ಅಭಿಮಾಗಳಿಂದ ಶ್ರೀಕಂಠ ನವರ ಹುಟ್ಟುಹಬ್ಬ ಆಚರಣೆ

0
20251127_084039

ಕನಕಪುರದ ಸಾತನೂರು ಹೋಬಳಿಯ ಹೊನ್ನಗನಹಳ್ಳಿಯ ಹೆಚ್ ಕೆ ಶ್ರೀಕಂಠರವರು ಸಮಾಜಸೇವೆಯಿಂದಲ್ಲೇ ಚಿರಪರಿಚಿತರಾಗಿದ್ದಾರೆ.
ಕೆ ಪಿ ಸಿ ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಗ್ರಾಮ ವಿದ್ಯಾ ಪ್ರಚಾರಕ ಸಂಘ(ಕನಕಪುರ)ದ ಅಧ್ಯಕ್ಷರು ಆಗಿರುವ ಶ್ರೀಕಂಠ ಅವರ ಹುಟ್ಟು ಹಬ್ಬದ ದಿನದಂದು ಪ್ರತಿವರ್ಷ ಅನೇಕ ಸಮಾಜಮುಖಿ ಕೆಲಸಗಳು ನಡೆಯುತ್ತವೆ.

ಕನಕಾಂಬರಿ ಮಹಿಳಾ ಒಕ್ಕೂಟ ಹಾಗೂ ಆರ್ ಇ ಎಸ್ ಅಧ್ಯಕ್ಷರಾಗಿರುವ ಶ್ರೀಕಂಠ ಅವರ ಹುಟ್ಟು ಹಬ್ಬ(ನವೆಂಬರ್ 24)ದಂದು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಕೇಕ್ ಕತ್ತರಿಸುವ ಮೂಲಕ ಶ್ರೀಕಂಠ ಅವರ 66ನೇ ಹುಟ್ಟು ಹಬ್ಬವನ್ನು ಸಂಭ್ರಮಿಸಿದರು.

ಹಾಗೇಯೇ ಕನಕಪುರದಲ್ಲಿ ದೂಂತೂರು ಮಾರೇಗೌಡ ಸ್ಮಾರಕದಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟದಿಂದ ಅತಿ ಹೆಚ್ಚು ಅಂಕ ಪಡೆದ 159 ವಿದ್ಯಾರ್ಥಿಗಳಿಗೆ 6 ಲಕ್ಷ ವಿದ್ಯಾರ್ಥಿ ವೇತನದ ಚೆಕ್‌ನ್ನು ಶ್ರೀಕಂಠ ಅವರ ಪುತ್ರ ವರುಣ್ ಹಾಗೂ ಸೂಸೆಯಾದ ಪನ್ನಗ ಅವರು ನೀಡಿದರು.

ಆರ್ ಇ ಎಸ್ ನ ಪುಟ್ಟಸ್ವಾಮಿಗೌಡ, ಸೂರ್ಯನಾರಾಯಣ ಗೌಡ, ಕೆ ಬಿ ನಾಗರಾಜು, ಮಂಜುನಾಥ್, ಎಂ ಟಿ ಬಾಲಕೃಷ್ಣ ಹಾಗೂ ಕೃಷಿ ಕಾಲೇಜಿನ ಡಿನ್. ಸಿದ್ದರಾಮೇಗೌಡ ಅವರು ಮಾತನಾಡಿ ಶ್ರೀಕಂಠ ಅವರು ಬಂದ ಮೇಲೆ ಆರ್ ಇ ಎಸ್ ಶೈಕ್ಷಣಿಕವಾಗಿ ಹಾಗೂ ಆಡಳಿತ್ಮಾಕವಾಗಿ ಸುಧಾರಿಸುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಾಯಾಣ್ಣ ಮಾತನಾಡಿ ನಮ್ಮ ಈ ಒಕ್ಕೂಟದಿಂದ ಅನೇಕ ಯೋಜನೆಗಳು ಜಾರಿ ಆಗಿದ್ದು, ಇದರಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ ಜೀವನವನ್ನು ಮಾಡುತ್ತಿದ್ದಾರೆ ಎನ್ನುತ್ತ ಪ್ರತಿವರ್ಷ ಶ್ರೀಕಂಠಣ್ಣನವರ ಹುಟ್ಟುಹಬ್ಬದ ದಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರ ನೀಡುತ್ತ ಬಂದಿದ್ದೇವೆ ಎಂದರು.

ಇನ್ನೂ ಈ ಕಾರ್ಯಕ್ರಮದಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟದ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಶ್ರೀಕಂಠ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶ್ರೀಕಂಠಣ್ಣನವರ ಅಭಿಮಾನಿಗಳು ಕನಕಪುರ ಹಾಗೂ ಸಾತನೂರಿನಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.

Share

Leave a Reply

Your email address will not be published. Required fields are marked *