ಮೊಬೈಲ್ ಲೋಕದಲ್ಲಿ ವಿದ್ಯಾರ್ಥಿಗಳ ಲೆಕ್ಕಾಚಾರದ ಮಗ್ಗಿಪುಸ್ತಕ

0
20260214_222221.jpg

ರೇಟಿಂಗ್ : 3.5/5

ಚಿತ್ರ : ಮಗ್ಗಿಪುಸ್ತಕ


ನಿರ್ಮಾಪಕ : ಯತಿರಾಜ್


ನಿರ್ದೇಶಕ : ಹರಿವರಾಸನಂ


ತಾರಾಗಣ : ರಾನ್ವಿ ಶೇಖರ್, ರಕ್ಷಾ ಗೌಡ, ರಂಜನ್ ಕಾಸರಗೋಡು,
ಕೃಷ್ಣ ಮಹೇಶ್, ಮೈಸೂರು ರಮನಂದ್, ಮುಂತಾದವರು..

——————————————————————————————————–

ಪ್ರಸುತ್ತ ಜೀವನದಲ್ಲಿ ಮೊಬೈಲ್ ಒಂದು ಮೂಲಭೂತ ಅವಶ್ಯಕತೆಯಲ್ಲಿ ಒಂದಾಗಿದೆ. ಈಗ ಮೊಬೈಲ್ ಇಲ್ಲದೆ ಇರು ಮನೆಯೇ ಇಲ್ಲ. ಮೊಬೈಲ್‌ನಿಂದ ಆಗುವ ಅನಾನುಕೂಲಗಳು, ಮಕ್ಕಳ ಮೇಲೆ ಒತ್ತಡ ಹೇರುವ ಪೋಷಕರು ಮತ್ತು ಬಡಕುಟುಂಬ ಪ್ರತಿಭಾವಂತ ವಿದ್ಯಾರ್ಥಿಗಳ ಕಷ್ಟಗಳ ಕತೆಯಿರುವ “ಮಗ್ಗಿಪುಸ್ತಕ” ಚಿತ್ರವು ಈ ವಾರ ತೆರೆಕಂಡಿದೆ.

ಭಾಗ್ಯ (ರಕ್ಷಾ ಗೌಡ)ಗೆ ಮೂರು ಮಕ್ಕಳಿದ್ದು, ಮನೆಕೆಲಸ ಮಾಡಿ ಜೀವನ ನಡೆಸುತ್ತಿರುತ್ತಾರೆ. ಅವನಿ(ರಾನ್ವಿ ಶೇಖರ್) ಓದಿನಲ್ಲಿ ಕ್ಕಾಸ್‌ಗೆ ಮೊದಲು, ತಂದೆಯ ಆಸೆಯಂತೆ ಖಾಸಗಿ ಶಾಲೆಯಲ್ಲಿ ಓದುತ್ತಿರುತ್ತಾಳೆ. ಹುಲಿಯಪ್ಪ (ಮೈಸೂರು ರಮನಂದ್) ಹೋರಾಟಗಾರ ಅವನಿಯ ತಾತ ಕುಟುಂಬಕ್ಕೆ ಕೈಲಾದಷ್ಟು ಸಹಾಯ ಮಾಡುತ್ತಿರುತ್ತಾರೆ.

ಅದೇ ಸಮಯದಲ್ಲಿ ಕರೋನಾ ಬಂದು ಆನ್ ಲೈನ್ ಕ್ಲಾಸ್‌ಗಳು ಶುರುವಾಗುತ್ತದೆ. ಬಡಕುಟುಂಬವಾದರಿAದ ಅವನಿ ಗೆ ಸ್ಮಾಟ್ ಪೋನ್ ಇರುವುದಿಲ್ಲ ಹಾಗಾಗಿ ತರಗತಿಗೆ ಹಾಜಾರಾಗಲು ಆಗುವುದಿಲ್ಲ. ಸ್ನೇಹಿತರು ಕೂಡ ಸಹಾಯ ಮಾಡುವುದಿಲ್ಲ. ಕಷ್ಟಪಟ್ಟು ಹಣವನ್ನು ಕೂಡಿಟ್ಟು ಕಡೆಗೂ ಮೊಬೈಲ್ ಖರೀದಿಸುತ್ತಾರೆ ಆದರೆ ಆ ಮೊಬೈಲ್‌ನಿಂದ ತೊಂದೆರೆಯಾಗಿ ಅವಮಾನವನ್ನು ಭಾಗ್ಯಮ್ಮ ಎದುರಿಸ ಬೇಕಾಗುತ್ತದೆ.

