ಮುಹೂರ್ತ ನೆರೆವೇರಿಸಿದ ಆಕಾಲ

0
20251012_132302

ಬೆಂಗಳೂರಿನ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ “ಅಕಾಲ” ಚಿತ್ರದ ಮುಹೂರ್ತ ನೆರೆವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಬಾ ಮಾ ಗೀರೀಶ್ ಕ್ಲಾಪ್ ಮಾಡಿ ಚಿತ್ರಕ್ಕೆ ಶುಭಕೋರಿದ್ದರು.

ಅಕಾಲ ಮಾಚಯ್ಯ ಭವನ್ ಆ್ಯಕ್ಷನ್ ಹೇಳುತ್ತಿದ್ದು, ಆಕಾಲ ಎಂದರೇ ಕೆಟ್ಟಘಳಿಗೆ ಎಂದರ್ಥ, 2016ರಿಂದ 19ರ ಕಾಲಘಟ್ಟದಲ್ಲಿ ಟ್ರಾವೆಲಿಂಗ್‌ನಲ್ಲಿ ನಡೆಯುವ ಕಥೆ ಇದಾಗಿದ್ದು. ಚಿತ್ರದ ನಾಯಕ ಅದೇ ಹೆಸರನ್ನಿಟ್ಟುಕೊಂಡು ಏನೆಲ್ಲ ಮಾಡುತ್ತಾನೆ ಎಂಬುದು ಚಿತ್ರದ ಒಂದು ಲೈನ್ ಸ್ಟೋರಿ. ಮೈಸೂರಿನಿಂದ ಗದಗ ವರೆಗೆ ಸುಮಾರು 60 ದಿನಗಳ ಕಾಲ 4 ಹಂತಗಳಲ್ಲಿ ಶೂಟಿಂಗ್ ನಡೆಸುವ ಯೋಜನೆಯನ್ನು ಮಾಡಿಕೊಂಡಿದ್ದೇವೆ ಎಂದು ನಿರ್ದೇಶಕರು ಹೇಳಿದರು.

ಆಕಾಲ ಪಾತ್ರದಲ್ಲಿ ನಾಗೇಂದ್ರ ಅರಸ್ ನಟಿಸುತ್ತಿದ್ದು, ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕರು ಮೊದಲು ಹಾಸ್ಯ ಚಿತ್ರ ಮಾಡಬೇಕೆಂದು ನನ್ನ ಬಳಿ ಬಂದಿದ್ದರು, ಆ ಚಿತ್ರ ಹೋಗಿ ಈ ಚಿತ್ರ ಮಾಡುತ್ತಿದ್ದೇವೆ ಹಾಗೂ ಈ ಚಿತ್ರಕ್ಕೆ ಎಡಿಟಿಂಗ್ ಕೂಡ ನಾನೇ ಮಾಡುತ್ತಿದ್ದೇನೆ ಎಂದರು.

ಚಿತ್ರದ ನಿರ್ಮಾಪಕ ಅಣ್ಣಯ್ಯ ಮಾತನಾಡುತ್ತ ನನಗೆ ಮೊದಲಿಂದಲೂ ಸಿನಿಮಾ ಬಗ್ಗೆ ಆಸಕ್ತಿ. ಈ ಕಥೆ ಕೇಳಿದಾಗ ತುಂಬಾ ಇಷ್ಟವಾಯ್ತು. ನಾವೇ ಏಕೆ ನಿರ್ಮಾಣ ಮಾಡಬಾರದು ಅಂತ ಯೋಚಿಸಿ ಬಂಡವಾಳ ಹಾಕಲು ಒಪ್ಪಿದೆ. ಬಜೆಟ್ ಬಗ್ಗೆ ಇನ್ನೂ ಯೋಚಿಸಿಲ್ಲ. ನಾರ್ಮಲ್ ಬಜೆಟ್ ಅಲ್ಲಿ ಮಾಡೋ ಪ್ಲಾನಿದೆಎಂದರು.

ನಿಮ್ಮೂರು, ಕಠೋರ, ಜನತಾ ಬಜಾರ್ ಹಾಗೂ #19 ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಲಕ್ಕಿರಾಮ್ ಅಕಾಲ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಾಯಕಿಯಾಗಿ ಪ್ರಿಯಾಂಕ ನಟಿಸುತ್ತಿದ್ದಾರೆ. ಪ್ರದೀಪ್ ಚಿತ್ರಕ್ಕೆ ಛಾಯಗ್ರಾಹಕರಾಗಿದ್ದಾರೆ.

Share

Leave a Reply

Your email address will not be published. Required fields are marked *