಷ್ಟು ಅನುಭವ ಪಡೆದೆ. ಪ್ರೊಡ್ಯೂಸರ್ ಆಗಬೇಕು ಅನ್ನೋದು ನನ್ನ ಕನಸು. ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದೆ, ಹೀರೋ ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ ಎಂದರು.

ನಾಯಕಿ ಸಂಹಿತಾ ವಿನ್ಯಾ ಮಾತನಾಡಿ..ಶೃತಿ, ಮಾಲಾಶ್ರೀ ಅಂಥವರ ಜತೆ ಆಕ್ಟ್ ಮಾಡಿದ್ದು ತುಂಬಾ ಖುಷಿಯಾಯ್ತು, ಸಾಕಷ್ಟು ಏಳು ಬೀಳುಗಳನ್ನು ಕಂಡತಹ ಚಿತ್ರವಿದು, ಬಿಡುಗಡೆಗೆ ನಾನೂ ಸಹ ಕಾಯುತ್ತಿದ್ದೇನೆ ಎಂದು ಹೇಳಿದರು,

ವಿನು ಮನಸು ಸಂಗೀತ ನೀಡಿರುವ 5 ಹಾಡುಗಳಿದ್ದು, ವೀನಸ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದೆ.

Share

Leave a Reply

Your email address will not be published. Required fields are marked *