ಗೌರಿ ಗಣೇಶನಿಗೆ ಪೂಜೆ ಸಲ್ಲಿಸಿ ಪತ್ರಿಕಾಗೋಷ್ಠಿ ಆರಂಭಿಸಿದ ಚಿತ್ರತಂಡ
ವಿನಯ್ ರಾಜ್‌ಕುಮಾರ್ ನಟನೆಯ ಬಹು ನಿರೀಕ್ಷೆ ಮೂಡಿಸಿರುವ “ಅಂದೊಂದಿತ್ತು ಕಾಲ” ಚಿತ್ರವು ಇದೇ ತಿಂಗಳು 29 ರಂದು ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಸೂಪರ್ ಹಿಟ್ ಆಗಿದ್ದು, ಮೂರನೇ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತ್ತು.
“ಮಹಾರಾಜ ಹಾಗೆಂದು.. ಮನಸಾರೆ ಹಾರೈಸಿದೆ ನೀನಮ್ಮ“…. ಎಂಬ ತಾಯಿ ಮಗನ ಬಾಂಧವ್ಯದ ಮನಮುಟ್ಟುವ ಹಾಡು ಬಿಡುಗಡೆ ಆಗಿದ್ದು, ತಾಯಿ-ಮಗನ ಪ್ಯಾತೋ ಸಾಂಗ್ ಇದಾಗಿದ್ದು, ಮದರ್ ಆ್ಯಂತಮ್ ಎಂದೇ ಹೇಳಬಹುದು. ಕೆಜಿಎಫ್ ಖ್ಯಾತಿಯ ಕಿನ್ನಾಲ್ ರಾಜ್ ಸಾಹಿತ್ಯ ಬರೆದಿರುವ ಈ ಹಾಡನ್ನು ಸುನಿಲ್ ಕಶ್ಯಪ್ ಹಾಡಿದ್ದಾರೆ.

ನಟ ವಿನಯ್ ರಾಜಕುಮಾರ್ ಮೊದಲು ಮಾತನಾಡುತ್ತಾ “ನನ್ನ ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರ ಬಹಳ ವಿಶೇಷ. ಈ ಚಿತ್ರದ ಒಂದೊಂದು ಹಾಡು ಬಹಳ ವಿಭಿನ್ನವಾಗಿದ್ದು, ಈ ಅಮ್ಮ ಮಗನ ಸೆಂಟಿಮೆಂಟ್ ಸಾಂಗ್ ಬಹಳ ಮನಸನ್ನ ಸೆಳೆಯುತ್ತದೆ. ಇದೊಂದು ನಿರ್ದೇಶಕನ ಲೈಫ್ ಜರ್ನಿ, ಕೀರ್ತಿ ಅವರ ಲೈಫ್ ನಲ್ಲಿ ನಡೆದ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.
ನನ್ನದು ಮೂರು ಶೇಡ್ ಗಳಲ್ಲಿ ಒಳಗೊಂಡಿರುವತಹ ಪಾತ್ರ ಬರುತ್ತದೆ. ನನ್ನ ಅಮ್ಮನಾಗಿ ಅರುಣಾ ಬಾಲರಾಜ್ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ನನ್ನ ಮೂರನೇ ಚಿತ್ರ ಇದಾಗಿದೆ. ಎಲ್ಲಾ ವರ್ಗದವರಿಗೂ ಇಷ್ಟವಾಗುವಂತ ಕಥೆ ಒಳಗೊಂಡಿದೆ, ನಿಮ್ಮೆಲ್ಲರ ಬೆಂಬಲ ನಮ್ಮ ಚಿತ್ರಕ್ಕೆ ಬೇಕು“ ಎಂದರು.
