ಯಾರಿಗೂ ಹೇಳ್ಬೇಡಿ ಅಕ್ಟೋಬರ್ 24ಕ್ಕೆ ರಿಲೀಸ್
1994ರಲ್ಲಿ ಬಿಡುಗಡೆ ಆಗಿ ಹಿಟ್ ಆದ ಯಾರಿಗೂ ಹೇಳ್ಬೇಡಿ ಹೆಸರಿನ ಮತ್ತೊಂದು ಚಿತ್ರ ಇದೇ ತಿಂಗಳು ಬಿಡುಗಡೆ ಆಗುತ್ತಿದೆ. ಮೊದಲು ಅಕ್ಟೋಬರ್ 17 ರಂದು ಬಿಡುಗಡೆ ಎಂದು ಅನ್ಸೌಸ್ ಮಾಡಿದ ಚಿತ್ರತಂಡ, ಇದೀಗ ಚಿತ್ರವನ್ನು ಅಕ್ಟೋಬರ್ 24ರಂದು ಬಿಡುಗಡೆ ಮಾಡಲು ಸಿದ್ದವಾಗಿದೆ.
ಸುನಿಲ್ ಕುಮಾರ್ ಮತ್ತು ಹರೀಶ್ ಅಮ್ಮಿನೇನಿ ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಶಿವಗಣೆಶ್ ನಿರ್ದೇಶನ ಮಾಡಿದ್ದಾರೆ. ಯಾರೇ ನೀನು ಮೋಹಿನಿ ಖ್ಯಾತಿಯ ಚೇತನ್ ವಿಕ್ಕಿ ನಾಯಕನಾಗಿ ಚೈತ್ರಾ ಜೆ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ.
ಕಿಚ್ಚ ಸುದೀಪ್ ಅವರು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. ಕಾಳ್ದೋಡೆ’ ಮತ್ತು ‘ಅಗಮಿಸು’ ಹಾಡುಗಳು ಈಗಾಗಲೇ ಹಿಟ್ ಆಗಿ ಜನಮನ ಕದ್ದಿವೆ. ಈ ಎಲ್ಲದರಿಂದಾಗಿ ಯಾರಿಗೆ ಹೇಳ್ಬೇಡಿ ಸಿನಿಮಾ ಈ ಋತುವಿನ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.
ಕಾಮಿಡಿ ಮತ್ತು ಸೆಂಟಿಮೆಂಟ್ ಅಂಶಗಳು ಇರುವ ಈ ಚಿತ್ರವು ಸಿನಿರಸಿಕರಿಗೆ ಮನರಂಜನೆ ನೀಡುತ್ತದೆ ಎಂಬುದು ಚಿತ್ರತಂಡ ಹೇಳುತ್ತಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಪ್ಪಣ್ಣ, ಮತ್ತು ಅಶ್ವಿನಿ ಪೋಲೆಪಳ್ಳಿ (ಅಲಿ) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರತಂಡದ ಪ್ರಕಾರ, “ಪ್ರೇಕ್ಷಕರಿಗೆ ಅತ್ಯುತ್ತಮ ತಾಂತ್ರಿಕ ಅನುಭವ ನೀಡಲು ಕೆಲವು ಅಂತಿಮ ತಾಂತ್ರಿಕ ಕೆಲಸಗಳು ಬಾಕಿ ಇರುವ ಕಾರಣದಿಂದ ಚಿತ್ರ ಬಿಡುಗಡೆ ಮುಂದೂಡಲಾಗಿದೆ“ ಎಂದು ತಿಳಿಸಿದ್ದಾರೆ.