“ಕವಳ” ಟೈಟಲ್ ಪೋಸ್ಟರ್ ರಿಲೀಸ್

0
20260217_141847.jpg

ರಾಧಕೃಷ್ಣ ಆರ್ಟ್ಸ್ ಹಾಗೂ ಡ್ರೀಮ್ ವರ್ಲ್ಡ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮಾಸ್ ಜತೆ ಆ್ಯಕ್ಷನ್ ಕಟೆಂಟ್ ಇರುವ ಚಿತ್ರದ ಟೈಟಲ್ ಪೋಸ್ಟರ್ ನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಶಿವರಾತ್ರಿಯ ಶುಭ ದಿನದಂದು ಬಿಡುಗಡೆ ಮಾಡಿದ್ದಾರೆ.

ಚಿತ್ರಕ್ಕೆ “ಕವಳ” ಎಂಬ ಹೆಸರಿಡಲಾಗಿದೆ. ಕವಳ ಎಂದರೆ ಭಿಕ್ಷೆ ಎಂದು, ಚಿತ್ರದ ಕಥೆಗೆ ಈ ಟೈಟಲ್ ಎಷ್ಟು ಸೂಕ್ತ ಎಂಬುದನ್ನು ಚಿತ್ರದ ಮುಹೂರ್ತದ ದಿನ ಉತ್ತರ ಹಳುತ್ತೇನೆ ಎಂದು ನಿರ್ದೇಶಕ ಶ್ರೀ ಜೈ ಎಂದರು.

ಈ ಹಿಂದೆ ಆರ್.ಎಕ್ಸ್.ಸೂರಿ, ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀ ಜೈ ಕಥೆ,ಚಿತ್ರಕಥೆ ಬರೆದು ಕವಳಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕವಳ ಚಿತ್ರದ ಮುಹೂರ್ತ ಇದೇ ತಿಂಗಳು ೨೬ರಂದು ಅದ್ದೂರಿಯಾಗಿ ನೆರವೇರಲ್ಲಿದೆ,

ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಶಿವಣ್ಣ..ಇವತ್ತು ಶಿವರಾತ್ರಿ ಹಬ್ಬ, ಈ ಚಿತ್ರದ ಟೈಟಲ್ ತುಂಬಾ ಆಕರ್ಷಕವಾಗಿದೆ. ನಿರ್ದೇಶಕರ ಹಿಂದಿನ ಸಿನಿಮಾ ನೋಡಿದ್ದೇನೆ, ಚಿತ್ರ ಚೆನ್ನಾಗಿ ಮೂಡಿಬರಲಿ ಎಂದು ಶುಭ ಹಾರೈಸಿದ್ದಾರೆ.

ಚಿತ್ರದ ಪೋಸ್ಟರ್ ವಿಬಿನ್ನವಾಗಿದ್ದು, ನೀಲ ವರ್ಣದ, ರುದ್ರಾಕ್ಷಿ ಧರಿಸಿದ ಕೈಯಲ್ಲಿ ಮಚ್ಚು ಕೊಟ್ಟಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ನಾಯಕನಾಗಿ ಸಂದೀಪ್ ನಾಗರಾಜ್ ನಟಿಸುತ್ತಿದ್ದು, ಪ್ರಮುಖ ಪಾತ್ರಗಳಲ್ಲಿ ಹಿರಿಯ ನಟರಾದ ಅಚ್ಯುತ್ ಕುಮಾರ್, ರಂಗಾಯಣ ರಘು, ನಾಜರ್, ಈಶ್ವರಿರಾವ್, ಬಲ ರಾಜವಾಡಿ, ಕಿಶೋರ್, ಶ್ರವಣ್,ಗಿಲ್ಲಿ, ಪ್ರಕಾಶ್ ತುಮ್ಮಿನಾಡ್ ಅಭಿನಯಿಸುತ್ತಿದ್ದಾರೆ.

ಚಿತ್ರಕ್ಕೆ ಚಿತ್ರಕ್ಕೆ ಎ.ಕರುಣಾಕರನ್ ಅವರ ಛಾಯಾಗ್ರಹಣ, ಕೆಕೆ.ಸೆಂಥಿಲ್ ಪ್ರಸಾದ್ ಅವರ ಸಂಗೀತ, ಅರ್ಜುನ್ ರಾಜ್, ವಿಕ್ರಮ್ ಮೋರ್ ಅವರ ಸಾಹಸ, ಕಲೈ, ಮುರಳಿ ಅವರ ನೃತ್ಯ, ದೀಪು ಎಸ್.ಕುಮಾರ್ ಅವರ ಸಂಕಲನವಿದೆ.

Share

Leave a Reply

Your email address will not be published. Required fields are marked *