ನಟಿ ಅದಿತಿ ಪ್ರಭುದೇವ್ ಮಾತನಾಡುತ್ತಾ “ಇಂದು ಬಿಡುಗಡೆಯಾಗಿರುವ ಅಮ್ಮ ಮಗನ ಈ ಹಾಡು ನನಗೆ ತುಂಬಾ ಇಷ್ಟ. ಬಹಳ ಅರ್ಥಗರ್ಭಿತವಾದ ಸಾಲುಗಳು ಈ ಹಾಡಿನಲ್ಲಿದೆ. ಪ್ರತಿ ತಾಯಿಯು ತನ್ನ ಮಗು ರಾಜನಂತೆ ಬದುಕಬೇಕೆಂದು ಆಸೆ ಪಡುವುದು ಸಹಜವೇ ಅದರಂತೆ ಈ ಹಾಡು ಬಹಳ ಸೊಗಸಾಗಿ ಮೂಡಿ ಬಂದಿದೆ. ಪ್ರತಿಯೊಬ್ಬ ಪ್ರೇಕ್ಷಕರಿಗೂ ಈ ಚಿತ್ರ ಕನೆಕ್ಟ್ ಆಗುತ್ತೆ” ಎಂದರು.
ನಿರ್ಮಾಪಕ ಭುವನ್ ಸುರೇಶ್ ಮಾತನಾಡುತ್ತಾ “ನಮ್ಮ ಚಿತ್ರ ಇದೆ 29ರಂದು ಸುಮಾರು 180ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿತರಕ ಜಗದೀಶ್ ಫಿಲ್ಮ್ಸ್ ಮೂಲಕ ನಮ್ಮ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದ್ದೇವೆ.
ಈ ಗೌರಿ ಗಣೇಶ ಹಬ್ಬಕ್ಕೆ ಹೋಳಿಗೆಯ ಹಬ್ಬದೂಟವನ್ನೇ ವೀಕ್ಷಕರಿಗೆ ನೀಡುತ್ತಿದ್ದೇವೆ. ಇದು ಒಬ್ಬ ನಿರ್ದೇಶಕನ ಬದುಕಿನ ಸುತ್ತ ನಡೆಯುವ ಕಥೆಯಾಗಿದೆ. ನಾನು ಕೂಡ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಖಂಡಿತ ನಮ್ಮ ಚಿತ್ರ ಎಲ್ಲರಿಗೂ ಇಷ್ಟ ಆಗುತ್ತೆ. ನೀವೆಲ್ಲರೂ ನೋಡಿ ಪ್ರೋತ್ಸಾಹಿಸಿ“ ಎಂದರು.
ನಿರ್ದೇಶಕ ಕೀರ್ತಿ ಕೃಷ್ಣಪ್ಪ ಮಾತನಾಡುತ್ತಾ “ಇದು ಮೂರು ವರ್ಷದ ಪ್ರಯತ್ನವಾಗಿದ್ದು, ಒಂದಿಷ್ಟು ಜನರ ಲೈಫ್ ಈ ಚಿತ್ರದ ಮೇಲಿದೆ. ನನ್ನ ಮೊದಲ ಚಿತ್ರದಲ್ಲಿ ನಿರ್ದೇಶಕರ ಬದುಕಿನ ಸುತ್ತ ಮಾಡಿರುವುದು ನನಗೆ ಹೆಮ್ಮೆಯಾಗಿದೆ.
ಇದರಲ್ಲಿ ಲವ್ , ಫ್ರೆಂಡ್ ಶಿಪ್ , ಸೆಂಟಿಮೆಂಟ್ ಎಲ್ಲವೂ ಇದೆ. ಅದರಲ್ಲೂ ಎಮೋಷನ್ ಜನರಿಗೆ ತಲುಪುತ್ತದೆ ಎಂದು ಹೇಳಬಹುದು. ನಾನು ಹೇಗೆ ಅಂದುಕೊಂಡಿದ್ದೆನೋ ಅದೇ ರೀತಿ ನನ್ನ ಚಿತ್ರ ಬಂದಿದೆ. ನಿರ್ಮಾಪಕರು ನನಗೆ ಬಹಳ ಸಹಕಾರವನ್ನು ನೀಡಿದ್ದಾರೆ. ಇದೇ 29ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ನೀವೆಲ್ಲರೂ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಯಶಸ್ವಿಗೊಳಿಸಿ“ ಎಂದು ಕೇಳಿಕೊಂಡರು.