ಕೃಷ್ಣ ಮಹೇಶ್ ಗ್ಯಾಂಗ್ ನಿಗೂಢ ಕೋಡ್‌ವರ್ಡ್ ತಿಳಿಯಲು ಅವನಿ ಕುಟುಂಬವನ್ನು ಅಪಹರಿಸಿ ಡಾಕ್ಟರ್ ಧನ್‌ಪಾಲ್ (ವರ್ಧನ್) ಫಾರ್ಮ್ ಹೌಸ್‌ನಲ್ಲಿ ಇರಿಸಿರುತ್ತಾರೆ. ಅದೇ ಸ್ಥಳದಲ್ಲಿ ಡಾಕ್ಟರ್ ಮಗ ಮೃತ್ಯುಂಜಯ (ರಂಜನ್ ಕಾಸರಗೋಡು) ಆರೋಗ್ಯದ ತೊಂದರೆಯಾಗಿ ಮನೆಯಲ್ಲಿ ಇರುತ್ತಾನೆ. ಆಗ ಮೃತ್ಯುಂಜಯ ಹಾಗೂ ಅವನಿ ಭೇಟಿಯಾಗುವ ಸಂದರ್ಭ ಬರುತ್ತದೆ. ಇದರಿಂದ ಅವನಿ ಗೆ ಸಹಾಯವಾಗುತ್ತದೆ.

ಮುಂದೆ ಕೃಷ್ಣ ಮಹೇಶ್ ಗ್ಯಾಂಗಿನಿAದ ಅವನಿ ಕುಟುಂಬ ಹೇಗೆ ತಪ್ಪಿಸಿಕೊಳ್ಳುತ್ತದೆ..? ಆ ನಿಗೂಢ ಕೋಡ್‌ವರ್ಡ್ ಏನು…? ಅವನಿ 10ನೇ ತರಗತಿ ಪಾಸುಗುತ್ತಾಳ..? ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.

ಚಿತ್ರದಲ್ಲಿ ದೊಡ್ಡ ತಾರಬಳಗವಿದ್ದು, ಮೊಬೈಲ್‌ನ್ನು ವಿದ್ಯಾರ್ಥಿಗಳು ಹೇಗೆಲ್ಲ ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬುದನ್ನು ನಿರ್ದೇಶಕರು ತೆರೆಮೇಲೆ ತೋರಿಸುವಲ್ಲಿ ಯಶಸ್ವಿ ಆಗಿದ್ದಾರೆ. ರಕ್ಷಾ ಗೌಡ ಅವರು ಪಾತ್ರಕ್ಕೆ ಜೀವತುಂಬಿದ್ದು, ರಾನ್ವಿ ಶೇಖರ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಇನ್ನೂ ರಂಜನ್ ಕಾಸರಗೋಡು ಪಾತ್ರ ಗಮನ ಸೆಳೆಯುತ್ತದೆ ಹಾಗೆಯೇ ಕೃಷ್ಣ ಮಹೇಶ್ ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ.

ಶಾಲೆ ಪ್ರಾಂಶುಪಾಲರ ಪಾತ್ರದಲ್ಲಿ ರಘು ರಾಮನಕೊಪ್ಪ ಅಧ್ಬುತವಾಗಿ ನಟಿಸಿದ್ದಾರೆ. ಡಾಕ್ಟರ್ ಪಾತ್ರದಲ್ಲಿ ವರ್ಧನ್ ವಿಭಿನ್ನವಾಗಿ ಕಾಣುತ್ತಾರೆ. ಇನ್ನೂ ಚಿತ್ರದಲ್ಲಿ ವಾಣಿಶ್ರೀ, ಹಿರಿಯ ಕಲಾವಿದೆ ಗಿರಿಜಾ ಲೋಕೇಶ್, ಚಂದ್ರಪ್ರಭ, ಶೋಭ ರಾಜ್, ಬಾಲ ರಾಜ್ವಾಡಿ ಅವರ ಪಾತ್ರ ಕಥೆಗೆ ಪೂರಕವಾಗಿದೆ.

ಚಿತ್ರದಲ್ಲಿ ಮೂರು ಹಾಡುಗಳು ಕೇಳಲು ಇಂಪಾಗಿದೆ. ಒಟ್ಟಾರೆ “ಮಗ್ಗಿಪುಸ್ತಕ” ಕುಟುಂಬ ಸಮೇತ ನೋಡಬಹುದಾದ ಚಿತ್ರವಾಗಿದೆ.

Share

Leave a Reply

Your email address will not be published. Required fields are marked *