ಸೆಟ್ಟೇರಿದ ಆಸ್ಕರ್ ಕೃಷ್ಣ ನಿರ್ದೇಶನದ ಕುಡುಕ ನನ್ಮಕ್ಳು
ಕೃಷ್ಣ ಅವರ ಮೊದಲ ಸಿನಿಮಾ”ಆಸ್ಕರ್” ಆಗಿದ್ದು, ಈ ಚಿತ್ರದಲ್ಲಿ ನಿರ್ದೇಶನದ ಜತೆ ನಟನೆ ಕೂಡ ಮಾಡಿದರು ಅಂದಿನಿಂದ ಇವರನ್ನು ಆಸ್ಕರ್ ಕೃಷ್ಣ ಎಂದು ಕರೆಯಲಾಗುತ್ತಿದೆ. ಇದೀಗ ಕೃಷ್ಣ ಅವರು “ಕುಡುಕ ನನ್ಮಕ್ಳು” ಎಂಬ ವಿಭಿನ್ನ ಶೀರ್ಷಿಕೆಯನ್ನು ಇಟ್ಟುಕೊಂಡು ಚಿತ್ರವನ್ನು ಮಾಡುತ್ತಿದ್ದಾರೆ.
ಚಿತ್ರದ ಮೂಹೂರ್ತ ಜ್ಞಾನ ಭಾರತೀಯ ಶ್ರೀ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷರಾದ ಪಿ.ಮೂರ್ತಿ ಕ್ಯಾಮಾರ ಸ್ವಿಚ್ ಆನ್ ಮಾಡುವುದರ ಮೂಲಕ ತಂಡಕ್ಕೆ ಶುಭ ಹಾರೈಸಿದರು.
ಹಿರಿಯ ಸಂಗೀತ ಸಂಯೋಜಕ,ನಟ ಹಾಗೂ ನಿರ್ದೇಶಕ ವಿ.ಮನೋಹರ್ ಕಾರ್ಯಕ್ರಮಕ್ಕೆ ಬಂದು ಚಿತ್ರತಂಡಕ್ಕೆ ಶುಭಕೋರಿದ್ದರು.
ಚಿತ್ರದಲ್ಲಿ ನಾಯಕರಾಗಿ ಮಜಾಭಾರತ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ಮಿಮಿಕ್ರಿ ಗೋಪಿ ಮತ್ತು ಸಚಿನ್ ಪುರೋಹಿತ್ ನಟಿಸುತ್ತಿದ್ದಾರೆ, ಹಾಗೇಯೇ ಪ್ರಮುಖ ಪಾತ್ರದಲ್ಲಿ ಇಡೀ ಚಿತ್ರದ ಹೈಲೈಟ್ ಎಂಬುವಂತೆ ಆಕರ್ಷಕ ರೋಲ್ನಲ್ಲಿ ಚೈತ್ರಾ ಕೊಟ್ಟೂರು, ಹಾಗೂ ಉಳಿದಂತೆ ಲಯಾ ಕೋಕಿಲ, ಧರಣಿ, ನಿಸರ್ಗ ಮಂಜುನಾಥ್, ಪ್ರಿಯಾಂಕ, ಮಮತಾ ಮುಂತಾದವರು ನಟಿಸುತ್ತಿದ್ದಾರೆ.
ಸಾಹಿತ್ಯ ಮತ್ತು ಸಂಗೀತ ಮಂಜುಕವಿ, ಛಾಯಾಗ್ರಹಣ ವಿನಯ್ ಗೌಡ. ಸಂಕಲನ ಅಯುರ್, ರಿಯಾಲಿಟಿ ಷೋಗಳಿಗೆ ಕಾಮಿಡಿ ಡೈಲಾಗ್ ಬರೆಯುತ್ತಿರುವ ವೆಂಕಟ್ ಚಿತ್ರಕಥೆ ಅಲ್ಲದೆ ನಗು ಉಕ್ಕಿಸುವ ಪದಗಳನ್ನು ಪೋಣಿಸುತ್ತಿದ್ದಾರೆ. ಸಾಹಸ ವೈಲೆಂಟ್ ವೇಲು ಅವರದ್ದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಕೃಷ್ಣ ಅವರು “ಕುಡಿತದಿಂದ ದೈಹಿಕವಾಗಿ, ಮಾನಸಿಕವಾಗಿ, ಕೌಟಂಬಿಕವಾಗಿ ಹಾಗೂ ಸಾಮಾಜಿಕವಾಗಿ ಯಾವ ರೀತಿ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ತೋರಿಸುವುರ ಜತೆಗೆ ಅರ್ಥಪೂರ್ಣ ಸಂದೇಶವನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಇತರೆ ಸುಂದರ ತಾಣಗಳಲ್ಲಿ ಜನವರಿ ಎರಡರಿಂದ ಶೂಟಿಂಗ್ಗೆ ತೆರೆಳಲು ಯೋಜನೆ ಮಾಡಲಾಗಿದೆ“ ಎಂದರು.

ಸಮಾನ ಸಿನಿಮಾ ಮೋಹಿಗಳಾದ ಅರುಣ ಶೆಟ್ಟಿ, ವೈಶಾಲಿ ಮುರಳೀಧರ್ ಕೊಟ್ಟೂರು, ಪಲ್ಲವಿ ಅರುಣ್ ಅಗ್ನಿಹೋತ್ರಿ, ಎಸ್.ಹೆಚ್.ಬಾಬು ತುಮಕೂರು, ನಿಂಗರಾಜು.ಬಿ, ಲೋಕೇಶ್.ಎಸ್, ಸಿದ್ದಲಿಂಗಯ್ಯ ಮತ್ತು ರವೀಂದ್ರ ನಾಯಕ್ ಜಂಟಿಯಾಗಿ ಕಲಾ ಭೂಮಿ ಕಂಬೈನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿರುವುದು ಹೊಸ ಅನುಭವ. ಇದರಲ್ಲಿ ಒಂದಷ್ಟು ನಿರ್ಮಾಪಕರು ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಸಾಹಿತ್ಯ ಮತ್ತು ಸಂಗೀತ ಮಂಜುಕವಿ, ಛಾಯಾಗ್ರಹಣ ವಿನಯ್ ಗೌಡ. ಸಂಕಲನ ಅಯುರ್, ರಿಯಾಲಿಟಿ ಷೋಗಳಿಗೆ ಕಾಮಿಡಿ ಡೈಲಾಗ್ ಬರೆಯುತ್ತಿರುವ ವೆಂಕಟ್ ಚಿತ್ರಕಥೆ ಅಲ್ಲದೆ ನಗು ಉಕ್ಕಿಸುವ ಪದಗಳನ್ನು ಪೋಣಿಸುತ್ತಿದ್ದಾರೆ