ತಾಯಿ ಪಾತ್ರವನ್ನು ಮಾಡಿರುವ ಅರುಣಾ ಬಾಲರಾಜ್ ಮಾತನಾಡುತ್ತಾ “ನಮ್ಮ ಚಿತ್ರದ ಲಿರಿಕಲ್ ಹಾಡು ನನಗೆ ಬಹಳ ಇಷ್ಟ ನನಗೆ ಗೊತ್ತಿರಲಿಲ್ಲ ಈಗಲೇ ನಾನು ನಿಮ್ಮ ಜೊತೆ ಹಾಡನ್ನು ನೋಡಿದ್ದು ಹಾರ್ಟ್ ಗೆ ಹತ್ತಿರವಾಗುತ್ತಿದೆ. ಇದನ್ನು ಸಿನಿಮಾದಲ್ಲಿ ನೋಡಿದಾಗ ಇನ್ನೂ ಆಪ್ತವಾಗಿದೆ. ಮಗನನ್ನು ಆಶೀರ್ವಾದ ಮಾಡಿ ಕಳಿಸಿದ ಮೇಲೆ ಹೇಗೆ ಹೆಸರು ಮಾಡುತ್ತಾನೆ ಎಂಬುದರ ಮೇಲೆ ಕಥೆ ಇದೆ.
ವಿನಯ್ ಜೊತೆ ಮೂರು ಸಿನಿಮಾ ಮಾಡಿದ್ದು, ಮೂರು ವಿಭಿನ್ನ ಪಾತ್ರ ಸಿಕ್ಕಿದ್ದವು. ತಾಯಿ ತಾನು ಕಷ್ಟ ಪಟ್ಟರು ಮಕ್ಕಳಿಗೆ ಸಾಧನೆ ಮಾಡಲು ಕಳಿಸಲು ಏನೆಲ್ಲಾ ಶ್ರಮ ಪಡುತ್ತಾಳೆ ಎಂಬುದನ್ನು ಕೂಡ ನೋಡಬಹುದು“ ಎಂದರು.
ಚಿತ್ರದಲ್ಲಿ ನಾಯಕನ ಗೆಳೆಯನ ಪಾತ್ರ ಮಾಡಿರುವ ಜಗ್ಗಪ್ಪ, ನೃತ್ಯ ನಿರ್ದೇಶಕ ರಘು ಮಾಸ್ಟರ್ ಛಾಯಾಗ್ರಹಕ ಅಭಿಷೇಕ್ .ಜಿ. ಕಾಸರಗೋಡು ಸೇರಿದಂತೆ ಬಾಲ ಪ್ರತಿಭೆಗಳು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಚಿತ್ರದಲ್ಲಿ ಪ್ರಮುಖ ಅತಿಥಿ ಪಾತ್ರ ಒಂದರಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅಭಿನಯಿಸಿದ್ದಾರೆ.
ಹಾಗೇ ನಟಿ ನಿಶಾ ರವಿಕೃಷ್ಣನ್ ಸೇರಿದಂತೆ ಹಲವು ಪಾತ್ರಧಾರಿಗಳು ಕಾಣಿಸಿಕೊಂಡಿದ್ದು,
ಭುವನ್ ಸಿನಿಮಾಸ್ ಭುವನ್ ಸುರೇಶ್ ನಿರ್ಮಾಣದಲ್ಲಿ ಕೀರ್ತಿ ಕೃಷ್ಣಪ್ಪ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಾಘವೇಂದ್ರ. ವಿ ಸಂಗೀತ ನಿರ್ದೇಶನ , ಎ. ಆರ್. ಕೃಷ್ಣ , ಸುರೇಶ್ ಆರ್ಮುಗಂ ಸಂಕಲನ , ರವಿವರ್ಮ ಸಾಹಸ , ಸುಮಂತ್ ಸಿನಿಮಾ ಪ್ರಚಾರ ನಿಭಾಯಿಸಿದ್ದಾರೆ.