ಶಿಲ್ಲಾ ಶ್ರೀನಿವಾಸ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಸಂಪೂರ್ಣ
ರಾಜೀವ್ ಕೃಷ್ಣ ಗಾಂಧಿ ನಿರ್ದೇಶನದ ಚಿತ್ರ
ರಾಜೀವ್ ಕೃಷ್ಣ ಗಾಂಧಿ ನಿರ್ದೇಶನದಲ್ಲಿ ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನರ್ಮಾಣವಾಗುತ್ತಿರುವ “ಶಿಲ್ಲಾ ಶ್ರೀನಿವಾಸ್” ಚಿತ್ರದ ಮೊದಲ ಹಂತದ ಚಿತ್ರೀಕರಣವು ಮುಗಿದಿದೆ. ಚಿತ್ರದಲ್ಲಿ ಖ್ಯಾತ ನಿರ್ಮಾಪಕರೂ ವಿತರಕರೂ ಪ್ರಸ್ತುತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರೂ ಆದ ಶಿಲ್ಪಾ ಶ್ರೀನಿವಾಸ್ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ.
ವೈಟ್ಫೀಲ್ಡ್, ಹೊಸ ಕೋಟೆ ಹಾಗೂ ಸುತ್ತ ಮುತ್ತ ಪ್ರದೇಶಗಳಲ್ಲಿ ಚಿತ್ರೀಕರಣವಾಗಿದ್ದು, ಸ್ಯಾಂಡಲ್ವುಡ್ಗೆ ಸಂಬಂಧಿಸಿದ ಕಥೆಯನ್ನು ಎಣಿದಿರುವ ಗಾಂಧಿ ಅವರು ಎರಡನೇಯ ಹಂತದ ಚಿತ್ರೀಕರಣ ಮಾಡಲು ತಯಾರಿ ನಡೆಸುತ್ತಿದ್ದಾರೆ.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಿಶೋರ್ ಕಾಸರಗೋಡು, ಪ್ರಿಯಾಂಕ, ಶೋಭರಾಜ್ ಸ್ವಾತಿ ಲಿಂಗರಾಜ್, ಹರ್ಷ, ಸಿ.ಟಿ.ಜಯರಾಮ್, ಹೊಸಕೋಟೆ ಶಿವಕುಮಾರ್, ಲೋಕೇಶ್ ನಟಿಸುತ್ತಿದ್ದಾರೆ.
ಇನ್ನು ಚಿತ್ರಕ್ಕೆ ಅನಿರುದ್ಧ ಶಾಸ್ತಿ ಸಂಗೀತ, ಪ್ರಮೋದ್ ಭಾರತೀಯ ಛಾಯಾಗ್ರಹಣ, ವಿನಯ್ ಜಿ ಆಲೂರ ಸಂಕಲನವಿದೆ.