“ಸೆಪ್ಟೆಂಬರ್ 10” ಬದುಕಲು ಕಲಿಯಿರಿ
ಸೆಪ್ಟೆಂಬರ್ 10 ಸಿನಿಮಾ ವಿಮರ್ಶೆ
ರೇಟಿಂಗ್ : 3.5/5
ಚಿತ್ರ : ಸೆಪ್ಟೆಂಬರ್ 10
ನಿರ್ದೇಶಕ : ಓಂ ಸಾಯಿ ಪ್ರಕಾಶ್
ನಿರ್ಮಾಣ : ರಾಜಮ್ಮ ಸಾಯಿಪ್ರಕಾಶ್
ತಾರಾಗಣ : ಶಶಿಕುಮಾರ್,ರಮೇಶ್ ಭಟ್,
ಶ್ರೀನಿವಾಸ್ ಮೂರ್ತಿ, ಪದ್ಮವಾಸಂತಿ,
ಶ್ರೀರಕ್ಷಾ ಶಿವಕುಮಾರ್,
ರಿಷಿತ ಮಲ್ನಾಡ್ ಮತ್ತಿತರರು..
————————————————————-
ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟ ಬಂದೇ ಬರುತ್ತೇ, ಆ ಕಷ್ಟವನ್ನು ಪರಿಹಾರಿಸಲು ಉಪಾಯ ಮಾಡಬೇಕೆ ವಿನ:ಹ ಸಮಸ್ಯೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಸಮಸ್ಯೆಗಳಿರುತ್ತವೆ ಹಾಗೆಯೇ ಆ ಸಮಸ್ಯೆಗಳಿಗೂ ಪರಿಹಾರವಿರುತ್ತದೆ ಎಂಬ ಸಂದೇಶವಿರುವ ಸಿನಿಮಾ “ಸೆಪ್ಟೆಂಬರ್ 10”.
ಹಿರಿಯ ನಿರ್ದೇಶಕ ಓಂಸಾಯಿ ಪ್ರಕಾಶ್ ನಿರ್ದೇಶನದ 105 ನೇ ಸಿನಿಮಾ ಇದಾಗಿದ್ದು, ಸಾಂಸರಿಕ ಕಥೆಯನ್ನು ನಿರ್ದೇಶಿಸಿದ ಅವರು ಸಾಮಾಜಿಕ ಕಳಕಳಿ ಇರುವ ಚಿತ್ರವನ್ನು ಬೆಳ್ಳಿತೆರೆಗೆ ತಂದಿದ್ದಾರೆ.
ಹಳ್ಳಿಯ ಜಮೀನ್ದಾರನ ಒಬ್ಬಳೇ ಮಗಳು ಕಾಲೇಜಿನಲ್ಲಿ ಓದುತ್ತಿರುತ್ತಾಳೆ, ಅದೇ ಜಮೀನ್ದಾರ ಮನೆಯಲ್ಲಿ ಕೂಲಿ ಕೆಲಸ ಮಾಡುವ ಮಗ ಕೂಡ ಅದೇ ಕಾಲೇಜಿನಲ್ಲಿ ಅಗ್ರಿಕಲ್ಚರ್ ಡಿಗ್ರಿ ಮಾಡುತ್ತಿರುತ್ತಾನೆ. ಇವರಿಬ್ಬರ ನಡುವೆ ಪ್ರೀತಿ ಉಂಟಾಗುತ್ತದೆ. ಇವರ ಪ್ರೀತಿಯನ್ನು ಪೋಷಕರು ವಿರೋಧಿಸುತ್ತಾರೆ.
ವ್ಯವಸಾಯ ನಂಬಿಕೊಂಡು ಜೀವನ ನಡೆಸುವ ರೈತ ತಾನು ಬೆಳೆದ ಬೆಳಗೆ ಉತ್ತಮ ಬೆಲೆ ಸಿಗದೆ, ತಮ್ಮ ಮಗಳಿಗೆ ಮದುವೆ ಮಾಡಿ ವರದಕ್ಷಣೆ ಕೊಡಲಾಗದೆ, ಮಗಳು ಗಂಡನ ಮನೆಯಲ್ಲಿ ಪಡುವ ಕಷ್ಟಗಳನ್ನು ನೋಡಿ ವ್ಯತನೆ ಪಡುವ ತಂದೆ-ತಾಯಿ ಕಥೆ.
ಹಾಗಿಯೇ ಓದಿಗಿಂತ ಕ್ರಿಕೆಟ್ ಮೇಲೆ ಆಸಕ್ತಿ ಇರುವ ಮಗನಿಗೆ ಆಟ ಬೇಡ ಓದು ಎಂದು ಹಿಂಸೆ ಕೊಡುವ ಅಪ್ಪನ ಕೆಟ್ಟ ವರ್ತನೆಯ ಕಥೆ.
ತನ್ನ ಮಗಳು ಹೆಚ್ಚಿನ ಅಂಕ ಪಡೆದು ಶಾಲೆಗೆ ಮೊದಲು ಬರಬೇಕು ಎಂದು ಮಗಳ ಮೇಲೆ ಒತ್ತಡ ಹೇರುವ ತಾಯಿ, ಇದರ ಪರಿಣಾಮ ಮಗಳು ಅನುಭವಿಸುವ ಯಾತನೆಯ ಕಹಾನಿ.
ಪ್ರೀತಿಸಿ ಮದುವೆಯಾದ ಹೆಂಡತಿಗೆ ಐಷಾರಾಮಿ ಜೀವನ ಕೊಡಲು, ಸಾಲ ಮಾಡಿ ಸಾಲಗಾರರಿಂದ ಕಿರುಕುಳ ಅನುಭವಿಸುವ ಗಂಡನ ಕಥೆ.
ಒಳ್ಳೆ ಕೆಲಸ, ಮನೆ, ಹಣ ಇದ್ದು, ಉತ್ತಮವಾಗಿ ಜೀವನ ಸಾಗುತ್ತಿದರು ಮತ್ತಷ್ಟು ಹಣ, ಆಸ್ತಿ ಸಂಪಾದನೆ ಮಾಡಬೇಕೆಂದು ಗಂಡನಿಗೆ ಕಿರುಕುಳ ಕೊಡುವ ಹೆಂಡತಿ,
ಹೀಗೆ ಐದು ಕುಟುಂಬಗಳ ಕಥೆಯಲ್ಲಿ ಸಮಸ್ಯೆಯನ್ನು ಎದುರಿಸಲಾಗದೆ ಮಾನಸಿಕವಾಗಿ ಸೋತು ಆತ್ಮಹತ್ಯೆಯ ನಿರ್ಧಾರಕ್ಕೆ ಬರುತ್ತಾರೆ, ಅವರ ಮನಸ್ಥಿತಿಯನ್ನು ಯಾರು..? ಹೇಗೆ..? ಬದಲಾಯಿಸುತ್ತಾರೆ ಎಂಬುದನ್ನು ತಿಳಿಯಲು ಈ ಸಿನಿಮಾ ನೋಡಬೇಕು.
ಚಿತ್ರದಲ್ಲಿ ಶಶಿಕುಮಾರ್ ಮನೋವೈದ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಭವಿ ಹಾಗೂ ಹಿರಿಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದು, ತಮ್ಮ ಪಾತ್ರಗಳಿಗೆ ಜೀವ ತುಂಬಿದರೆ. .